May 26, 2023

Bhavana Tv

Its Your Channel

ಕುಮಟಾ ತಾಲೂಕಿನ ಶ್ರೀ ಶಕ್ತ ವೀರಮಾರುತಿ ಚಿಣ್ಣರ ಯಕ್ಷಗಾನ ಮಂಡಳಿ ಹಾಗೂ ದಾನಿಗಳ ಸಹಾಯದಿಂದ ಅಗತ್ಯ ವಸ್ತು ಕಿಟ್ಟ ವಿತರಣೆ.

ಕೊರೊನಾ ಸೋಂಕು ಹರಡುವುದರಿಂದ ದೇಶದಾದ್ಯಂತ ಲಾಕ್‌ಡೌನ ಇರುವುದರಿಂದ ಕುಮಟಾ ತಾಲೂಕಿನ ಅನೇಕ ಕುಟುಂಬಗಳು ದುಡಿಮೆ ಇಲ್ಲದೆ ತೀರಾ ಸಂಕಷ್ಟದಲ್ಲಿ ಇರುವುದನ್ನು ಮನಗಂಡು ಕುಮಟಾ ತಾಲೂಕಿನ ಶ್ರೀ ಶಕ್ತ ವೀರಮಾರುತಿ ಚಿಣ್ಣರ ಯಕ್ಷಗಾನ ಮಂಡಳಿ ಹಾಗೂ ದಾನಿಗಳ ಸಹಾಯದಿಂದ ತಾಲೂಕಿನ ಕಾಗಲ್, ಗುಡ್‌ಕಾಗಲ್, ಬಾಡ ಹುಬ್ಬಣಗೇರಿಯ ಸೇರಿದಂತೆ ೪ ಗ್ರಾಮಗಳಲ್ಲಿನ ತೀರಾ ಬಡಕುಟುಂಬಗಳಿಗೆ ದಿನಬಲಕೆಯ ಅಗತ್ಯ ವಸ್ತುಗಳಾದ ಅಕ್ಕಿ, ಚಹಾಪುಡಿ, ತೊಗರಿಬೆಳೆ, ಮಸಾಲೆ ಪೌಡರ, ಬಟಾಟಿ, ಎಣ್ಣೆ, ಈರುಳ್ಳಿ,ಸಕ್ಕರೆ ಸೇರಿದಂತೆ ಪ್ರತಿ ಕುಟುಂಬಕ್ಕೂ ೫೦೦ ರೂಪಾಯಿ ಅಗತ್ಯ ವಸ್ತುಗಳನ್ನು ೬೬ ಕುಟುಂಬಗಳಿಗೆ ವಿತರಿಸಲಾಯಿತು. ಈ ವೇಳೆ ಜನರಲ್ಲಿ ಕೊರೊನಾ ವೈರಸ್ ಬಗ್ಗೆ ಜಾಗೃತಿ ಮೂಡಿಸಿ ಅಗತ್ಯ ಮುಂಜಾಗೃತ ಕ್ರಮಗಳನ್ನು ಅನುಸರಿಸಬೇಕೆಂದು ಹೇಳಲಾಯಿತು.

About Post Author

error: