June 15, 2024

Bhavana Tv

Its Your Channel

ಜಿಲ್ಲಾ ಪಂಚಾಯತ ಅಧ್ಯಕ್ಷೆ “”ಶ್ರೀಮತಿ ಜಯಶ್ರೀ ಮೊಗೇರ್”” ರಿಂದ ಆಹಾರ ಸಾಮಗ್ರಿ ವಿತರಣೆ

ಭಟ್ಕಳ : ಕೋವಿಡ್-19 ವೈರಾಣುಗಳ ವಿರುದ್ಧ ಸಮರ ಸಾರಿರುವ ಹಿನ್ನೆಲೆಯಲ್ಲಿ ಲಾಕ್ ಡೌನ್ ಸಂದರ್ಭದಲ್ಲಿ ಉತ್ತರಕನ್ನಡ ಜಿಲ್ಲಾ ಪಂಚಾಯತ ಅಧ್ಯಕ್ಷೆ “”ಶ್ರೀಮತಿ ಜಯಶ್ರೀ ಮೊಗೇರ್”” ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಬಡಜನತೆಗೆ ದಿನನಿತ್ಯದ ಆಹಾರ ಸಾಮಗ್ರಿಗಳನ್ನು ವಿತರಿಸಿದರು.

ಕಳೆದ 2 ದಶಕಗಳಿಂದ ರಾಜಕೀಯವಾಗಿ ಚಿರಪರಿಚಿತರಾಗಿರುವ ಇವರು ತಾಲೂಕ ಪಂಚಾಯತ ಜಿಲ್ಲಾ ಪಂಚಾಯತ ಪ್ರತಿನಿಧಿಯಾಗಿ ಜನರಿಗೆ ಪರಿಚಿತರಾಗಿದ್ದರು, ಈಗ ಜಿಲ್ಲಾ ಪಂಚಾಯತ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿರುವ ಇವರಿಗೆ ಲಾಕ್ ಡೌನ್ ನಿಂದ ಇಡಿ ಜಿಲ್ಲೆಯಿಂದ ಪೋನಿನ ಕರೆಗಳು ಬರುತ್ತಲೆ ಇವೆ, ಅದಕ್ಕೆ ಸ್ಪಂದಿಸುತ್ತ ಅಧಿಕಾರಿಗಳಿಗೆ ಸಮಸ್ಯೆ ವಿವರಿಸಿ ಪರಿಹಾರಕ್ಕೆ ಪ್ರಯತ್ನಸುತ್ತಿದ್ದಾರೆ. ತಮ್ಮ ಮನೆ ಬಾಗಿಲಿಗೆ ಬಂದು ಸಹಾಯ ಕೇಳಿದವರಿಗೆ ಅಗತ್ಯ ವಸ್ತುಗಳನ್ನು ಪೂರೈಸುತ್ತಿದ್ದಾರೆ. ಬಡ ಜನರ ಸಹಾಯಕ್ಕೆ ಸ್ಥಳೀಯ ಜನಪ್ರತಿನಿದಿಗಳ ಹಾಗೂ ಮುಖಂಡರ ಸಹಕಾರ ನೀಡಲು ಮನವಿ ಮಾಡಿಕೊಂಡು ಬಡವರ ಮನೆಗಳಿಗೆ ಆಹಾರ ಒದಗಿಸುವ ಪ್ರಯತ್ನಕ್ಕೆ ಚಾಲನೆ ನೀಡಿದ್ದಾರೆ.

error: