September 14, 2024

Bhavana Tv

Its Your Channel

ಸಂಚಾರ ದಟ್ಟಣೆ ನಿಯಂತಿಸಲು ಆಗ್ರಹ

ಸವದತ್ತಿ ಪಟ್ಟಣದ ಹೃದಯ ಭಾಗವಾಗಿರುವ ಎಸ್.ಎಲ್.ಎ.ಓ ಕ್ರಾಸ್ ನಲ್ಲಿ ವಾಹನ ಸವಾರರು ದಿನನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ.
ಕಿರಿದಾದ ರಸ್ತೆ ಮಾರ್ಗವಾಗಿರುವ ಎಸ್.ಎಲ್.ಎ.ಓ ಕ್ರಾಸ್ ಬಿದಿ ಬದಿಯಲ್ಲಿಯ ಅಂಗಡಿಗಳು ಹಾಗೂ ಅಡ್ಡಾದಿಡ್ಡಿ ದ್ವಿಚಕ್ರ ವಾಹನ ನಿಲುಗಡೆಯಿಂದ ಬಸ್ ಚಾಲಕರು ಹಾಗೂ ವಾಹನ ಸಂಚಾರಿಗಳು ಸಂಚರಿಸಲು ಹರಸಹಾಸ ಪಡೆಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಪಟ್ಟಣದಲ್ಲಿ ಏಕಮುಕ ಸಂಚಾರ ಜಾರಿಯಲ್ಲಿದ್ದು ಬಾರಿ ವಾಹನಗಳು.ಬಸ್ ಗಳು ಎಸ್.ಎಸ್.ಎಲ್.ಎಓ ಕ್ರಾಸ್ ಮೂಲಕವೇ ಹಾಯ್ದು ಹೋಗಬೇಕು.ಖಾಸಗಿ ವಾಹನಗಳು ಹಾಗೂ ಬಸ್ ಗಳು ಕೂಡ ಅಡ್ಡಾದಿಡ್ಡಿ ಯಾಗಿ ನಿಲ್ಲಿಸುವುದರಿಂದ ವಯೋವೃದ್ದರು ಹಾಗೂ ಶಾಲಾ ಮಕ್ಕಳ ಮುಕ್ತ ಸಂಚಾರಕ್ಕೆ ಅನಾನುಕೂಲವಾಗುತ್ತಿದೆ.ಎಲ್ಲೆಂದರಲ್ಲಿ ದ್ವಿಚಕ್ರ ವಾಹನ ನಿಲ್ಲಿಸಿ ಸಂಚಾರಕ್ಕೆ ಅಡೆತಡೆ ಮಾಡುವವರ ವಿರುದ್ಧ ಸೂಕ್ತ ಕ್ರಮಕ್ಕೆಕೊಳ್ಲುವ ಅವಶ್ಯಕತೆ ಯಿಂದ ಎಂದು ಸಾರ್ವಜನಿಕ ಅಗ್ರಹಿಸಿದ್ದಾರೆ.

ಸ್ಥಳೀಯ ಪಿಎಸ್ಐ ನಾಗನಗೌಡ ಕಟ್ಟಿಮನಿಗೌಡ ಕಾನೂನು ಸುವ್ಯವಸ್ಥೆಯಲ್ಲಿ ಸಾಕಷ್ಟು ಕ್ರಾಂತಿಕಾರಿ ಬದಲಾವಣೆ ಮಾಡಿದ್ದಾರೆ. ಎಸ್ಎಲ್.ಎಓ ಕ್ರಾಸ್ ನಲ್ಲಿ ಸಂಭವಿಸುತ್ತಿರುವ ಈ ಅಡತಡೆಯ ವಾಹನ ಸಂಚಾರಕ್ಕೂ ಸೂಕ್ತ ವ್ಯವಸ್ಥೆ ಕಲ್ಪಿಸಿ ಪಟ್ಟಣದ ಹೃದಯ ಭಾಗದಲ್ಲಿ ಸಂಭವಿಸುತ್ತಿರುವ ಅನಾಹುತ ಮತ್ತು ಸಂಚಾರ ದಟ್ಟಣೆ ಸರಿಪಡಿಸ ಬೇಕಾಗಿದೆ.
ತೊಂದರೆ ನಿವಾರಿಸುವಲ್ಲಿ ಸೂಕ್ತ ಕ್ರಮ ಜರುಗಿಸುವದು ಅವಶ್ಯವಾಗದೆ ಎಂದು ಸಾರ್ವಜನಿಕರ ಒತ್ತಾಯವಾಗಿದೆ.

error: