June 20, 2024

Bhavana Tv

Its Your Channel

ಹೊನ್ನಾವರ ತಾಲೂಕಿನ ಮಾಡಗೇರಿಯ ಶ್ರೀ ರಾಮನಾಥ ದೇವಾಲಯದ ಆವಾರದಲ್ಲಿ ಫೆ.೬ ರಿಂದ ೯ರ ತನಕ ಧಾರ್ಮಿಕ ಕಾರ್ಯಕ್ರಮ

ಹೊನ್ನಾವರ: ನಾಮಧಾರಿ ಸಮಾಜ ಸೇವಾ ಸಂಘ ಕಡತೋಕಾ ಇವರ ಆಶ್ರಯದಲ್ಲಿ ಸಾಮೂಹಿಕ ಬ್ರಹ್ಮೋಪದೇಶ, ಸಾಮೂಹಿಕ ಶ್ರೀ ಸತ್ಯನಾರಾಯಣ ವ್ರತ ಕಲಶ ಪೂಜಾ ಕಾರ್ಯಕ್ರಮ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮ ತಾಲೂಕಿನ ಮಾಡಗೇರಿಯ ಶ್ರೀ ರಾಮನಾಥ ದೇವಾಲಯದ ಆವಾರದಲ್ಲಿ ಫೆ.೬ ರಿಂದ ೯ರ ವರೆಗೆ ನಡೆಯಲಿದೆ.
ಫೆ.೬ ರಿಂದ ೯ರ ವರೆಗೆ ಶ್ರೀ ದೇವರ ಸನ್ನಿಧಿಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಅದ್ದೂರಿಯಾಗಿ ನಡೆಯಲಿದೆ. ಶ್ರೀ ರಾಮನಾಥ ದೇವ ಕಡತೋಕಾ ಮತ್ತು ಶ್ರೀ ಹೊನ್ನಮಾಸ್ತಿದೇವಿ ಟ್ರಸ್ಟ್ ಮಾಡಗೇರಿ ವತಿಯಿಂದ ಫೆ.೬ ರಿಂದ ೭ರ ವರೆಗೆ ಅಹೋರಾತ್ರಿ ಶ್ರೀ ರಾಮತಾರಕ ಮಂತ್ರ ಭಜನಾ ಕಾರ್ಯಕ್ರಮ ನಡೆಯಲಿದೆ. ಎರಡು ದಿನಗಳ ಕಾಲ ನಡೆಯುವ ಭಜನಾ ಕಾರ್ಯಕ್ರಮಕ್ಕೆ ವಿವಿಧ ಭಾಗಗಳಿಂದ ಆಸಕ್ತ ಭಜನಾಮಂಡಳಿಗಳು ಭಜನಾತಂಡಗಳೊAದಿಗೆ ಆಗಮಿಸಿ ಭಜನಾ ಸೇವೆ ನೀಡುವರು. ಫೆ. ೭ ರಂದು ಶ್ರೀ ದೇವರ ಪುನಃ ಪ್ರತಿಷ್ಠಾಪನಾ ವರ್ಧಂತಿ ಉತ್ಸವ ನಡೆಯಲಿದೆ. ಫೆ.೯ರಂದು ಬ್ರಹ್ಮೋಪದೇಶ' ಕಾರ್ಯಕ್ರಮ ನಡೆಯಲಿದ್ದು, ಸಾಮೂಹಿಕವಾಗಿ ಸಮಾಜದ ಬಾಲಕರಿಗೆಬ್ರಹ್ಮೋಪದೇಶ’ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದರ ಜತೆಗೆ ಸಾಮೂಹಿಕ ಶ್ರೀ ಸತ್ಯನಾರಾಯಣ ವ್ರತ ಕಲಶ ಪೂಜಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಈ ಎಲ್ಲಾ ಕಾರ್ಯಕ್ರಮದಲ್ಲಿ ಸಮಾಜದ ಪೀಠಾಧಿಪತಿಗಳಾದ ಪೂಜ್ಯ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ದಿವ್ಯ ಸಾನಿಧ್ಯವಹಿಸಿ ಆಶೀರ್ವಚನ ನೀಡುವರು. ಕಾರ್ಯಕ್ರಮಕ್ಕೆ ವಿವಿಧ ಭಾಗಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿರೀಕ್ಷೆಯಿದೆ.

error: