June 15, 2024

Bhavana Tv

Its Your Channel

ತನ್ನ ಜಿಲ್ಲೆಯ ಕಾರ್ಮಿಕರಿಗೆ ಅಗತ್ಯ ವಸ್ತುಗಳನ್ನು ಪೊರೈಸಿ, – ಮದ್ಯ ಪ್ರದೇಶದ ಭೋಪಾಲ್ ಜಿಲ್ಲೆಯ ಜಿಲ್ಲಾಧಿಕಾರಿ ತೇಜಸ್ವಿ ನಾಯ್ಕ

ಭಟ್ಕಳ: ತನ್ನ ಜಿಲ್ಲೆಯ ಕಾರ್ಮಿಕರಿಗೆ ಅಗತ್ಯ ವಸ್ತುಗಳನ್ನು ಪೊರೈಸಿ, ಸಹಕಾರ ನೀಡಿ ಎಂದು ಮದ್ಯ ಪ್ರದೇಶದ ಭೋಪಾಲ್ ಜಿಲ್ಲೆಯ ಜಿಲ್ಲಾಧಿಕಾರಿ ತೇಜಸ್ವಿ ನಾಯ್ಕ ಭಟ್ಕಳದ ಗಗನ ಕುಸುಮ ಫೌಂಡೇಶನನ ರಾಜ್ಯಧ್ಯಕ್ಷರಿಗೆ ಕರೆ ಮಾಡಿದ ಘಟನೆ ಗುರುವಾರ ನಡೆದಿದೆ.

ಭಟ್ಕಳದ ನಾಗಪ್ಪ ನಾಯ್ಕ ರಸ್ತೆಯ ಡಿ.ಪಿ ಕಾಲೊನಿಯಲ್ಲಿ ಯು.ಪಿ ಮೂಲದ ಕೂಲಿ ಕಾರ್ಮಿಕರು ವಾಸವಾಗಿದ್ದು. ಲಾಕ್‌ಡೌನನಿಂದಾಗಿ ದಿನ ನಿತ್ಯ ಬಳಕೆಯ ವಸ್ತುಗಳ ಕೊರತೆಯಿಂದ ಬಳಲುತ್ತಿದ್ದ ಕಾರ್ಮಿಕರು ತಮ್ಮ ಜಿಲ್ಲೆಯಾದ ಭೋಪಾಲ್ ಹೆಲ್ಪಲೈನ್‌ಗೆ ಕರೆ ಮಾಡಿ ತಮಗಾಗುತ್ತಿರುವ ಸಂಕಷ್ಟ ತೊಡಿಕೊಂಡಿದ್ದರು. ಲಾಕ್‌ಡೌನ್ ಹೇರಿಕೆಯಾಗಿದ್ದರಿಂದ ತಮಗೆ ದಿನನಿತ್ಯದ ಅಗತ್ಯ ವಸ್ತುಗಳು ದೊರಯದೆ ತಮ್ಮ ಕುಟುಂಬ ಸಂಕಷ್ಟದಲ್ಲಿದೆ. ನಮಗೆ ಸಹಾಯ ಮಾಡಿ ಎಂದು ಮನವಿ ಮಾಡಿದ್ದರು. ಭೂಪಾಲ್ ಜಿಲ್ಲೆಯ ಕಾರ್ಮಿಕರ ಕರೆಯನ್ನು ಗಂಭಿರವಾಗಿ ಪರಿಗಣಿಸಿದ ಭೂಪಾಲ ಜಿಲ್ಲೆಯ ಜಿಲ್ಲಾಧಿಕಾರಿ ತೇಜಸ್ವಿ ನಾಯ್ಕ ಗಗನಕುಸುಮ ಫೌಂಡೇಶನನ ರಾಜ್ಯಧ್ಯಕ್ಷರಾದ ಭಟ್ಕಳ ಮೂಲದ ಸುರೇಶ ರಾಮಾ ನಾಯ್ಕ ಅವರಿಗೆ ಕರೆ ಮಾಡಿದ್ದಾರೆ. ಕರೆಗೆ ಸ್ಪಂದಿಸಿದ ಸುರೇಶ ನಾಯ್ಕ ಹಾಗೂ ಮೋಹನ ನಾಯ್ಕ ಸಂಕಷ್ಟದಲ್ಲಿದ್ದ ಕಾರ್ಮಿಕರ ಮಾಹಿತಿ ಕಲೆಹಾಕಿ ಕೂಡಲೆ ಅಲ್ಲಿಗೆ ತೆರಳಿ ೨ ತಿಂಗಳ ದಿನಸಿ ಸಾಮಾಗ್ರಿಗಳನ್ನು ವಿತರಿಸಿದ್ದಾರೆ. ಅಲ್ಲದೆ ಅವರಿಗೆ ಫೌಂಡೇಶನ್ ಸದಸ್ಯರು ಸಾಂತ್ವಾನ ಹೇಳಿ ಸಂಕಷ್ಟಕ್ಕೆ ಸ್ಪಂದಿಸುವ ಭರವಸೆ ನೀಡಿದ್ದಾರೆ.ಮದ್ಯ ಪ್ರದೇಶದ ಜಿಲ್ಲಾಧಿಕಾರಿಗಳ ಕಾಳಜಿಗೆ ಭಟ್ಕಳದಲ್ಲಿ ಸಾರ್ವಜನಿಕರಿಂದ ಭಾರಿ ಪ್ರಶಂಸೆ ವ್ಯಕ್ತವಾಗಿದೆ.

error: