May 22, 2024

Bhavana Tv

Its Your Channel

ಪ್ರಚಲಿತ ಆಶ್ರಯಧಾಮ ಅನಾಥಾಶ್ರಮಕ್ಕೆ ಸಹಾಯ ಮಾಡಿ .

ಬಂಧುಗಳೆ.
ನಾವು ಹಲವಾರು ವರ್ಷಗಳಿಂದ ಅನಾಥರ, ದಿಕ್ಕಿಲ್ಲದವರ ರೋಗಿಗಳ, ವ್ರದ್ಧರ ಸೇವೆಯನ್ನು ಅನಾಥಾಶ್ರಮದ ಮೂಲಕ ಮಾಡಿಕೊಂಡು ಬಂದಿರುತ್ತೇವೆ. ಹಾಗೂ ಆಹಾರವಿಲ್ಲದ ಅಸಹಾಯಕರಿಗೆ ಆಹಾರ ಒದಗಿಸುವ ಕಾರ್ಯವನ್ನು ಕೂಡ ನಿರಂತರವಾಗಿ ಮಾಡುತ್ತಿದ್ದೇವೆ.
ಇಂತಹ ಸಂದರ್ಭಗಳಲ್ಲಿ ಕಳೆದ ಕೆಲವು ವರ್ಷಗಳ ಹಿಂದೆ ನೋಟ್ ಬ್ಯಾನ್ ಆದಾಗ ಹಾಗೂ ನಂತರದ ದಿನಗಳಲ್ಲಿ ಅನೇಕ ಸಮಸ್ಯೆಗಳು ಎದುರಾದಾಗಲೂ ದೇವರ ದಯೆಯಿಂದ ಹಾಗೂ ನಿಮ್ಮೆಲ್ಲರ ಸಹಾಯ ಸಹಕಾರದಿಂದ ಆಶ್ರಮದ ನಮ್ಮ ಸೇವಾ ಕಾರ್ಯವನ್ನು ಮುಂದುವರೆಸಿಕೊoಡು ಬಂದಿರುವುದು ತಮಗೆಲ್ಲ ತಿಳಿದ ಸಂಗತಿ.
ಈಗಲೂ ಕೂಡ ಅಂತಹುದೇ ಸನ್ನಿವೇಶ ಎದುರಾಗಿದ್ದು ಕೊರೊನಾ ಕಾರಣದಿಂದ 3 ಮೆ ವರೆಗೆ ಯಾರು ಕೂಡ ಮನೆ ಬಿಟ್ಟು ಹೊರಗೆ ಬರಬಾರದು ಎಂದು ಮಾನ್ಯ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಅವರು ಆದೇಶಿಸಿರುತ್ತಾರೆ. ಈ ಕಾರಣದಿಂದ ನಾವು ಆಶ್ರಮದ ಅಗತ್ಯತೆಗಳನ್ನು ಪೂರೈಸಿಕೊಳ್ಳುವುದು ಅನಿವಾರ್ಯವಾಗಿದೆ. ಹಾಗಾಗಿ ತಮಗೆ ನಮ್ಮ ಈ ಸೇವೆಗೆ ಸಹಾಯ ಮಾಡಬೇಕೆನ್ನುವ ಮನಸ್ಸಿದ್ದರೆ ಆಶ್ರಮಕ್ಕೆ ಅಗತ್ಯ ವಸ್ತುಗಳಾದ ಅಕ್ಕಿ-ಬೇಳೆ ಆಹಾರ ಸಾಮಗ್ರಿಗಳು ಇತ್ಯಾದಿ ಅಗತ್ಯ ವಸ್ತುಗಳನ್ನು ಹಾಗೂ ಆಶ್ರಮದ ಸುಶ್ರುಶಕರಿಗೆ ಸಂಬಳ, ಆಶ್ರಮ ವಾಸಿಗಳಿಗೆ ಅವಸ್ಯವಿರುವ ಹಾಲು, ಹಣ್ಣು ಇತ್ಯಾದಿ ಖರೀದಿಗೆ ಬೇಕಾದ ಹಣಕಾಸು ಸಹಾಯವನ್ನು ತಾವು ನೀಡಬಹುದು. ಹೆಚ್ಚಿನ ಮಾಹಿತಿಗಾಗಿ 9481389187 ಮೊಬೈಲ್ ನಂಬರಿಗೆ ಸಂಪರ್ಕಿಸಿ.
ಹಾಗೂ

PRACHALITA PUBLIC CHARITABLE TRUST
A/C No:- 03083070000994 , Syndicate Bank , Siddapur Branch,
IFSC No:- SYNB0000308

ಈ ನಮ್ಮ ಸಂಸ್ಥೆಯ ಖಾತೆ ಸಂಖ್ಯೆಗೆ ಹಣವನ್ನು ವರ್ಗಾವಣೆ ಮಾಡಬಹುದು. ಇದಲ್ಲದೆ ನಿಮ್ಮ ಸ್ನೇಹಿತರಿಗು ಹಾಗೂ ನಿಮ್ಮ ಬಂಧುಗಳಿಗು ಈ ಸಂದೇಶವನ್ನು Forward ಹಾಗೂ Share ಮಾಡುವ ಮೂಲಕ ಆಶ್ರಮಕ್ಕೆ ಸಹಾಯ ಮಾಡಿ ಎಂದು ಮುಖ್ಯಸ್ಥರಾದ ನಾಗರಾಜ ನಾಯ್ಕ ವಿಂತಿಸಿದ್ದಾರೆ.

ಪ್ರಚಲಿತ ಆಶ್ರಯಧಾಮ    
ಅನಾಥಾಶ್ರಮ 
ಮುಗದೂರು, ಪೋ. ಕೊಂಡ್ಲಿ     
ತಾ. ಸಿದ್ದಾಪುರ(ಉಕ)581355
ಮೊ. 9481389187

ವಿಶೇಷ ಸೂಚನೆ: ದಯಮಾಡಿ ಯಾರು ಕೂಡ 3 ಮೆ ವರೆಗೆ ಮನೆಯಿಂದ ಹೊರಗೆ ಬಂದು ತೊಂದರೆಗೆ ಒಳಗಾಗಬಾರದೆಂದು ಕೈ ಮುಗಿದು ವಿನಂತಿಸಿಕೊಳ್ಳುತ್ತೇನೆ.

error: