March 21, 2023

Bhavana Tv

Its Your Channel

ಮಲ್ಲಿಗೆ ಬೆಳೆಗಾರರ ಕಷ್ಟವನ್ನು ಪರಿಹರಿಸುವ ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು -ಶಾಸಕ ಸುನೀಲ್ ನಾಯ್ಕ

ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನಲ್ಲಿ ತಲೆತಲಾಂತರದಿAದ ಸಣ್ಣ ಮತ್ತು ಅತಿ ಸಣ್ಣ ರೈತರು ಮಲ್ಲಿಗೆ ಬೆಳೆಯನ್ನೆ ನಂಬಿ ಜೀವನ ನಡೆಸುತ್ತಿದ್ದಾರೆ. ಕೋವಿಡ್ ೧೯ ನಿಂದಾಗಿ ಚಾಲ್ತಿಯಲ್ಲಿರುವ ಲಾಕ್ ಡೌನ್ ಹಿನ್ನೆಲೆಯಲ್ಲಿ ವ್ಯಾಪಾರ ವಹಿವಾಟು ಸಂಪೂರ್ಣ ಸ್ಥಗಿತಗೊಂಡಿದ್ದು ಮಲ್ಲಿಗೆ ಬೆಳೆಗಾರರ ಕುಟುಂಬವು ಆರ್ಥಿಕ ಸಂಕಷ್ಟಕ್ಕೆ ಈಡಾಗಿದೆ.

ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ಮಲ್ಲಿಗೆ ಬೆಳೆಗಾರರಿಗೆ ಪರಿಹಾರ ದೂರಕಿಸಿಕೊಡುವ ಪ್ರಕ್ರಿಯೆ ನಡೆಯುತ್ತಿದ್ದು ಮುಂದಿನ ದಿನಗಳಲ್ಲಿ ಈ ವಿಚಾರದ ಕುರಿತು ಖುದ್ದು ಮುಖ್ಯಮಂತ್ರಿಗಳ ಗಮನಕ್ಕೆ ತಂದು ತನ್ನ ಕ್ಷೇತ್ರದ ಮಲ್ಲಿಗೆ ಬೆಳೆಗಾರರ ಕಷ್ಟವನ್ನು ಪರಿಹರಿಸುವ ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು ಎಂದು ಭಟ್ಕಳ ವಿಧಾನಸಭಾ ಕ್ಷೇತ್ರ ಶಾಸಕರಾದ ಸುನೀಲ್ ನಾಯ್ಕ ಹೇಳಿದ್ದಾರೆ.

About Post Author

error: