February 13, 2025

Bhavana Tv

Its Your Channel

ಮನೆಯೊಂದಲ್ಲಿ ಹಾಡಹಗಲೇ ಹೊಂಚು ಹಾಕಿ ಮಾಂಗಲ್ಯ ಸರ ನಗದು ದೋಚಿ ಪಾರಾರಿ

ಭಟ್ಕಳ : ಮನೆಯೊಂದಲ್ಲಿ ಹಾಡಹಗಲೇ ಹಂಚು ಹಾಕಿ ಮಾಂಗಲ್ಯ ಸರ ಹಾಗೂ ಇತರೆ ಚಿನ್ನಾಭರಣ, ನಗದು ದೋಚಿ ಪಾರಾರಿಯಾದ ಘಟನೆ ತಾಲೂಕಿನ ಗೊರಟೆಯಲ್ಲಿ ಸೋಮವಾರ ನಡೆದಿದೆ.

ರಾಮಕ್ರಷ್ಣ ಖಾರ್ವಿ ಎನ್ನುವವರು ತೀವ್ರ ಬಡ ಕುಟುಂಬದವವರಾಗಿದ್ದು ತನ್ನ ಮಗಳನ್ನು ಅಜ್ಜಿಮನೆಯಿಂದ ಕರೆದುಕೊಂಡು ಹೋಗಲು ಹೋದ ಸಂದರ್ಭದಲ್ಲಿ ಮನೆಯಲ್ಲಿ ಯಾರೂ ಇಲ್ಲದನ್ನು ಗಮನಿಸಿದ ಖದೀಮರು ಮನೆಯ ಹಿಂಬದಿಯಲಿ ಮನೆಯ ಹಂಚನ್ನು ತೆಗೆದು ಒಲಗೆ ಪ್ರವೇಶಿಸಿ ಮನೆ ಕೋಣೆಯಲ್ಲಿದ್ದ ಕಪಾಟನ್ನು ಮುರಿದು 45 ಗ್ರಾಂ ಚಿನ್ನದ ಮಾಂಗಲ್ಯ ಸರ, 2 ಎ.ಟಿ.ಎಂ, 3 ಎಲ್.ಐ. ಸಿ ಬಾಂಡ್, ಪಾನ್ ಕಾರ್ಡ್ ಹಾಗೂ ನಗದು ದೋಚಿ ಪರಾರಿಯಾಗಿದ್ದಾರೆ.ನಂತರ ಮನೆಗೆ ಬಂದು ನೋಡಿದ ಮನೆ ಮಾಲೀಕರು ಗಾಬರಿಗೊಂಡು ಕಳ್ಳತನವಾಗಿರುದನ್ನು ಗಮನಿಸಿ ಗ್ರಾಮೀಣ ಠಾಣೆ ಪೊಲೀಸರಿಗೆ ಕರೆ ಮಾಡಿ ದೂರು ದಾಖಲಿಸಿದ್ದಾರೆ

ಈ ಕುರಿತು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ

error: