February 13, 2025

Bhavana Tv

Its Your Channel

ಜಿ.ಪಂ ಸದಸ್ಯ ರತ್ನಾಕರ ನಾಯ್ಕರಿಂದ ಆರ್ಥಿಕ ಧನ ಸಹಾಯ

ಕುಮಟಾ: ಕೆಲ ದಿನಗಳ ಹಿಂದೆ ಮನೆಯೊಂದಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿ, ಸಂಪೂರ್ಣ ಭಸ್ಮಗೊಂಡು, ತೀವ್ರ ತೊಂದರೆಗೆ ಸಿಲುಕಿದ್ದ ಕುಮಟಾ ತಾಲೂಕಿನ ಬಾಡ ಗ್ರಾ.ಪಂ ವ್ಯಾಪ್ತಿಯ ಗುಡೇಅಂಗಡಿಯ ಕುಟುಂಬವೊAದಕ್ಕೆ ಜಿ.ಪಂ ಸದಸ್ಯ ಹಾಗೂ ಕಾಂಗ್ರೆಸ್ ಟಾಸ್ಕ್ಫೋರ್ಸ್ ತಾಲೂಕಾಧ್ಯಕ್ಷ ರತ್ನಾಕರ ನಾಯ್ಕ ಆರ್ಥಿಕ ಧನ ಸಹಾಯ ಮಾಡಿದರು.

ಕಳೆದ ೪ ವರ್ಷದ ಹಿಂದೆ ಮರದಿಂದ ಆಕಸ್ಮಿಕವಾಗಿ ಆಯತಪ್ಪಿ ಬಿದ್ದು ಹಾಸಿಗೆ ಮೇಲೆ ಜೀವನ ಸಾಗಿರುತ್ತಿರುವ ರಾಘವ ನಾರಾಯಣ ಪಟಗಾರ ಎಂಬುವವರಿಗೆ ಸೇರಿದ ಮನೆಗೆ ಕೆಲ ದಿನಗಳ ಹಿಂದೆ ಆಕಸ್ಮಿಕವಾಗಿ ಬೆಂಕಿ ತಗುಲಿ, ಅಪಾರ ಹಾನಿಯಾಗಿತ್ತು. ಮರದಿಂದ ಬಿದ್ದು ಹಾಸಿಗೆ ಮೇಲೆ ನರಳಾಡುತ್ತಿರುವ ಪತಿಯ ವೈದ್ಯಕೀಯ ಚಿಕಿತ್ಸೆಗಾಗಿ ಈತನ ಪತ್ನಿ ಕೂಲಿ ಮಾಡಿ, ಕುಟುಂಬ ನಿರ್ವಹಣೆ ಮಾಡಿಕೊಳ್ಳುತ್ತ, ಕೆಲ ವರ್ಷಗಳ ಹಿಂದೆ ಸಣ್ಣ ಮನೆ ನಿರ್ಮಿಸಿಕೊಂಡಿದ್ದರು. ಆದರೆ ವಿಧಿಯಾಟದಂತೆ ಕೆಲದಿನಗಳ ಹಿಂದೆ ಅಗ್ನಿ ದುರಂತದಿAದ ಇಡೀ ಕುಟುಂಬವೇ ನಲುಗಿಹೋಗಿತ್ತು. ಇದನ್ನು ಗಮನಿಸಿದ ರತ್ನಾಕರ ನಾಯ್ಕ ಸ್ವತಃ ಇವರ ಮನೆಗೆ ಭೇಟಿಯಿತ್ತು. ಕುಟುಂಬಸ್ಥರಿಗೆ ಸಾಂತ್ವಾನ ತಿಳಿಸಿ, ಆರ್ಥಿಕ ಧನ ಸಹಾಯ ಮಾಡಿ, ಮಾನವೀಯತೆ ಮೆರೆದಿದ್ದಾರೆ.

error: