May 30, 2023

Bhavana Tv

Its Your Channel

ತುಳುನಾಡ ರಕ್ಷಣಾ ವೇದಿಕೆ ರಕ್ತದಾನ ಅಭಿಯಾನ ಸಪ್ತಾಹ ( 05-02-2020 ರಿಂದ 11-02-2020)ಕಾರ್ಯಕ್ರಮ

ತುಳುನಾಡ ರಕ್ಷಣಾ ವೇದಿಕೆ ರಕ್ತದಾನ ಅಭಿಯಾನ ಸಪ್ತಾಹ ( 05-02-2020 ರಿಂದ 11-02-2020)ಕಾರ್ಯಕ್ರಮ :. ದಿನಾಂಕ 05-02-2020 ರಂದು ಸಂಜೆ 4.00 ಗಂಟೆ ಗೆ ಜಿಲ್ಲಾ ಆಸ್ಪತ್ರೆ ಯಲ್ಲಿ ತುಳುನಾಡ ರಕ್ಷಣಾ ವೇದಿಕೆ ವತಿಯಿಂದ ಸ್ಥಾಪಕ ಅಧ್ಯಕ್ಷ ಯೋಗೀಶ್ ಶೆಟ್ಟಿ ಜಪ್ಪು ರವರು ರಕ್ತದಾನ ಮಾಡಿ ಇಂದು ನಮ್ಮ ನಾಡಿನಲ್ಲಿ ಬೇರೆ ಬೇರೆ ರೀತಿಯ ಕಾಯಿಲೆಗಳಿಗೆ ನಮ್ಮ ಸಹೋದರ ಸಹೋದರಿಯರು ತುತ್ತಾಗುತ್ತಿದ್ದಾರೆ.ರಕ್ತ ಅವಶ್ಯಕತೆ ಹೆಚ್ಚಾಗಿದೆ. ಆದುದರಿಂದ ನಮ್ಮ ಕಾರ್ಯಕರ್ತರು ಹಾಗೂ ಅಭಿಮಾನಿಗಳು ದಕ್ಷಿಣ ಕನ್ನಡ ಜಿಲ್ಲೆ ಉಡುಪಿ ಜಿಲ್ಲೆಗಳಲ್ಲಿರುವ ರಕ್ತ ಸಂಗ್ರಹ ಕೇಂದ್ರ ಗಳಲ್ಲಿ ತುಳುನಾಡ ರಕ್ಷಣಾ ವೇದಿಕೆ ರಕ್ತದಾನ ಅಭಿಯಾನ ಸಪ್ತಾಹ ( 05-02-2020 ರಿಂದ 11-02-2020)ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ಕರೆ ನೀಡಿದರು.ರೋಶನ್ ಡಿ’ಸೋಜಾ, ಪಾಯಜ್ ಕುದ್ರೋಳಿ, ಪ್ರದೀಪ್ ನಾಯರ್,ಗೈಟನ್ ರೋಡ್ರಿಗಸ್, ಸೇರಿದಂತೆ ಹಲವು ಪ್ರಮುಖ ಕಾರ್ಯ ಕರ್ತರು ರಕ್ತದಾನ ಮಾಡಿದರು.ಆನಂದ ಅಮೀನ್ ಅಡ್ಯಾರ್, ಸುಭಾಷ್ ಶೆಟ್ಟಿ, ತನ್ವೀರ್, ಗೋಲ್ಡನ್ ಪಾರುಕ್, ಕಾರ್ತಿ ಕ್ ಕದ್ರಿ, ಡಾ.ಶರತ್ ಮತ್ತಿತರರು ಸಂದೇಶ್ ಪುತ್ರನ್ ಪ್ರಮುಖ ಕಾರ್ಯಕರ್ತರು ಉಪಸ್ಥಿತರಿದ್ದರು

About Post Author

error: