October 5, 2024

Bhavana Tv

Its Your Channel

ನಾಗರಾಜ ನಾಯ್ಕ ಸಿದ್ದಾಪುರ, ಕೊರೋನಾ ವಿರುದ್ಧ ಹೋರಾಡಲು ಸ್ವಯಂಸೇವಕ(ಕೊರೋನಾ ಸೈನಿಕ)ನಾಗಿ ಆಯ್ಕೆ

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಕರ್ನಾಟಕ ಇದರ ಮೂಲಕ ಕೊರೋನಾ ವಿರುದ್ಧ ಕಾರ್ಯನಿರ್ವಹಿಸಲು ಸ್ವಯಂ ಸೇವಕನಾಗಿ ಆಯ್ಕೆಯಾಗಿದ್ದೇನೆ.
ದೇವರು ಈ ಭೂಮಿಯ ಮೇಲೆ ನಮ್ಮನ್ನು ಬದುಕಿಸಿದ್ದಾರೆ ಅದಕ್ಕಾಗಿ ಪ್ರತಿದಿನ ನಾವು ಏನಾದರೂ ದೇವರು ಮೆಚ್ಚುವಂತಹ ಕೆಲಸವನ್ನು ಮಾಡಬೇಕು ಎನ್ನುವ ಹಂಬಲ ನನಗೆ. ನಾನು ದೇವರಿಗೆ ಭಯಪಟ್ಟು ಜೀವಿಸುತ್ತೇನೆ. ಅದರಂತೆ ನಾನು ಪ್ರಚಲಿತ ಆಶ್ರಯಧಾಮ ಅನಾಥಾಶ್ರಮದ ಮೂಲಕ ಆಶ್ರಮವಾಸಿಗಳ ಸೇವೆಯನ್ನು ಮಾಡುತ್ತಿದ್ದೇನೆ. ನನಗೆ ಅವಶ್ಯಕತೆ ಇಲ್ಲದಿದ್ದರೂ ಸಮಯದ ಒತ್ತಡದ ನಡುವೆಯೇ ನಾನು ಸ್ವಚ್ಛ, ಪ್ರಾಮಾಣಿಕ, ಜನಪರ ರಾಜಕೀಯದ ಬಗ್ಗೆ ಮತದಾರರಲ್ಲಿ ಜಾಗ್ರತಿ ಮೂಡಿಸಿ ದೇಶದಲ್ಲಿ ನಿಸ್ವಾರ್ಥ ಸೇವೆಗೆ ಜನರನ್ನು ಕರೆತರುವ ಉದ್ದೇಶದಿಂದ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಲ್ಲಿ ಉತ್ತರ ಕನ್ನಡ ಜಿಲ್ಲಾಧ್ಯಕ್ಷನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಹಲವಾರು ಬಾರಿ ಪ್ರಕೃತಿ ವಿಕೋಪಗಳು ಸಮಸ್ಯೆಗಳು ತಲೆದೋರಿದಾಗ ಈ ವಿಷಯದಲ್ಲಿ ನಾನು ಎನಾದರೂ ಸೇವೆ ಮಾಡಬೇಕು ದೇವರೇ ಎಂದು ಕೇಳಿಕೊಳ್ಳುವುದು ನನ್ನ ಸ್ವಭಾವ. ನನ್ನ ಕೈಲಾದ ಸೇವೆಯನ್ನು ನಿರಂತರವಾಗಿ ಮಾಡಿಕೊಂಡು ಬಂದಿದ್ದೇನೆ.
ಅದರಂತೆ ಈಗ ತಲೆದೂರಿರುವ ಕೊರೋನಾ ವೈರಸ್ ಸಂದರ್ಭದಲ್ಲಿ ನಾನು ದೇಶಕ್ಕೆ, ನನ್ನ ಸುತ್ತಲಿರುವ ಜನರಿಗೆ ಏನಾದರೂ ಮಾಡಬೇಕೆನ್ನುವ ಹಂಬಲ ನನ್ನಲ್ಲಿ ಮೂಡಿತ್ತು. ಆದರೆ ನಾನು ಅನಾರೋಗ್ಯದ ನಿಮಿತ್ತ ಮಾರ್ಚ ಹತ್ತನೇ ತಾರೀಖಿನಿಂದ 15ನೇ ತಾರೀಖಿನವರೆಗೆ ಆಸ್ಪತ್ರೆಯಲ್ಲಿ ದಾಖಲಾಗಿದ್ದು ಇದರಿಂದ ನಾನು ಏನೂ ಮಾಡಲಾಗದ ಸ್ಥಿತಿಯಲ್ಲಿ ಇದ್ದೆ.


ಈ ಸಂದರ್ಭದಲ್ಲಿ ದೇವರಲ್ಲಿ ಬೇಡಿಕೊಳ್ಳುತ್ತಿದ್ದೆ ನಾನು ಎನಾದರೂ ಸೇವೆ ಮಾಡಬೇಕು ದೇವರೆ ಎಂದು. ಆಗಲೇ ನನಗೆ ಅವಕಾಶ ಸಿಕ್ಕಿದ್ದು ಸ್ವಯಂಸೇವಕರಾಗಿ ಕೊರೋನಾ ವಿರುದ್ಧ ಹೋರಾಡಲು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು ಎಂದು. ಕೂಡಲೇ ನಾನು ಮೊಬೈಲ್ ಮೂಲಕ ಅರ್ಜಿ ಸಲ್ಲಿಸಿದೆ, ಅದರಲ್ಲಿ ಆಯ್ಕೆಯಾದೆ. ಹಾಗೂ ಆನ್ಲೈನ್ ಮೂಲಕ ತರಬೇತಿ ಪಡೆದು ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದೇನೆ. ಕಳೆದ ಕೆಲವು ದಿನಗಳಿಂದ ಅಧಿಕಾರಿಗಳ ಸೂಚನೆಯ ಮೇರೆಗೆ ಕಾರ್ಯನಿರ್ವಹಿಸುತ್ತಿದ್ದೇನೆ.
ಈ ಸನ್ನಿವೇಶದಲ್ಲಿ ಕೂಡ ದೇಶ ಸೇವೆ ಮಾಡುವುದಕ್ಕೆ ಈ ಸೇವೆಯನ್ನು ಕರುಣಿಸಿದ ದೇವರಿಗೆ ನನ್ನ ವಂದನೆಗಳು. ಇಂತಹ ಸನ್ನಿವೇಶದಲ್ಲಿ ದೇಶ ಸೇವೆಯ ಭಾಗ್ಯ ಸಿಕ್ಕಿರುವದಕ್ಕೆ ಸಂತೋಷವಾಗಿದೆ ಎಂದು ಹಂಚಿಕೊoಡಿದ್ದಾರೆ

error: