ಹೊನ್ನಾವರ- ದೇಶಾದ್ಯಂತ ಒಕ್ಕರಿಸಿಕೊಂಡಿರುವ ಕರೊನಾ ಮಹಾಮಾರಿಯ ಲಾಕ್ ಡೌನ್ ನಿಂದ ಮೀನುಗಾರರು ತೀವ್ರ ಸಂಕಷ್ಟಗಳಿಗೆ ಸಿಲುಕಿದ್ದು ಮೀನುಗಾರಿಕೆ ಅವಶ್ಯವಿರುವ ಎಲ್ಲಾ ಅಗತ್ಯ ವಸ್ತುಗಳ ಬಳಕೆಗೆ ವ್ಯವಸ್ಥೆ ಕಲ್ಪಿಸಿಕೊಡಬೇಕೆಂದು ಮೀನುಗಾರರ ಮುಖಂಡ, ಮಂಕಿ ಹಳೇಮಠ ಗ್ರಾಮಪಂಚಾಯತ ಉಪಾಧ್ಯಕ್ಷ ಸುರೇಶ ಖಾರ್ವಿ ಯವರು ಜಿಲ್ಲಾಡಳಿತ ಕ್ಕೆ ವಿನಂತಿ ಮಾಡಿಕೊಂಡಿದ್ದಾರೆ.
ಇಪ್ಪತ್ತೊಂದು ದಿನಗಳ ಲಾಕ್ ಡೌನ್ ನಿಂದ ಮೀನುಗಾರರು ಆರ್ಥಿಕವಾಗಿ ತತ್ತರಿಸಿ ಹೋಗಿದ್ದಾರೆ. ಅನೇಕ ಮೀನುಗಾರ ಮುಖಂಡರ ಹಾಗೂ ಶಾಸಕರ ,ಸಂಸದರ ಹಾಗೂ ಸಭಾಪತಿಗಳ ಪ್ರಯತ್ನದ ಫಲವಾಗಿ ಸನ್ಮಾನ್ಯ ಮುಖ್ಯಮಂತ್ರಿಳು ಹಾಗೂ ಮೀನುಗಾರಿಕಾ ಸಚಿವರು ಸಾಂಪ್ರದಾಯಿಕ ಹಾಗೂ ನಾಡದೋಣಿಯವರಿಗೆ ಮೀನುಗಾರಗಾರರಿಗೆ ಮೀನುಗಾರಿಕೆಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಮನವಿಗೆ ಸ್ಪಂದಿಸಿದ ಎಲ್ಲರಿಗೂ ನಾನು ಸಮಸ್ತ ಮೀನುಗಾರರ ಪರವಾಗಿ ಅಭಾರಿಯಾಗಿದ್ದೆನೆ.
ಎಪ್ರಿಲ್ 15ರಿಂದ ಅಧಿಕೃತ ವಾಗಿ ಮೀನುಗಾರಿಕೆಗೆ ಅವಕಾಶ ದೊರೆತ್ತಿದ್ದು ತಾಲ್ಲೂಕು ಆಡಳಿತ ಅವರಿಗೆ ಬೇಕಾದ ಅಗತ್ಯ ವ್ಯವಸ್ಥೆಗಳನ್ನು ಕಲ್ಪಿಸಿಕೊಡಬೇಕಾಗಿದೆ.
ಮೀನುಗಾರಿಕೆ ಅಗತ್ಯ ವಾಗಿ ಪೆಟ್ರೋಲ್ ವ್ಯವಸ್ಥೆಯಾಗಬೇಕಾಗಿದೆ.ಅಲ್ಲದೇ ಮೀನು ಮಾರಾಟಕ್ಕೆ ಹಾಗೂ ಒಡಾಟಕ್ಕೆ ತಕ್ಷಣ ಪಾಸ ವ್ಯವಸ್ಥೆಯಾಗಬೇಕಾಗಿದೆ. ಇಲ್ಲದಿದ್ದರೆ ಮೀನುಗಾರಿಕೆ ಮಾಡಲು ಇನ್ನೂ ವಿಳಂಬ ವಾಗುತ್ತದೆ. ಮಾನ್ಯ ದಂಡಾಧಿಕಾರಿಗಳು ಈ ಬಗ್ಗೆ ತಕ್ಷಣ ಕ್ರಮಕೈಗೊಂಡು ನಾಡದೋಣಿ ಹಾಗೂ ಸಾಂಪ್ರದಾಯಿಕ ಮೀನುಗಾರರಿಗೆ ಮೀನುಗಾರಿಗೆ ಅವಕಾಶ ಮಾಡಿಕೊಡಬೇಕೆಂದು ವಿನಂತಿಸಿಕೊಂಡಿದ್ದಾರೆ.
More Stories
ಹವ್ಯಾಸಿ ಯಕ್ಷಗಾನ ಕಲಾವಿದ ಕೃಷಿಕ ಕೃಷ್ಣಪ್ಪ ನಾಯ್ಕ ನಿಧನ
ಅಕ್ರಮವಾಗಿ ಗಾಂಜಾ ಮಾರಾಟ, ಭಟ್ಕಳ ಪೊಲೀಸರು ದಾಳಿ ಮಾಡಿ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿ
ಭಟ್ಕಳ ಕರಾವಳಿ ಕಾವಲು ಪೊಲೀಸ್ ಠಾಣೆಯವರು ನಡೆಸಿದ ಅಣಕು ಕಾರ್ಯಾಚರಣೆಯಲ್ಲಿ ಆರು ಜನ ಭಯೋತ್ಪಾದಕರನ್ನು ಬಂಧಿಸುವಲ್ಲಿ ಯಶಸ್ವಿ