
ಕುಮಟಾ ತಾಲೂಕಿನ ಶಾಲೆಗಳು, ಹಾಸ್ಟೇಲ್‌ಗಳಲ್ಲಿ ಮಕ್ಕಳಿಗೆ ಕೊಡಬೇಕಾದ ಬಿಸಿಯೂಟದ ಸಾಮಗ್ರಿಗಳನ್ನು ಶೀಘ್ರ ಆಯಾ ಮಕ್ಕಳ ಪಾಲಕರಿಗೆ ಕರೆಸಿ ವಿತರಿಸಬೇಕು ಎಂದು ತಾಲೂಕಾಡಳಿತ ಮತ್ತು ಬಿಇಓ ಅವರಿಗೆ ಒತ್ತಾಯಿಸಿದ್ದೇನೆ ಎಂದು ಕಬಡ್ಡಿ ಅಸೋಸಿಯೇಷನ್ ರಾಜ್ಯ ಉಪಾಧ್ಯಕ್ಷ ಸೂರಜ ನಾಯ್ಕ ತಿಳಿಸಿದ್ದಾರೆ.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಾಕ್?ಡೌನ್ ಆರಂಭವಾದ ಮೇಲೆ ಶಾಲೆಯಲ್ಲಿದ್ದ ಬಿಸಿಯೂಟದ ಸಾಮಗ್ರಿಗಳನ್ನು ಆಯಾ ಮಕ್ಕಳ ಪಾಲಕರನ್ನು ಕರೆಸಿ ವಿತರಿಸುವ ಕೆಲಸ ನಡೆದಿದ್ದು ಎಲ್ಲೆಡೆ ಬೇಗ ವಿತರಿಸಿ ಮುಗಿಸಬೇಕು. ಹಿಂದುಳಿದ ವರ್ಗ, ಪರಿಶಿಷ್ಟರ ಹಾಸ್ಟೇಲ್ ಹಾಗೂ ಸರ್ಕಾರಿ ವಸತಿ ಶಾಲೆಗಳಲ್ಲಿ ಉಳಿದಿದ್ದ ದಿನಸಿ ಆಹಾರ ಸಾಮಗ್ರಿ ವಿಲೇವಾರಿ ಮಾಡಬೇಕು. ಈ ಬಗ್ಗೆ ಉಪವಿಭಾಗಾಧಿüಕಾರಿಗಳಿಗೆ ವಿನಂತಿಸಿದಾಗ ಕ್ವಾರಂಟೈನ್ ಮಾಡಿದವರಿಗೆ ಆಹಾರಕ್ಕೆ ಬಳಸುತ್ತಿರುವುದಾಗಿ ತಿಳಿಸಿದ್ದಾರೆ. ಒಟ್ಟಾರೆ ಸರ್ಕಾರದಿಂದ ಬಂದಿದ್ದ ಆಹಾರ ಸಾಮಗ್ರಿ ಹಾಳಾಗುವುದರೊಳಗೆ ಸೂಕ್ತವಾಗಿ ಬಳಕೆಯಾಗಬೇಕು ಎಂದಿದ್ದಾರೆ.
More Stories
ಶತಾಯುಸಿ ಕರಿಯಮ್ಮ ನಿದನ
ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಭಟ್ಕಳ ಪುರಸಭೆ ಮುಖ್ಯಾಧಿಕಾರಿ
ದೀಪಾವಳಿ ಟ್ರೋಪಿ 2024-25 ಅನ್ವಿ ಕ್ರಿಕೆಟರ್ಸ್ ಗೆಲುವು ಸಾಧಿಸುವುದರ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿದೆ.