December 3, 2024

Bhavana Tv

Its Your Channel

ಕುಮಟಾ ತಾಲೂಕಿನ ಟೆಂಪೋ ಚಾಲಕ ಮಾಲಕರಿಗೆ ಶಾಸಕ ದಿನಕರ ಶೆಟ್ಟಿ ಭಾನುವಾರ ಸ್ವಗೃಹದಲ್ಲಿ ದಿನಸಿ ಕಿಟ್ ವಿತರಿಸಿದರು.

ಕುಮಟಾ : ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಕರೊನಾ ಸೋಂಕಿನ ವಿರುದ್ಧ ಲಾಕ್​ಡೌನ್ ಜಾರಿಯಲ್ಲಿರುವದರಿಂದ ದಿನದ ದುಡಿಮೆ ನಂಬಿ ಬದುಕುವ ಕುಟುಂಬಗಳು ತೀರಾ ಸಂಕಟಕ್ಕೆ ಬೀಳದಂತೆ ನನ್ನಿಂದ ಸಾಧ್ಯವಾದಷ್ಟು ನೆರವಾಗುವ ಕಾರ್ಯ ಪ್ರತಿನಿತ್ಯ ಮಾಡುತ್ತಿದ್ದೇನೆ ಎಂದು ತಿಳಿಸಿದರು.
ಕ್ಷೇತ್ರ ಜನತೆ ಲಾಕ್​ಡೌನ್​ಗೆ ಉತ್ತಮ ಸಹಕಾರ ನೀಡಿದ್ದಾರೆ. ಇಂಥ ಸಂಕಟದ ಘಳಿಗೆಯಲ್ಲಿ ದಿನದ ದುಡಿಮೆ ಬಿಟ್ಟು ಮನೆಯಲ್ಲೇ ಇರುವ ತೀರಾ ಬಡವರನ್ನು ಗುರುತಿಸಿ ಸಹಾಯ ಮಾಡುತ್ತಿದ್ದೇನೆ. ಹಾಗೆಯೇ ಎಲ್ಲಾ ಕಡೆ ಉಚಿತವಾಗಿ ತರಕಾರಿ ವಿತರಣೆ ಮಾಡುತ್ತಿದ್ದೇನೆ. ಈಗಾಗಲೇ ತಾಲೂಕಿನ ೭೦೦ಕ್ಕೂ ಹೆಚ್ಚು ರಿಕ್ಷಾ ಚಾಲಕ ಮಾಲಕರಿಗೆ ತಲಾ ಸಾವಿರರೂ ಧನಸಹಾಯ ಮಾಡಿದ್ದೇನೆ. ಹಾಗೆಯೇ ಪ್ರಯಾಣಿಕ ಟೆಂಪೋ ಚಾಲಕ ಮಾಲಕರಿಗೂ ಧನಸಹಾಯ ಮಾಡುವ ಬಗ್ಗೆ ಚಿಂತನೆ ಮಾಡಿದ್ದು ಸದ್ಯ ೬೦೦ ಆಹಾರ ಕಿಟ್ ಸಿದ್ಧಪಡಿಸಲಾಗಿದ್ದು ಕಿಟ್ ವಿತರಿಸುತ್ತಿದ್ದೇನೆ. ಕಿಟ್​ನಲ್ಲಿ ಒಂದು ಕೆಜಿ ಅವಲಕ್ಕಿ, ಒಂದು ಕೆಜಿ ಗೋಽ ಹಿಟ್ಟು , ಅರ್ಧ ಕೆಜಿ, ಬೇಳೆ, ಅರ್ಧ ಕೆಜಿ.ಸಕ್ಕರೆ, ಕಾಲು ಕೆಜಿ ಚಹಾಪುಡಿ ಮುಂತಾದವು ಇರಲಿದೆ ಎಂದರು.
ಇದೇ ವೇಳೆ ಎಲ್ಲರಿಗೂ ಮಾಸ್ಕ್​ಗಳನ್ನೂ ಕೂಡಾ ವಿತರಿಸಲಾಯಿತು. ಬಿಜೆಪಿ ಮಂಡಲಾಧ್ಯಕ್ಷ ಹೇಮಂತಕುಮಾರ ಗಾಂವಕರ, ಕುಮಾರ ಕವರಿ, ಚಿದಾನಂದ ನಾಯ್ಕ ಇನ್ನಿತರರು ಇದ್ದರು.

error: