April 20, 2024

Bhavana Tv

Its Your Channel

ಭಟ್ಕಳದಲ್ಲಿ ಸೋಮವಾರ ಸಂಜೆ ತರಕಾರಿ ಹಾಗೂ ದಿನ ನಿತ್ಯ ಬಳಸುವ ದಿನಸಿ ಸಾಮಾನು ಖರೀದಿಸಲು ಮುಗಿಬಿದ್ದಿ ಸಾರ್ವಜನಿಕರು

ಭಟ್ಕಳ: ಕರೋನಾ ವೈರಸ್ ಮಹಾಮಾರಿಯಿಂದಾಗಿ ಜಿಲ್ಲಾಧಿಕಾರಿ ಡಾ.ಕೆ.ಹರೀಶ ಕುಮಾರ ಭಟ್ಕಳದಲ್ಲಿ ಮಾರ್ಚ 24 ರಿಂದ 30ರವರೆಗೆ ಲಾಕ್ ಡೌನ್ ಮಾಡುವಂತೆ ಆದೇಶಿಸಿ ಜೀವನೋಪಾಯಕ್ಕೆ ಅಗತ್ಯವಿರುವ ಆಹಾರಕ್ಕೆ ಯಾವುದೇ ಕೊರತೆ ಇಲ್ಲ ಎಂಬ ಆದೇಶದ ನಡುವೆಯೂ ಜನರು ಗೊಂದಲಕ್ಕೆ ಸಿಲುಕಿ ಸೋಮವಾರ ಸಂಜೆ ತರಕಾರಿ ಹಾಗೂ ದಿನ ನಿತ್ಯ ಬಳಸುವ ದಿನಸಿ ಸಾಮಾನು ಖರೀದಿಸಲು ಮುಗಿಬಿದ್ದಿದ್ದಾರೆ‌.

ಜಿಲ್ಲೆಯಲ್ಲಿಯೇ 40% ಜನ ವಿದೇಶ ದಿಂದ ಭಟ್ಕಳಕ್ಕೆ ಬಂದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಭಟ್ಕಳವನ್ನು ಲಾಕ್ ಡೌನ್ ಮಾಡಲು ಆದೇಶ ಹೊರಡಿಸಿದ್ದಾರೆ. ಮಂಗಳವಾರದ ಭಟ್ಕಳ ಲಾಕ್ ಡೌನ್ ತಿಳಿದ ಬೆನ್ನಲ್ಲೇ ಸೋಮವಾರದಂದು ಸಂಜೆಗೆ ಕಾದು ಕುಳಿತ ಜನರು ಸಂಜೆಯಾಗುತ್ತಿದಂತೆ ತಾಲೂಕಿನ ಹಳೆ ಬಸ್ ನಿಲ್ದಾಣದಲ್ಲಿರುವ ತರಕಾರಿ ಅಂಗಡಿ, ಮೀನು ಮಾರುಕಟ್ಟೆ, ತಹಶೀಲ್ದಾರ್ ಕಛೇರಿಯ ಎದುರಿನ ಹಣ್ಣಿನ ಅಂಗಡಿ ಹಾಗೂ ಶಂಶುದ್ದಿನ ಸರ್ಕಲ್ ಸಮೀಪದ ಕಿರಾಣಿ ಅಂಗಡಿ ಸೇರಿದಂತೆ ರಂಗಿನಕಟ್ಟೆ ಸಮೀಪದ ತಾಸೀನ್ ಸೂಪರ್ ಮಾರ್ಕೆಟನಲ್ಲಿ ಜನತಾ ಕರ್ಪ್ಯೂ ಆದೇಶಕ್ಕೂ ಪೂರ್ವದಲ್ಲಿ ಜನಜಂಗುಳಿಯಿಂದ ಕೂಡಿದ್ದು,
ಇನ್ನಿತರ ದಿನನಿತ್ಯ ಉಪಯೋಗವಾಗುವ ವಸ್ತುಗಳ ಖರೀದಿಯಲ್ಲಿ ಬ್ಯುಸಿಯಾಗಿರುವುದು ಕಂಡು ಬಂತು.‌ಇನ್ನು ಇದೇ ವೇಳೆ ಖರೀದಿಯ ಜೊತೆಯಲ್ಲಿ ಜನರು ತರಕಾರಿ ಖರೀದಿಯಲ್ಲಿ ಚೌಕಾಸಿಗಿಳಿದ್ದಿದ್ದು ಕಂಡುಬಂತು.

ಕೋರೋನಾ ಬಗ್ಗೆ ನಿರ್ಲಕ್ಷ್ಯ : ಸಾರ್ವಜನಿಕರಿಗೆ ಜಿಲ್ಲಾಢಳಿತ ಕಂಡ ಕಂಡಲ್ಲಿ ಗುಂಪು ಸೇರಬಾರದೆಂದು ಆದೇಶವಿದ್ದರು ಸಹ ಯಾವುದನ್ನು ಪಾಲಿಸದೇ ಕೋರೋನಾ ಬಗ್ಗೆ ನಿರ್ಲಕ್ಷ ತೋರುತ್ತಿದ್ದಾರೆ. ನಾಳೆಯಿಂದ ನಡೆಯುವ ಭಟ್ಕಳ ಲಾಕ್ ಡೌನನಲ್ಲಿ ಜೀವನೋಪಾಯಕ್ಕೆ ಬೇಕಾದ ವಸ್ತುಗಳು ಸಿಗಲಿದೆ ಎನ್ನುವ ಸೂಚನೆಯಿದ್ದರು ಇದನ್ನು ಕೂಡ ತರಕಾರಿ ಹಾಗೂ ಇನ್ನಿತರ ವಸ್ತುಗಳ ಖರೀದಿಗೆ ಗುಂಪುಕಟ್ಟಿ ಖರೀದಿಗಿಳಿದು ಬೇಜವಾಬ್ದಾರಿ ತೋರಿದಂತಾಗಿದೆ. ಹಾಗೂ ವೈರಸ್ ಹರಡುವಿಕೆಯ ಬಗ್ಗೆಯೂ ಸಹ ತಾಲೂಕಾಢಳಿತ ಜನರಲ್ಲಿ ಕಟ್ಟು ನಿಟ್ಟಿನ ಆದೇಶ ನೀಡದಿರುವುದು ಸಹ ಜನರ ಓಡಾಟ ಬೇಕಾಬಿಟ್ಟಿಯಾಗಿದೆ.

error: