October 5, 2024

Bhavana Tv

Its Your Channel

ವಶಪಡಿಸಿಕೊಂಡಿರುವ ಗಾಂಜಾಗಿಡಗಳ ನಾಶ

ಶಿವಮೊಗ್ಗ: ಫೆಬ್ರವರಿ 06: ಶಿವಮೊಗ್ಗ ಜಿಲ್ಲಾ ವ್ಯಾಪ್ತಿಯಲ್ಲಿ ಎನ್‍ಡಿಪಿಎಸ್ ಕಾಯ್ದೆಯಡಿ ದಾಖಲಿಸಿರುವ 56 ಪ್ರಕರಣಗಳಲ್ಲಿನ ಒಟ್ಟು 107.853 ಕೆ.ಜಿ ಗಾಂಜಾ ಹಾಗೂ 11358 ಗಾಂಜಾ ಗಿಡಗಳನ್ನು ಎನ್‍ಡಿಪಿಎಸ್ ಕಾಯ್ದೆಯಲ್ಲಿ ತಿಳಿಸಿರುವ ನಿಯಮಗಳಂತೆ ಹಾಗೂ ಮಾನ್ಯ ಸರ್ವೋಚ್ಚ ನ್ಯಾಯಾಲಯದ ಆದೇಶದಲ್ಲಿ ನೀಡಿರುವ ನಿರ್ದೇಶನಗಳನುಸಾರ ಪರಿಸರಕ್ಕೆ ಹಾಗೂ ಪ್ರಾಣಿ ಪಕ್ಷಿಗಳಿಗೆ ಹಾನಿಯಾಗದಂತೆ ಶಿವಮೊಗ್ಗ ಜಿಲ್ಲೆ, ಭದ್ರಾವತಿ ತಾಲ್ಲೂಕು ಮಾಚೇನಹಳ್ಳಿಯ, ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ಶುಶೃತ ಬಯೋ-ಮೆಡಿಕಲ್ ವೇಸ್ಟ್ ಮ್ಯಾನೇಜ್‍ಮೆಂಟ್ ಘಟಕದಲ್ಲಿ ನಾಶಪಡಿಸಲಾಗಿದೆ ಎಂದು ಡೆಪ್ಯೂಟಿ ಕಮಿಷನರ್ ಆಫ್ ಎಕ್ಸೈಜ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಈ ಕಾರ್ಯಾಚರಣೆಯಲ್ಲಿ ಡ್ರಗ್ ಡಿಸ್‍ಪೋಸಲ್ ಕಮಿಟಿಯ ಛೆರ್‍ಮನ್‍ರಾದ ಶ್ರೀಮತಿ ಶೈಲಜಾ ಎ. ಕೋಟೆ, ಅಬಕಾರಿ ಜಂಟಿ ಆಯುಕ್ತರು ಮಂಗಳೂರು ವಿಭಾಗ ಹಾಗೂ ಸದಸ್ಯರಾದ ಶ್ರೀ ನಾಗೇಶ್ ಕುಮಾರ್ ಡಿ ಅಬಕಾರಿ ಉಪ ಆಯುಕ್ತರು ಉಡುಪಿ ಜಿಲ್ಲೆ, ಶ್ರೀ ವೈ.ಆರ್ ಮೋಹನ್ ಅಬಕಾರಿ ಉಪ ಆಯುಕ್ತರು ಶಿವಮೊಗ್ಗ ಜಿಲ್ಲೆ, ಮತ್ತು ಶಿವಮೊಗ್ಗ ಜಿಲ್ಲೆಯ ಎಲ್ಲಾ ಅಬಕಾರಿ ಅಧಿಕಾರಿ/ಸಿಬ್ಬಂದಿಗಳು ಹಾಗೂ ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಕಾರ್ಯನಿರ್ವಹಣಾ ಅಧಿಕಾರಿ ಮತ್ತು ಶುಶೃತ ಬಯೋ-ಮೆಡಿಕಲ್ ವೇಸ್ಟ್ ಮ್ಯಾನೇಜ್‍ಮೆಂಟ್ ಘಟಕದ ಅಧಿಕಾರಿ/ಸಿಬ್ಬಂಧಿಗಳು ಭಾಗವಹಿಸಿರುತ್ತಾರೆ.

error: