September 14, 2024

Bhavana Tv

Its Your Channel

ಮಂಡ್ಯ ಕೃಷ್ಣರಾಜಪೇಟೆ ಶಾಸಕ ನಾರಾಯಣಗೌಡ ಅವರು ರಾಜ್ಯದ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಅವರ ಸಚಿವಸಂಪುಟದಲ್ಲಿ

ಕ್ಯಾಬಿನೆಟ್ ದರ್ಜೆಯ ಸಚಿವರಾಗಿ ಪ್ರಮಾಣವಚನ ಸ್ವೀಕರಿಸುತ್ತಿರುವ ಹಿನ್ನೆಲೆಯಲ್ಲಿ ನೂರಾರು ಅಭಿಮಾನಿಗಳು ಬೆಂಗಳೂರಿಗೆ ತೆರಳಿದರು.

30ವರ್ಷಗಳ ನಂತರ ಕೆ.ಆರ್.ಪೇಟೆ ತಾಲೂಕಿಗೆ ಮಂತ್ರಿ ಪದವಿಯು ದೊರೆಯುತ್ತಿರುವುದು ತಾಲ್ಲೂಕಿನ ಜನತೆಯಲ್ಲಿ ಸಂಭ್ರಮವು ಮನೆ ಮಾಡಿದೆ.

ತಾಲೂಕಿನ ಸಮಗ್ರವಾದ ಅಭಿವೃದ್ಧಿಗಾಗಿ ಇದೇ ಮೊದಲ ಬಾರಿಗೆ ಕಮಲವನ್ನು ತಾಲೂಕಿನ ಪ್ರಬುದ್ಧ ಮತದಾರರು ಬೆಂಬಲಿಸಿದ್ದು ಅಭಿವೃದ್ಧಿ ಪರ್ವಕ್ಕೆ ತಮ್ಮ ಬೆಂಬಲವೆಂದು ಐತಿಹಾಸಿಕ ತೀರ್ಪು ನೀಡಿದ್ದಾರೆ.

ನಿರೀಕ್ಷೆಯಂತೆ ಯಡಿಯೂರಪ್ಪ ಅವರ ಸಚಿವ ಸಂಪುಟದಲ್ಲಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸುತ್ತಿರುವುದು ನಾರಾಯಣಗೌಡರ ಅಭಿಮಾನಿಗಳು ಹಾಗೂ ಜನತೆಯಲ್ಲಿ ಸಂಭ್ರಮ ಮನೆಮಾಡಿದೆ.

error: