May 30, 2023

Bhavana Tv

Its Your Channel

ಗ್ರಾಮ ಪಂಚಾಯತಿ ಅಧಿಕಾರಿಗಳಿಂದ ಕೊರೋನಾ ವೈರಸ್ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಯಿತು

ಕೃಷ್ಣರಾಜಪೇಟೆ ತಾಲ್ಲೂಕಿನ ಕಿಕ್ಕೇರಿ ಪಟ್ಟಣದಲ್ಲಿ ಗ್ರಾಮ ಪಂಚಾಯತಿ ಅಧಿಕಾರಿಗಳ ತಂಡ ಕೊರೋನಾ ವೈರಸ್ ಬಗ್ಗೆ ಕರ ಪತ್ರ ಹಂಚಿ ಪ್ರತಿ ಅಂಗಡಿ ಮತ್ತು ಬೇಕರಿ, ಹಾಗೂ ಹೋಟೆಲ್ ಗಳಿಗೆ ತೆರಳಿ‌ ಸ್ವಚ್ಚತೆ ಕಾಪಾಡಿಕೊಳ್ಳುವಂತೆ ತಿಳಿಸುದರು.

ನಂತರ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಕೆಂಪೇಗೌಡರು ಮಾತನಾಡಿ ಹೋಟೆಲ್ ಹಾಗೂ ಟೀ ಅಂಗಡಿಗಳಲ್ಲಿ ಸ್ವಚ್ಚತೆ ಕಾಪಾಡಿಕೊಂಡು ಸಾರ್ವಜನಿಕರನ್ನು ಗುಂಪು ಗುಂಪಾಗಿ ನಿಲ್ಲಬಾರದು ಹೊಟೇಲ್ ಗಳಲ್ಲಿ ಊಟಗಳನ್ನು ಪಾರ್ಸಲ್ ನೀಡಿ ಇಲ್ಲವಾದರೆ ಎಲ್ಲಾ ಅಂಗಡಿಗಳನ್ನು ಮುಚ್ಚುಸಲಾಗುವುದು ಎಂದು ಎಚ್ಚರಿಗೆ ನೀಡಿದರು.. ಕೊರೋನ ವೈರಸ್ ತಡೆಗಟ್ಟಲು ಸಾರ್ವಜನಿಕರ ಸಹಕಾರದ ಅಮೂಲ್ಯವಾದುದ್ದು ಸಾರ್ವಜನಿಕರು ಗ್ರಾಮ ಪಂಚಾಯತಿಯೊಂದಿಗೆ ಸಹಕರಿಸುವಂತೆ ಮನವಿ ಮಾಡಿದರು..

ಅಲ್ಲದೆ ಕಿಕ್ಕೇರಿ ಗ್ರಾಮ ಪಂಚಾಯಿತಿ ಕಾರ್ಯನಿರ್ವಾಹಣಾದಿಕಾರಿ ಮಧು ಕುಮಾರ್ ಮಾತನಾಡಿ ಈಗಾಗಲೇ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಮಟನ್ ಹಾಗೂ ಚಿಕನ್ ಅಂಗಡಿಗಳನ್ನು ಮುಚ್ಚಿಸಲಾಗಿದ್ದು ಅಲ್ಲದೆ ಪಟ್ಟಣದಲ್ಲಿ ಸ್ವಚ್ಚತೆ ಕಾಪಾಡಿಕೊಂಡು ಆರೋಗ್ಯವನ್ನು ಕಾಪಾಡಿಕೊಳ್ಳುವುದರ ಜೊತೆಗೆ ತಮ್ಮ ತಮ್ಮ ಆರೋಗ್ಯವನ್ನು ಕಾಪಾಡಿಕೊಂಡು ಕೊರೋನಾ ವೈರಸ್ ಬಗ್ಗೆ ಎಚ್ಚರಿಕೆ ವಯಿಸುವಂತೆ ತಿಳಿಸಿದರು.

ಇದೇ ಸಂರ್ಭದಲ್ಲಿ ಗ್ರಾಮ ಪಂಚಾಯತಿಯ ಬಿಲ್ ಕಲೆಕ್ಟರ್ ರಾಮೇಗೌಡ್ರ, ಕಂಪ್ಯೂಟರ್ ಆಪರೇಟರ್ ಶ್ರೀಕಾಂತ್ ಸೇರಿಂದತೆ ಎಲ್ಲಾ ಸಿಬ್ಬಂದಿ ವರ್ಗದವರು ಇದ್ದರು..

About Post Author

error: