April 23, 2024

Bhavana Tv

Its Your Channel

ಗೋಲ್ ಇಂಟರ್‌ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ವಿಜ್ಞಾನ ಪ್ರದರ್ಶನ

ಹೊನ್ನಾವರ ತಾಲೂಕಿನ , ಮಂಕಿ ಗ್ರಾಮದ ಗೋಲ್ ಇಂಟರ್‌ನ್ಯಾಷನಲ್ ಪಬ್ಲಿಕ್ ಶಾಲೆಯ ನಾಲ್ಕನೇ ವರ್ಷದ ಗೋಲ್ ಉತ್ಸವದ ಅಂಗವಾಗಿ ಬಹುಮಾನ ವಿತರಣೆ ಹಾಗೂ ವಿಜ್ಞಾನ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು.
ಗೋಲ್ ಸ್ಕೂಲ್ ವತಿಯಿಂದ ಹಮ್ಮಿಕೊಂಡ ೨, ೩ ಹಾಗೂ ನಾಲ್ಕನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಹಗಲು ಮತ್ತು ರಾತ್ರಿಯ ಕಲ್ಪನೆ, ಬಹು ಪ್ರತಿಫಲನ, ಶ್ವಾಸಾಂಗವ್ಯೂಹ ಮತ್ತು ಧೂಮಪಾನ ನಿಷೇಧದ ಬಗ್ಗೆ ಜಾಗೃತಿ, ಸೂಜಿರಂಧ್ರ, ಬಿಂಬಗ್ರಾಹಿ, ಜ್ವಾಲಾಮುಖಿ ಮತ್ತು ಅದರ ವಿಧಗಳು, ಪರಿದರ್ಶಕ, ನೈಸರ್ಗಿಕ ತೂಕ ಯಂತ್ರ, ಜಾಗತಿಕ ತಾಪಮಾನ ಹಾಗೂ ಮಳೆಕೊಯ್ಲು ಮುಂತಾದ ಮಾಡೆಲ್‌ಗಳನ್ನು ತಯಾರಿಸಿ ಅದರ ಬಗ್ಗೆ ತಿಳುವಳಿಕೆ ನೀಡಿದ್ದು ಬಹಳ ವಿಶೇಷವಾಗಿತ್ತು. ಸುಮಾರು ೪೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ವೈಜ್ಞಾನಿಕ ವಿಷಯಗಳ ಕುರಿತು ಸುಮಾರು ೬೦೦ಕ್ಕೂ ಹೆಚ್ಚು ಪೋಷಕರಿಗೆ ಮಾಹಿತಿ ನೀಡಿದರು. ಈ ವಿಜ್ಞಾನ ಪ್ರದರ್ಶನ ಎಲ್ಲರ ಮೆಚ್ಚುಗೆಯನ್ನು ಪಡೆಯುವಲ್ಲಿ ಯಶಸ್ವಿಯಾಯಿತು. ನಂತರ ನಡೆದ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಮತ್ತು ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು.

error: