September 14, 2024

Bhavana Tv

Its Your Channel

ಕರೊನಾದ ಕರಿನೆರಳು ಮಲ್ಲಿಗೆಯ ಮೇಲೆ ಬಿದ್ದು ಅದರ ಬೆಳೆಗಾರರು ವಿಲವಿಲನೆ ಒದ್ದಾಡುವಂತೆ ಮಾಡಿದೆ.

ಏ 14ರಂದು ಲಾಕ್‍ಡೌನ್ ಮುಗಿಯದಿದ್ದಲ್ಲಿ ಮಲ್ಲಿಗೆಯನ್ನು ಆಶ್ರಯಿಸಿದ ಕುಟುಂಬ ಕಷ್ಟದ ದಿನ ಎದುರಿಸುವ ಆತಂಕದಲ್ಲಿದೆ.
ಮಲ್ಲಿಗೆಯ ಮೀತಿ ಮೀರಿದ ಬೇಡಿಕೆಯಿಂದ ಭಟ್ಕಳದಲ್ಲಿ ಸುಮಾರು 90ಹೇಕ್ಟರ್ ಪ್ರದೇಶದಲ್ಲಿ ಮಲ್ಲಿಗೆಯನ್ನು ಒಂದು ಪ್ರಮುಖ ಬೆಳೆಯನ್ನಾಗಿ ಬೆಳಸಲಾಗುತ್ತಿದೆ. ಕೃಷಿಯಲ್ಲಿ ಮಲ್ಲಿಗೆಯೂ ಒಂದು ಪ್ರಮುಖ ಪಾತ್ರ ಪಡೆದಿದ್ದು ಭಟ್ಕಳ ವೊಂದರಲ್ಲೆ 8ರಿಂದ 10 ಸಾವಿರ ಕುಟುಂಬಗಳು ಇದನ್ನೆ ಆಶ್ರಯಿಸಿ ಬದುಕು ಸಾಗಿಸುತ್ತಿದೆ. ಮಲ್ಲಿಗೆಯ ಗಿಡ ಬೆಳಸಿ ಅದರಿಂದ ಫಸಲು ಪಡೆಯಲು ಸುಮಾರು 2 ವರ್ಷಗಳಂತೂ ಬೇಕೆ ಬೇಕು. ಅದು ಫಸಲು ಕೊಡಲು ಆರಂಭಿಸಿದ ನಂತರ ಸತತವಾಗಿ ಅದರ ಆರೈಕೆ ಆಗಲೆ ಬೇಕು. ಆದರೆ ದೇಶದಲ್ಲಿ ಕರೊನಾ ಕಂಟಕ ಎದುರಾಗಿದ್ದು ಲಾಕ್‍ಡೌನ್‍ನ ಸಂಕಟದಲ್ಲಿ ದೇಶವಿದೆ. ಇದರಿಂದ ಹೂವಿನ ಮಾರುಕಟ್ಟೆ ಸಂಪೂರ್ಣ ಸ್ತಬ್ದವಾಗಿದ್ದು ಇದನ್ನೆ ಆಶ್ರಯಿಸಿದ ಬೆಳೆಗಾರರು ಕಂಗಾಲಾಗಿದ್ದಾರೆ. 15 ದಿನ ಹೇಗಾದರೂ ತಡೆದುಕೊಂಡರೂ ಇದು ಮುಂದುವರೆಸುವದು ಸಾದ್ಯವೆ ಇಲ್ಲ ಎನ್ನುತ್ತಾರೆ ಕೃಷಿಕ ಮಂಜುನಾಥ ದೇವಾಡಿಗ. ಮಲ್ಲಿಗೆ ಮೊಗ್ಗು ಕೊಯ್ಯುವವರಿಗೆ ಪ್ರತಿದಿನ ಮೊಳದದ ಲೆಕ್ಕದಂತೆ ನೀಡುವ ಸಂಭಾವನೆ ಒಂದಡೆಯಾದರೆ ತೆಗೆದ ಹೂವು ಹಾಳಾಗುತ್ತಿರುವ ಹೊರೆ ಇನ್ನೊಂದೆಡೆ. ಕಾಲಕ್ಕೆ ತಕ್ಕಂತೆ ನೀರು, ಗೊಬ್ಬರ, ಮದ್ದು ಸಿಂಪಡನೆ ಎಲ್ಲವೂ ದುಬಾರಿಯಾಗಿರುವದು ಮಲ್ಲಿಗೆ ಬೆಳೆಗಾರರಿಗೆ ಆತಂಕ ದ್ವಿಗುಣಗೊಳಿಸಿದೆ.. ಕೋವಿಡ್ 19 ಮಹಾಮಾರಿಯ ವಿಷಯದಲ್ಲಿ ಭಟ್ಕಳ ಹಾಟ್‍ಸ್ಪಾಟ್ ಆಗಿ ಗುರುತಿಸಿಕೊಂಡಿರುವದು ರೈತರ ನೆಮ್ಮದಿ ಮತ್ತಷ್ಟು ಹಾಳು ಮಾಡಿದೆ.
ಲಕ್ಷಗಟ್ಟಲೆ ಮೊಳ ಹೂವೂ ವೇಸ್ಟ್…
ಭಟ್ಕಳದಲ್ಲಿ ಪ್ರತಿದಿನ ಸರಾಸರಿ 1 ಲಕ್ಷ 10ಸಾವಿರ ಮೊಳ (11ಸಾವಿರ ಅಟ್ಟೆ) ಹೂವು ಉತ್ಪದನೆಯಾಗುತ್ತದೆ. ಇದಕ್ಕೆ ಮಂಗಳೂರು ಮುಖ್ಯ ಮಾರುಕಟ್ಟೆಯಾದರೆ ರಾಜ್ಯದ ವಿವಿದೆಡೆಯೂ ಭಟ್ಕಳ ಮಲ್ಲಿಗೆಗೆ ಬೇಡಿಕೆ ಇದೆ. ಉಳಿದಂತೆ ಪಟ್ಟಣದಲ್ಲೂ ಮಲ್ಲಿಗೆ ಹಾಟ್‍ಫೇವರೇಟ್. ಹೀಗಿರುವಾಗ ಪ್ರತಿದಿನ ಇಷ್ಟು ಪ್ರಮಾಣದ ಹೂವು ಹಾಳಾಗುತ್ತಿರುವದು ಬೆಳೆಗಾರರ ಚಿಂತೆಗೆ ಕಾರಣವಾಗಿದ್ದು ಸರ್ಕಾರ ತಮ್ಮ ನೆರೆವಿಗೆ ಬರಬೇಕು ಎಂದು ಕೃಷಿಕರು ಆಗ್ರಹಿಸುತ್ತಿದ್ದಾರೆ.

ಈ ಸಂದರ್ಭದಲ್ಲಿ ಭಟ್ಕಳ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರು,ಸಂಧ್ಯಾ ಭಟ್. ಮಾತನಾಡಿ ತಾಲೂಕಿನಲ್ಲಿ ಮಲ್ಲಿಗೆ
ಅದರೆದ ಆದ ಮಾರುಕಟ್ಟೆ ಇದೆ. ಪ್ರತಿದಿನ 1ಲಕ್ಷ 10ಸಾವಿರ ಮೊಳ ಹೂವು ಹಾಳಾಗುತ್ತಿರುವ ಕುರಿತು ಕಾರವಾರದ ಉಪನಿರ್ದೇಶಕರ ಗಮನಕ್ಕೆ ತರಲಾಗಿದೆ. ಅವರಿಗೂ ಬೆಂಬಲ ಬೆಲೆ ನೀಡುವ ಕುರಿತು ಉಪನಿರ್ದೇಶಕರು ರಾಜ್ಯಮಟ್ಟದಲ್ಲಿ ಮಾತುಕತೆ ನಡೆಸುತ್ತಿದ್ದಾರೆ. ಕೃಷಿಕರಿಗೆ ತಿರುಗಾಡಲು ಯಾರು ತಡೆಒಡ್ಡುವಂತಿಲ್ಲ ಎಂದು ಸರ್ಕಾರ ಆದೇಶಿಸಿದೆ.

error: