
ಭಟ್ಕಳ ಹೊನ್ನಾವರ ಶಾಸಕ ಸುನೀಲ ನಾಯ್ಕ ಮಂಗಳವಾರ ಹೊನ್ನಾವರ ತಾಲೂಕಿನ ಸರಳಗಿ ಮತ್ತು ಗೆರುಸೊಪ್ಪ ನ್ಯಾಯಬೆಲೆ ಅಂಗಡಿಗಳಿಗೆ ಭೇಟಿ ನೀಡಿ ಫಲಾನುಭವಿಗಳಿಗೆ ಸರ್ಕಾರ ಘೋಷಿಸಿರುವ ಪಡಿತರ ಸಾಮಾಗ್ರಿಗಳ ವಿತರಣೆಯನ್ನು ಪರಿಶೀಲಿಸಿದರು.
ಲಾಕ್ ಡೌನ್ ಹಿನ್ನೆಲೆಯಲ್ಲಿ ದೇಶದ್ಯಾದ್ಯಂತ ಆಹಾರ ಸಾಮಗ್ರಿಗಳ ಸರಬರಾಜು ತೊಂದರೆಯಾಗುತ್ತಿದ್ದು ಅದನ್ನು ಮನಗಂಡ ಸರಕಾರಿ ನ್ಯಾಯ ಬೆಲೆ ಅಂಗಡಿಯಿAದ ಸರಬರಾಜು ಆಗುತ್ತಿರುವ ಆಹಾರ ಸಾಮಗ್ರಿಗಳನ್ನು ಮನೆ ಭಾಗಿಲಿಗೆ ತಲುಪಿಸುವ ವ್ಯವಸ್ಥೆಯನ್ನು ಮಾಡುತ್ತಿದೆ, ಈ ನಿಟ್ಟಿನಲ್ಲಿ ಭಟ್ಕಳ ಹಾಗೂ ಹೊನ್ನಾವರ ತಾಲೂಕಿನಲ್ಲಿಯ ನ್ಯಾಯ ಬೆಲೆ ಅಂಗಡಿಯವರು ಸರಬರಜು ಮಾಡುತ್ತಿದ್ದು ಈ ಸಂದರ್ಬದಲ್ಲಿಕ ಶಾಸಕ ಸುನೀಲ ನಾಯ್ಕ ಬೇಟಿ ನೀಡಿ ಎಲ್ಲಾ ಫಲಾನುಭವಿಗಳಿಗೆ ಸರಕಾರ ನೀಡಿರುವ ಸೌಲಭ್ಯವನ್ನು ಸಮರ್ಪಕವಾಗಿ ವಿತರಿಸುವಂತೆ ಸೂಚಿಸಿದರು.
ನನ್ನ ಮತ ಕ್ಷೇತ್ರದ ಯಾವಬ್ಬ ಫಲಾನುಭವಿಗಳಿಗೂ ನ್ಯಾಯಬಲೆ ಅಂಗಡಿಗಳಲ್ಲಿ ಅನ್ಯಾಯವಾದಲ್ಲಿ ಅಂತವರು ನೇರವಾಗಿ ನನ್ನನ್ನು ಸಂಪರ್ಕಿಸಬಹುದು ಹಾಗೂ ಫಲಾನುಭವಿ ಜನಸಾಮಾನ್ಯರಿಗೆ ತೊಂದರೆ ಕೊಡುವಂತವರ ಮೇಲೆ ನಿರ್ಧಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದು ಈ ಸಂದರ್ಬದಲ್ಲಿ ಎಚ್ಚರಿಸುತ್ತಿದ್ದೇನೆ ಎಂದಿದ್ದಾರೆ.
More Stories
ಮೂರು ಜನ ಅನಾಥರನ್ನು ಆಟೋರಾಜ ಅನಾಥಾಶ್ರಮಕ್ಕೆ ಸೇರಿಸಿದ ಕರವೇ ಅಧ್ಯಕ್ಷ ಫ್ರಾನ್ಸಿಸ್ ಡಿಸೋಜ
ಶ್ರೀ ನಿಚ್ಚಲಮಕ್ಕಿ ವೆಂಕಟರಮಣ ದೇವಸ್ಥಾನ ದೇವರ ಪಲ್ಲಕ್ಕಿ ಉತ್ಸವ
ಶ್ರೀ ಕ್ಷೇತ್ರ ಮುಗ್ವಾದಲ್ಲಿ ಮಹಾದ್ವಾರ ಮತ್ತು ರಾಜಗೋಪುರ ಉದ್ಘಾಟನೆ ಫೆಬ್ರವರಿ ೩ ರಿಂದ ೬ರವರೆಗೆ ನಡೆಯಲಿದೆ.