October 5, 2024

Bhavana Tv

Its Your Channel

ಕೊರೊನಾ ವೈರಸ್ ಶಂಕಿತ ಹೋಮ್ ಕ್ವಾರೆಂಟೈನಲ್ಲಿ ಇದ್ದ ವ್ಯಕ್ತಿಯಿಂದ ಅತಂಕ

ಭಟ್ಕಳ : ಕೊರೊನಾ ವೈರಸ್ ಶಂಕಿತ ಹೋಮ್ ಕ್ವಾರೆಂಟೈನಲ್ಲಿ ಇದ್ದ ವ್ಯಕ್ತಿಯೊಬ್ಬ ಕಾರಿನಲ್ಲಿ ಬಂದು ರಸ್ತೆಯ ಪಕ್ಕದಲ್ಲಿ ತುರ್ತು ಸೇವೆಗೆ ಹೋಗುವವರು, ಔಷಧ ಅಂಗಡಿಯ ಎದುರು ಕಾಯುತ್ತಿದ್ದವರನ್ನು ಅನಾವಶ್ಯಕವಾಗಿ ಮುಟ್ಟಿ ಆತಂಕ ಸೃಷ್ಟಿಸಿದ ಘಟನೆ ಭಟ್ಕಳದಲ್ಲಿ ನಡೆದಿದೆ.ವ್ಯಕ್ತಿಯನ್ನು ಶಂಮ್ಸ್ ಶಾಲೆಯ ಹತ್ತಿರದ ನಿವಾಸಿಯೆಂದು ಜನರು ಗುರುತಿಸಿದ್ದು, ಈತನ ಬಲಗೈಯ ಮೇಲೆ ಸೀಲ್ ಹಾಕಲಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಕೆಲವೊಂದು ತುರ್ತು ಅಗತ್ಯಗಳಿಗಾಗಿ ಔಷಧವನ್ನು ವಿತರಿಸಲು ಮೆಡಿಕಲ್ ತೆರೆದಿದ್ದ ಸಂದರ್ಭದಲ್ಲಿ ಕಾರಿನಿಂದ ಇಳಿದ ಈ ವ್ಯಕ್ತಿ ಔಷಧ ಕೊಂಡು ಕೊಳ್ಳಲು ಬಂದವರನ್ನು ಮುಟ್ಟಿ, ಅಲ್ಲಿಂದ ಪರಾರಿಯಾಗಿದ್ದಾನೆ ಎನ್ನಲಾಗಿದೆ.ಇದು ಉದ್ದೇಶ ಪೂರ್ವಕವಾಗಿ ಮಾಡಿದ ಕೃತ್ಯ ಎನ್ನುವ ಮಾತು ಕೇಳಿ ಬಂದಿದ್ದು, ತಕ್ಷಣ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ಸತ್ಯ ಏನು ಎನ್ನುವುದನ್ನ ಜನತೆಗೆ ತಿಳಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

error: