September 18, 2024

Bhavana Tv

Its Your Channel

ಮಾಸೂರಿನ ಜನತೆಗೆ ತರಕಾರಿ ವಿತರಣೆ ಮಾಡಿದ ಶಾಸಕ

ಕುಮಟಾ ; ಲಾಕ್ ಡೌನ್ ಆದಾಗಿನಿಂದಲೂ ಕುಮಟಾ ಹೊನ್ನಾವರ ಕ್ಷೇತ್ರದ ಬಡ ಜನರ, ಕೂಲಿಕಾರರ, ರಿಕ್ಷಾ ಟೆಂಪೊ ಚಾಲಕರ ಕಷ್ಟಕ್ಕೆ ಸ್ಪಂದಿಸಿದ ಶಾಸಕ ದಿನಕರ ಶೆಟ್ಟಿ ತರಕಾರಿ ದಿನಸಿಗಳನ್ನು ಪ್ರತಿದಿನ ಒಂದೊAದು ಕಡೆ ವಿತರಣೆ ಮಾಡುತ್ತ ಬಂದಿದ್ದು ಕ್ಷೇತ್ರದಾದ್ಯಂತ ಜನರು ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ..

ಅದರಂತೆ ರವಿವಾರ ಧಾರೇಶ್ವರದ ಹೊರಭಾಗ ಮತ್ತು ಹೆಗಡೆ ಪಂಚಾಯಿತಿ ವ್ಯಾಪ್ತಿಯ ಮಾಸೂರಿನಲ್ಲಿ ಬಡ ಜನರಿಗೆ ತರಕಾರಿ ವಿತರಿಸಿದರು.. ವಿತರಣೆ ಮಾಡಿ ಮಾತನಾಡುತ್ತ ನಮ್ಮ ಕೇಂದ್ರ ಸರ್ಕಾರ ದಿಂದ ಮೋದೀ ಜೀ ಯವರು ರೈತರ, ಮಹಿಳೆಯರ ಕಷ್ಟಕ್ಕೆ ಸ್ಪಂದಿಸಿ ರೈತರಿಗೆ ರೈತ ಸಮ್ಮಾನ ಯೋಜನೆಯಡಿ ಎರಡು ಸಾವಿರ ಹಾಗೂ ಮಹಿಳೆಯರಿಗೆ ಗ್ಯಾಸ್ ನ್ನು ಉಚಿತವಾಗಿ ನೀಡುತ್ತಿದ್ದಾರೆ ಅದೇ ರೀತಿ ಯಡಿಯೂರಪ್ಪ ಜೀ ಸರ್ಕಾರ ಕೂಡ ಪ್ರತಿಯೊಬ್ಬರ ಆರೋಗ್ಯ ರಕ್ಷಣೆ ಗಾಗಿ ಹಾಗೂ ಜನರಿಗೆ ತೊಂದರೆ ಆಗದಂತೆ ಹಗಲಿರುಳು ಶ್ರಮಿಸುತ್ತಿರುವ ಈ ಸಂದರ್ಭದಲ್ಲಿ ನಾನೂ ಕೂಡ ನನ್ನ ಕ್ಷೇತ್ರದ ಜನರಿಗೆ ನನ್ನ ಕೈಯಿಂದಾದ ಸಹಾಯ ಮಾಡುತ್ತಿದ್ದೇನೆ. ಇದು ಪ್ರತಿದಿನ ನಡೆಯುತ್ತದೆ ಎಂದರು..

ಈ ಸಂದರ್ಭದಲ್ಲಿ ಮಾಸೂರಿನ ಪ್ರಮುಖರಾದ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಗೋವಿಂದ ಪಟಗಾರ, ಹೆಗಡೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜುನಾಥ ಪಟಗಾರ, ಸದಸ್ಯರಾದ ಸದಾನಂದ ಪಟಗಾರ, ಪ್ರಭಾಕರ ಪಟಗಾರ, ರಾಜು ಮುಕ್ರಿ, ಶರತ ನಾಯ್ಕ ಹಾಗೂ ಇತರರು ಉಪಸ್ಥಿತರಿದ್ದರು..
ಇದೇ ಸಂದರ್ಭದಲ್ಲಿ ಮಾಸೂರಿನ ಇಬ್ಬರು ಆರೋಗ್ಯ ಸಮಸ್ಯೆ ಎದುರಿಸಿದವರಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಪರಿಹಾರ ಹಣದ ಚೆಕ್ ಕೂಡ ವಿತರಿಸಿದರು

error: