July 14, 2024

Bhavana Tv

Its Your Channel

ಈ ಬೇಸಿಗೆಯಲ್ಲಿ ಕುಮಟಾ ಹೊನ್ನಾವರದ ಜನತೆಗೆ ಕುಡಿಯುವ ನೀರಿಗೆ ತೊಂದರೆ ಆಗುವುದಿಲ್ಲ-ಶಾಸಕ ದಿನಕರ ಶೆಟ್ಟಿ

ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಜನತೆ ಕಳೆದ 21 ದಿನಗಳ ಲಾಕ್ ಡೌನ್‌ ಗೆ ಸಂಪೂರ್ಣ ಸ್ಪಂದಿಸಿದ್ದು ಇನ್ನೂ 19 ದಿನಗಳು ಇದೇ ರೀತಿಯಲ್ಲಿ ಸಹಕರಿಸಿ ಕರೋನಾ ಮಹಾ ಮಾರಿ ಒಡಿಸುವ ಪ್ರಧಾನಿ ನರೇಂದ್ರ ಮೋದಿಯವರ ಸಂಕಲ್ಪಕ್ಕೆ ಸಹಕಾರ ನೀಡಬೇಕು ಎಂದು ಶಾಸಕ ದಿನಕರ ಶೆಟ್ಟಿಯವರು ಜನತೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಅವರು ಮಂಗಳ ಭಾವನಾ ವಾಹಿನಿಯೊಂದಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ 21 ಲಾಕ್ ಡೌನ್ ಗಳ ಕುರಿತು ಮಾತನಾಡಿದರು.
ಹೊನ್ನಾವರ ಕುಮಟ ವಿಧಾನಸಭಾ ಕ್ಷೇತ್ರದ ಜನತೆಗೆ ಸರ್ಕಾರದಿಂದ ನೀಡಿದ ಪಡಿತರ ಸೌಲಭ್ಯಗಳನ್ನು ಸಂಪೂರ್ಣವಾಗಿ ಮುಟ್ಟಿಸಲು ಪ್ರಯತ್ನ ಮಾಡಲಾಗಿದೆ. ಅಲ ಉಚಿತ ಹಾಲು ಕೂಡ ನೀಡಲಾಗಿದೆ.
ಆಟೋರಿಕ್ಷಾ ಚಾಲಕರಿಗೆ ಸೇರಿದಂತೆ ಕಡು ಬಡವರಿಗೆ ವಯಕ್ತಿಕ ವಾಗಿ ನನ್ನಿಂದ ಆದಷ್ಟು ಸಹಾಯ ಮಾಡಿದ್ದೆನೆ ಎಂದು ತಿಳಿಸಿದರು.
ದಾನಿಗಳು ತಮ್ಮ ಸುತ್ತಮುತ್ತಲಿನ ಕಡು ಬಡವರಿಗೆ ಆದಷ್ಟು ಸಹಾಯ ಮಾಡಬೇಕು. ನಮ್ಮ ದೇಶ ಅನುಭವಿಸುತ್ತಿರುವ ಈ ತುರ್ತುಪರಿಸ್ಥಿತಿ ಯನ್ನು ಸಮರ್ಥವಾಗಿ ನಿಭಾಯಿಸಲು ಪ್ರತಿಯೊಬ್ಬರೂ ಸಹಕಾರ ನೀಡಬೇಕದರು.
ಈ ಬೇಸಿಗೆಯಲ್ಲಿ ಕುಮಟಾ ಹೊನ್ನಾವರದ ಜನತೆಗೆ ಕುಡಿಯುವ ನೀರಿಗೆ ತೊಂದರೆ ಆಗುವುದಿಲ್ಲ. ಯಾಕೆಂದರೆ ಕಳೆದ ಸಾಲಿನಲ್ಲಿ ಈ ಕುರಿತು ಹೆಚ್ಚಿನ ಕಾಮಗಾರಿಯನ್ನು ಮಾಡಿಸಿದ್ದೆನೆ. ಗೇರಸಪ್ಪಾ ಹೊನ್ನಾವರ ಕುಡಿಯುವ ನೀರಿನ ಯೋಜನೆ ತ್ವರಿತವಾಗಿ ಮಾಡಲು ಈಗಾಗಲೇ ಅರಣ್ಯ ಇಲಾಖೆಯಿಂದ ಅನುಮತಿ ಪಡೆಯಲಾಗಿದೆ ಎಂದು ವಿವರ ನೀಡಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವರಾಗಿ ಜವಾಬ್ದಾರಿ ಹೊತ್ತಿರುವ ಶಿವರಾಮ ಹೆಬ್ಬಾರರವರಿಂದ ಜಿಲ್ಲೆ ಸರ್ವಾಂಗೀಣ ಅಭಿವೃದ್ಧಿ ಸಾಧಿಸಲಿದೆ ಎಂದರು…..

error: