October 5, 2024

Bhavana Tv

Its Your Channel

ನ್ಯಾಯಬೆಲೆ ಅಂಗಡಿಗೆ ಬೇಟಿ ನೀಡಿ ಅಂಗಡಿಕಾರರನ್ನು ತರಾಟೆಗೆ ತೆಗೆದುಕೊಂಡ ಶಾಸಕ ಸುನೀಲ ನಾಯ್ಕ

ಶಿರಾಲಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಒಟಿಪಿ ಸಮಸ್ಯೆಯಿಂದ ಅಕ್ಕಿ ವಿತರಣೆ ಮಾಡುತ್ತಿಲ್ಲ ಎಂಬ ಸಾರ್ವಜನಿಕರ ದೂರಿನ ಮೇರೆಗೆ ಸಂಭAದಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರೂ ಇಂದು ಮತ್ತು ಅದೇ ತಪ್ಪನ್ನು ಶಿರಾಲಿಯ ನ್ಯಾಯಬೆಲೆ ಅಂಗಡಿಯಲ್ಲಿ ಮುಂದುವರಿಸಿದ್ದು ಕೂಡಲೆ ಸ್ಥಳಕ್ಕೆ ಶಾಸಕ ಸುನೀಲ ನಾಯ್ಕ ಭೇಟಿ ನೀಡಿ ತರಾಟೆಗೆ ತೆಗೆದುಕೊಂಡು ಸರ್ಕಾರದ ಆದೇಶವನ್ನು ಪಾಲಿಸುವಂತೆ ಕಟ್ಟುನಿಟ್ಟಾಗಿ ತಾಕೀತು ಮಾಡಿದರು.

ದೇಶಾದ್ಯಂತ ಕರೋನ ವೈರಸ್ ಹರಡುತ್ತಿರುವ ಹಿನ್ನೆಲೆಯಲ್ಲಿ ಘೋಷಿಸಿದ ಮೆಡಿಕಲ್ ಎಮರ್ಜೆನ್ಸಿಯ ಕಾರಣ , ಜನರಿಗೆ ತಿಂಗಳಿನ ಪಡಿತರ ವಿತರಣೆಯ ನಿಯಮಗಳಲ್ಲಿ ಸಡಿಲಿಕೆಯನ್ನು ಘನ ಸರ್ಕಾರವು ನೀಡಿದೆ. ಅದರಂತೆ ನ್ಯಾಯಬೆಲೆ ಅಂಗಡಿಗಳಲ್ಲಿ ಅಕ್ಕಿಯನ್ನು ವಿತರಿಸಲು ಒಟಿಪಿ ಸಮಸ್ಯೆ ಉಂಟಾಗುತ್ತಿತ್ತು. ಸರ್ಕಾರ ತುರ್ತು ಪರಿಸ್ಥಿತಿಯ ಸಲುವಾಗಿ ಈ ನಿಯಮಾವಳಿಯಲ್ಲಿ ಕೊಂಚ ಸಡಿಲಿಕೆಯನ್ನು ನೀಡಿದ್ದು , ಒಟಿಪಿಯ ಸಮಸ್ಯೆ ಇದ್ದಲ್ಲಿ ಒಟಿಪಿ ಇಲ್ಲದೆಯೂ ಪಡಿತರ ಅಕ್ಕಿ ವಿತರಿಸುವಂತೆ ಆದೇಶಿಸಿದೆ. ಆದರೆ ನಿನ್ನೆಯ ದಿನ ಭಟ್ಕಳ ತಾಲೂಕಿನ ಶಿರಾಲಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಒಟಿಪಿ ಸಮಸ್ಯೆಯಿಂದ ಅಕ್ಕಿ ವಿತರಣೆ ಮಾಡುತ್ತಿಲ್ಲ ಎಂಬ ಸಾರ್ವಜನಿಕರ ದೂರಿನ ಮೇರೆಗೆ ಸಂಭAದಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು ಇಂದು ಮತ್ತು ಅದೇ ತಪ್ಪನ್ನು ಶಿರಾಲಿಯ ನ್ಯಾಯಬೆಲೆ ಅಂಗಡಿಯಲ್ಲಿ ಮುಂದುವರಿಸಿದ್ದು ಕೂಡಲೆ ಸ್ಥಳಕ್ಕೆ ಶಾಸಕ ಸುನೀಲ ನಾಯ್ಕ ಭೇಟಿ ನೀಡಿ ನ್ಯಾಯ ಬೆಲೆ ಅಂಗಡಿಯವರನ್ನು ತರಾಟಗೆ ತೆಗೆದು ಕೊಂಡರು. ಸರ್ಕಾರದ ಆದೇಶವನ್ನು ಪಾಲಿಸುವಂತೆ ಕಟ್ಟುನಿಟ್ಟಾಗಿ ತಾಕೀತು ಮಾಡಿ ಕೂಡಲೆ ಕ್ರಮ ಜರುಗಿಸುವಂತೆ ಆಹಾರ ನೀರಿಕ್ಷಕರಿಗೆ ಹಾಗೂ ಪಿಡಿಒರವರಿಗೆ ಆದೇಶ ನೀಡಿದರು.

error: