
ಕೊರೊನಾ ಭೀತಿಯಿಂದ ಜನರು ತಮ್ಮನ್ನು ತಾವು ಮನೆಯಲ್ಲಿಯೇ ಬಂಧಿಸಿಕೊಂಡಿದ್ದಾರೆ. ಇತ್ತ ಮನೆಯಲ್ಲಿನ ಜನರ ರಕ್ಷಣೆಗೆ ಪೌರಕಾರ್ಮಿಕರು ಸಾರ್ವಜನಿಕ ಸ್ಥಳಗಳಲ್ಲಿ ಔಷಧಿ ಸಿಂಪಡಣೆ ಮಾಡುತ್ತಿದ್ದಾರೆ. ಇಂದು ಬೆಳಿಗ್ಗೆಯಿಂದ ತಾಲೂಕಿನ ಪ್ರಮುಖ ಮಸೀದಿಗಳಾದ ಚಿನ್ನದ ಪಳ್ಳಿ, ಸಿದ್ದಿಕ್ ಸ್ಟ್ರೀಟ್, ಜಾಮಿಯಪಳ್ಳಿ ಸೇರಿದಂತೆ ತಾಲೂಕಿನ ಏಳು ಮಸೀದಿಗಳಿಗೆ ಔಷಧಿ ಸಿಂಪಡಣೆ ಮಾಡಿದ್ದಾರೆ.

ಮಸೀದಿಗಳಿಗೆ ಔಷಧಿ ಸಿಂಪಡಣೆಮಸೀದಿಯ ಹೊರಾಂಗಣ ಹಾಗೂ ಕೊಠಡಿಗಳಿಗೆ ಔಷಧಿ ಸಿಂಪಡಣೆ ಮಾಡಲಾಯಿತು. ಅದೇ ರೀತಿ ಮಸೀದಿಯ ಬಾಗಿಲಿಗೂ ಸಹ ಸಿಂಪಡಣೆ ಮಾಡಲಾಯಿತು. ಸೋಡಿಯಂ ಹೈಪೊಕ್ಲೋರೈಡ್ ರಾಸಾಯನಿಕ ಮಿಶ್ರಿತ ಅಂಶದ ಔಷಧಿ ಇದಾಗಿದೆ. ಎಲ್ಲಾ ಮಸೀದಿಗಳ ಮುಖ್ಯಸ್ಥರ ಪರವಾನಗಿ ಪಡೆದು ಸಿಂಪಡಣೆ ಕಾರ್ಯವನ್ನು ಪೌರಕಾರ್ಮಿಕರಾದ ನಾಗರಾಜ್ ಹಾಗೂ ರವಿ ಮಾಡುತ್ತಿದ್ದಾರೆ ಎಂದು ಪುರಸಭೆ ಮುಖ್ಯಾಧಿಕಾರಿಗಳು ತಿಳಿಸಿದ್ದಾರೆ
More Stories
ಮಲ್ಪೆ ಮೀನುಗರಿಕಾ ರೈತ ಉತ್ಪಾದಕ ಕಂಪನಿಯಿ0ದ ಮೀನುಗಾರಿಕಾ ಸಚಿವ ಮಂಕಾಳು ವೈದ್ಯರಿಗೆ ಮನವಿ.
ಕಿಕ್ಕಿರಿದು ಸೇರಿದ ಜನಸಾಗರದ ನಡುವೆ ನಡೆದ ನೀಲಗೋಡ ಯಕ್ಷಿಚೌಡೇಶ್ವರಿ ದೇವಿಯ ಅಮವಾಸ್ಯೆ ಪೂಜೆ.
ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣೆಯ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ