November 14, 2024

Bhavana Tv

Its Your Channel

ಭಟ್ಕಳ ಪಟ್ಟಣದಲ್ಲಿ ಮಂಗಳವಾರ ಬೆಳಿಗ್ಗೆ ಸುರಿದ ಬಾರಿ ಗಾಳಿ ಮಳೆಗೆ ಮರವೊಂದು ಉರುಳಿ ಬಿದ್ದು ನಡೆಯಬಹುದಾದ ದೊಡ್ಡ ಅನಾಹುತ ತಪ್ಪಿದೆ.

ಪಟ್ಟಣದ ಗಜಾನನ ಸ್ಟ್ರೀಟ್‌ನಲ್ಲಿರುವ ವೀರವಿಠಲ್ ದೇವಸ್ಥಾನದ ಆವರಣದಲ್ಲಿ ಅನಿಲ್ ಭಟ್ ಎನ್ನುವವರಿಗೆ ಸೇರಿದ ಮನೆಯ ಮೇಲೆ ಸಿಡಿಲು ಬಡಿದು ಮರ ಬಿದ್ದಿದೆ. ಅದೃಷ್ಟವಶಾತ ಮನೆಯ ಸದಸ್ಯರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ತಹಸೀಲ್ದಾರ ವಿ.ಪಿ.ಕೋಟ್ರಳ್ಳಿ, ವಿ.ಎ ಶಂಭು ಸಿ ಬೇಟಿ ನೀಡಿ ಪರೀಶೀಲನೆ ನಡೆಸಿದ್ದಾರೆ. ಮರ ಬಿದ್ದ ರಭಸಕ್ಕೆ ರಸ್ತೆಯ ಬದಿಯಲ್ಲಿದ್ದ ವಿದ್ಯುತ್ ಕಂಬ ಮುರಿದು ಬಿದ್ದಿದೆ. ಹೆಸ್ಕಾಂ ಇಲಾಖೆಯ ಎಇಇ ಮಂಜುನಾಥ ಮತ್ತು ಅವರ ತಂಡ ಬೇಟಿ ನೀಡಿ ಹಾನಿಯಾಗಿರುವ ಕಂಬವನ್ನು ಕೂಡಲೆ ಬದಲಿಸಿದ್ದಾರೆ.

error: