April 1, 2023

Bhavana Tv

Its Your Channel

ಕೆ ಇ ಬಿ ಪಿಂಚಣಿದಾರರಿoದ ಒಂದು ದಿವಸದ ಪಿಂಚಣಿಯನ್ನು ಕೊರೋನಾ ಪರಿಹಾರ ನಿಧಿಗೆ ನೀಡಲು ಒಪ್ಪಿಗೆ.

ಹೊನ್ನಾವರ : ದೇಶದೆಲ್ಲೆಡೆ ಹಬ್ಬುತ್ತಿರುವ ಮಹಾಮಾರಿ ಕೊರೋನಾ ಸೋಂಕು ನಿಯಂತ್ರಿಸಲು ನಮ್ಮ ಪ್ರಧಾನಿ ಮೋದಿಯವರು ಮೇ ೩ ರ ವರೆಗೆ ಎರಡನೇ ಹಂತದ ಲಾಕ್ ಡೌನ್ ಘೋಷಣೆ ಮಾಡಿದ್ದಾರೆ. ಇಂತಹ ಸಮಯದಲ್ಲಿ ನಾವೆಲ್ಲ ಮನೆಯಲ್ಲೇ ಇದ್ದು ಆದೇಶ ಪಾಲನೆ ಮಾಡೋಣ .ಈಗಾಗಲೇ ಕೆ ಇ ಬಿ ಪಿಂಚಣಿದಾರರ ರಾಜ್ಯ ಸಂಘದಿAದ ಎಲ್ಲ ಪಿಂಚಣಿದಾರರ ಏಪ್ರಿಲ್ ತಿಂಗಳ ಒಂದು ದಿವಸದ ಪಿಂಚಣಿಯನ್ನು ಕೊರೋನಾ ಪರಿಹಾರ ನಿಧಿಗೆ ನೀಡುವ ಸಲುವಾಗಿ ಪ್ರಾದೇಶಿಕ ಸಮೀತಿಗೆ ಮನವಿ ಮಾಡಿಕೊಂಡಿದ್ದು , ಹೊನ್ನಾವರ,ಕುಮಟಾ ಮತ್ತು ಭಟ್ಕಳ ವ್ಯಾಪ್ತಿಯಲ್ಲಿ ಬರುವ ಹೊನ್ನಾವರ ಪ್ರಾದೇಶಿಕ ಸಮೀತಿಯಿಂದ ಒಂದು ದಿನದ ಪಿಂಚಣಿ ಕಡಿತ ಮಾಡಲು ಒಪ್ಪಿಗೆ ನೀಡಲಾಗಿದೆ . ಹಾಗೆಯೆ ಪಿಂಚಣಿ ಜಮಾ ಆಗುವ ಬ್ಯಾಂಕ್ ಮೇನೇಜರರು ಹಣ ಪಡೆಯಲು ಪಿಂಚಣಿದಾರರು ಅನಾವಶ್ಯಕ ಬ್ಯಾಂಕಿಗೆ ಬರದೇ ಸಮೀಪದ ಎ ಟಿ ಎಂ ಬಳಸಿಕೊಳ್ಳುವಂತೆ ಮನವಿ ಮಾಡಿಕೊಂಡಿದ್ದಾರೆ.
ಹೆಸ್ಕಾಂ ಮತ್ತು ಕೆ ಪಿ ಟಿ ಸಿ ಎಲ್ ಪಿಂಚಣಿದಾರರು ಏಪ್ರಿಲ್ ತಿಂಗಳಲ್ಲಿ ತಮ್ಮ ಜೀವಿತ ಪ್ರಮಾಣ ಪತ್ರ ನೀಡಬೇಕಾಗಿದ್ದು ತಾತ್ಕಾಲಿಕವಾಗಿ ಮುಂದಿನ ಆದೇಶ ಬರುವವರೆಗೆ ಮುಂದೂಡಲಾಗಿದೆ .ಈ ಸಂಕಷ್ಟ ಕಾಲದಲ್ಲಿ ಎಲ್ಲ ಪಿಂಚಣಿದಾರರು ಸರಕಾರದ ಆದೇಶವನ್ನು ಕಡ್ಡಾಯವಾಗಿ ಪಾಲಿಸಿ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳೋಣ ಎಂದು ಕೆ ಇ ಬಿ ಪಿಂಚಣಿದಾರರ ಸಂಘ ಪ್ರಾದೇಶಿಕ ಸಮೀತಿ ಹೊನ್ನಾವರ ಇದರ ಕೇಂದ್ರ ಕಾರ್ಯಕಾರಿ ಸಮೀತಿ ಸದಸ್ಯರಾದ ದೇವಿದಾಸ ಡಿ ಮಡಿವಾಳ ತಿಳಿಸಿದ್ದಾರೆ.

About Post Author

error: