October 5, 2024

Bhavana Tv

Its Your Channel

ಕಾರು ಮತ್ತು ಲಾರಿ ನಡುವೆ ಡಿಕ್ಕಿ ಒಂದು ಸಾವು, ಮಂಡ್ಯ ಸಮೀಪ ನಡೆದ ಘಟನೆ

೧೨.೧೫ರಲ್ಲಿ ಟಾಟಾ ಇಂಡಿಕಾ ಕಾರು ಮತ್ತು ಸುರಗಿ ಮರಗಳನ್ನು ತುಂಬಿದ್ದ ಲಾರಿಯ ನಡುವೆ ಡಿಕ್ಕಿ ಸಂಭವಿಸಿ ಕಾರಿನ ಚಾಲಕ ಚಿನಕುರಳಿ ಹೋಬಳಿಯ
ಸಣಬ ಗ್ರಾಮದ ಸಂತೋಷ್(೨೩) ಸ್ಥಳದಲ್ಲೇ ಮೃತರಾದರೆ ಕಾರಿನಲ್ಲಿದ್ದ ಅಶೋಕ್ ಗಂಭೀರವಾಗಿ ಗಾಯಗೊಂಡಿದ್ದು ಮೈಸೂರಿನ ಖಾಸಗಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ದಾಖಲಿಸಲಾಗಿದೆ.
ಕೃಷ್ಣರಾಜಪೇಟೆ ಪಟ್ಟಣ ಪೋಲಿಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಬ್ಯಾಟರಾಯಗೌಡ ಸ್ಥಳಕ್ಕೆ ಭೇಟಿ ನೀಡಿದ್ದು ಮೊಕದ್ದಮೆ
ದಾಖಲಿಸಿಕೊಂಡಿದ್ದು ಅಪಘಾತ ನಡೆಸಿದ ಲಾರಿಯ ಚಾಲಕ ಸಿದ್ಧರಾಜುವನ್ನು ಬಂಧಿಸಿದ್ದು ಕಾರಿನ ಚಾಲಕ ಸಂತೋಷನ ಮೃತದೇಹವನ್ನು ಸಾರ್ವಜನಿಕ ಆಸ್ಪತ್ರೆಯ ಶವಾಗಾರಕ್ಕೆ ಸ್ಥಳಾಂತರಿಸಲಾಗಿದೆ.

error: