April 23, 2024

Bhavana Tv

Its Your Channel

ಆಟೋ, ಗೂಡ್ಸ ವಾಹನಗಳ ಚಾಲಕರಿಗೆ ಸರ್ಕಾರಿಂದ ಆರ್ಥಿಕ ಸಹಾಯ ಒದಗಿಸುವಂತೆ ಶಿವಾನಿ ಶಾಂತರಾಮ ಪತ್ರ

ಕೊರೋನಾ ವೈರಸ್ ತಡೆಗಾಗಿ ನಡೆಸಿದ ಲಾಕ್‌ಡೌನ್‌ನಿಂದಾಗಿ ಆಟೋ ರಿಕ್ಷಾ ಚಾಲಕರು ಮತ್ತು ಗೂಡ್ಸ ವಾಹನ ಚಾಲಕರು ದುಡಿಮೆ ಇಲ್ಲದೇ ಸಂಕಷ್ಟದಲ್ಲಿದ್ದು, ಸರಕಾರದಿಂದ ಇವರಿಗೆ ಆರ್ಥಿಕ ಸಹಾಯ ಒದಗಿಸಬೇಕೆಂದು ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಶಿವಾನಿ ಶಾಂತರಾಮ ಅವರು ಸರಕಾರಕ್ಕೆ ಪತ್ರ ಬರೆದಿದ್ದಾರೆ.

ರಾಜ್ಯದ ಉಪಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವರೂ ಆಗಿರುವ ಲಕ್ಷö್ಮಣ ಸವದಿ ಹಾಗೂ ಕಾರ್ಮಿಕ, ಸಕ್ಕರೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಶಿವರಾಮ ಹೆಬ್ಬಾರ ಅವರಿಗೆ ಪತ್ರ ಬರೆದಿರುವ ಅವರು ಭಟ್ಕಳ ಹಾಗೂ ಜಿಲ್ಲೆಯಲ್ಲಿ ಆಟೋ ರಿಕ್ಷಾ ಚಾಲಕರು, ಗೂಡ್ಸ ವಾಹನ ಚಾಲಕರು ಲಾಕ್‌ಡೌನ್‌ನಿಂದಾಗಿ ದುಡಿಮೆ ಇಲ್ಲದೇ ಸಂಕಷ್ಟದಲ್ಲಿದ್ದು,ಜೀವನ ನಿರ್ವಹಣೆ ಕಷ್ಟಕರವಾಗಿದೆ. ಇವರಿಗೆ ಸರಕಾರದಿಂದ ಆದಷ್ಟು ಶೀಘ್ರದಲ್ಲಿ ಆರ್ಥಿಕ ಸಹಾಯ ಒದಗಿಸುವಂತಾಗಬೇಕು ಎಂದು ಒತ್ತಾಯಿಸಿದ್ದಾರೆ. ಇವರ ಪತ್ರಕ್ಕೆ ಸ್ಪಂದಿಸಿರುವ ಇಬ್ಬರೂ ಸಚಿವರೂ ಈ ಬಗ್ಗೆ ಏಪ್ರಿಲ್ ೨೦ ರಂದು ನಡೆಯುವ ಕ್ಯಾಬಿನೆಟ್ ಸಭೆಯಲ್ಲಿ ಸೀಎಂ ಜತೆ ಚರ್ಚೆ ನಡೆಸುವುದಾಗಿ ತಿಳಿಸಿದ್ದಾರೆಂದು ಶಿವಾನಿ ಶಾಂತರಾಮ ಹೇಳಿದ್ದಾರೆ.

error: