April 26, 2024

Bhavana Tv

Its Your Channel

ಎಲ್ಲಾ ವಾಣಿಜ್ಯ ಸಾರಿಗೆ ವಾಹನಗಳ ಲೋಕಡೌನ್ ಸಂದರ್ಭದಲ್ಲಿನ ತೆರಿಗೆಗಳನ್ನ ರದ್ದುಪಡಿಸಿ ಆದೇಶಿಸಬೇಕೆಂದು ಮುಖ್ಯಮಂತ್ರಿಗಳಿಗೆ ರವೀಂದ್ರ ನಾಯ್ಕ ಆಗ್ರಹ

ಶಿರಸಿ: ಸಾರಿಗೆ ವಾಹನಗಳನ್ನು ಅನೈಸರ್ಗಿಕ ಕಾರಣಕ್ಕಾಗಿ ಸಾರಿಗೆಗಾಗಿ ಉಪಯೋಗಿಸದೇ ಇರುವ ಸಂದರ್ಭದಲ್ಲಿ ವಾಹನ ಮಾಲಕರಿಗೆ ಸರಕಾರ ನೀಡುವ ಸೌಲಭ್ಯದ ಮೀತಿಯ ಅಡಿಯಲ್ಲಿ ವಾಹನ ತೆರಿಗೆ ರದ್ದು ಪಡಿಸಲು ವಾಹನ ಕಾಯಿದೆಯಲ್ಲಿ ಸಾಧ್ಯವಿದೆ ಎಂದು ಇಗಾಗಲೇ ಕೇಂದ್ರ ಸರ್ಕಾರವು ದೇಶದ ಎಲ್ಲಾ ರಾಜ್ಯ ಸರ್ಕಾರಕ್ಕೆ ನೀಡಿರುವ ಸೂಚನಾ ಪತ್ರದಂತೆ ರಾಜ್ಯ ಸರ್ಕರವು ತಕ್ಷಣ ಎಲ್ಲಾ ವಾಣಿಜ್ಯ ಸಾರಿಗೆ ವಾಹನಗಳ ಲೋಕಡೌನ್ ಸಂದರ್ಭದಲ್ಲಿನ ತೆರಿಗೆಗಳನ್ನ ರದ್ದುಪಡಿಸಿ ಆದೇಶಿಸಬೇಕೆಂದು ಮುಖ್ಯಮಂತ್ರಿಗಳಿಗೆ ಸಾಮಾಜಿಕ ಹೋರಾಟಗಾರ ಹಾಗೂ ವಕೀಲ ರವೀಂದ್ರ ನಾಯ್ಕ ಆಗ್ರಹಿಸಿದ್ದಾರೆ.

   ಕೇಂದ್ರ ಸರ್ಕರವು ಲೋಕಡೌನ ಸಂದರ್ಭದಲ್ಲಿ ವಾಣಿಜ್ಯ ವಾಹನಗಳಾದ ಟೆಕ್ಸಿ, ಬಸ್, ರಿಕ್ಷಾ, ಟೆಂಪೋ ಮುಂತಾದ ವಾಣಿಜ್ಯ ವಾಹನಗಳನ್ನ ಚಲಾಯಿಸದೇ ಇರುವುದರಿಂದ ಇಗಾಗಲೇ ಕೆಲವು ರಾಜ್ಯಗಳು ವಾಹನ ತೆರಿಗೆ ರದ್ದತಿ ಘೋಷಿಸಿದ ಮಾನದಂಡದAತೆ ಇನ್ನುಳಿದ ರಾಜ್ಯಗಳು ಸಹಿತ ವಾಣಿಜ್ಯ ವಾಹನಗಳ ತೆರಿಗೆ ರದ್ದು ಪಡಿಸುವ ನೀತಿಯನ್ನು ಅಳವಡಿಸಿಕೊಳ್ಳಬೇಕೆಂದು ಮಾರ್ಚ ೩೦ರ ಕೇಂದ್ರ ಸರ್ಕಾರದ ಸಾರಿಗೆ ಮತ್ತು ರಾಷ್ಟಿçÃಯ ಹೆದ್ದಾರಿ ಮಂತ್ರಾಲಯ ನಿರ್ಧೇಶನದ ಸುತ್ತೋಲೆಯ ಪತ್ರದಲ್ಲಿ ಉಲ್ಲೇಖಿಸಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  ವಾಣಿಜ್ಯ ಸಾರಿಗೆ ವಾಹನದ ಮಾಲೀಕರು ಸಾರಿಗೆ ವ್ಯವಹಾರ ಇಲ್ಲದೇ ಲೋಕಡೌನ್ ಸಂದರ್ಭದಲ್ಲಿ ಗಂಭೀರವಾದ ಹಣಕಾಸಿನ ಸಮಸ್ಯೆ ಎದುರಿಸುತ್ತಿರುವುದರಿಂದ ಸರ್ಕಾರವು ಸದ್ರಿ ವಾಹನ ಮಾಲಿಕರ ಪರವಾಗಿ ನೆರವಾಗುವುದು ಅತೀ ಅವಶ್ಯ ಎಂದು ಕೇಂದ್ರ ಸರ್ಕಾರ ಆದೇಶದಲ್ಲಿ ಸೂಚಿಸಿದೆ ಎಂದು ರವೀಂದ್ರ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅನುಮತಿ ವಿಸ್ತರಣೆ:

  ವಾಹನದ ಮೌಲ್ಯತೆ, ಎಲ್ಲಾರೀತಿಯ ಪರವಾನಿಗೆ, ಡ್ರೆöÊವಿಂಗ್ ಲೈಸನ್ಸ, ನೋಂದಣಿ ಅಥವಾ ಇನ್ನಿತರ ಅನುಮತಿ ಲೋಕಡೌನ್ ಸಂದರ್ಭದಲ್ಲಿ ಅಮಾನ್ಯಗೊಂಡಿರುವುದನ್ನು ಜೂನ್ ೩೦ ರ ವರೆಗೆ ಅದರ ಮೌಲ್ಯತೆಯು  ಸ್ವಯಂಚಾಲಿತವಾಗಿ ಮುಂದುವರೆಯುವುದರಿAದ  ಸಂಭAದ ಪಟ್ಟ ಇಲಾಖೆಯು ಈ ದಿಶೆಯಲ್ಲಿ ಸೂಕ್ತ ಕ್ರಮ ಜರುಗಿಸುವಂತೆ ಕೇಂದ್ರ ಸರ್ಕಾರ ಸದ್ರಿ ಆದೇಶದಲ್ಲಿ ಉಲ್ಲೇಖಿಸಿದೆ ಎಂದು ರವೀಂದ್ರ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: