December 8, 2022

Bhavana Tv

Its Your Channel

ಉಸ್ತುವಾರಿ ಸಚಿವ ಶಿವರಾಂ ಹೆಬ್ಬಾರ್ ಹೂಗುಚ್ಚ ಹಾಗೂ ಪ್ರಮಾಣ ಪತ್ರ ನೀಡುವುದರ ಮೂಲಕ ಆಸ್ಪತ್ರೆಯಿಂದ ಕ್ವಾರೇಂಟೈನ್ ಅವಧಿಯನ್ನು ಪೂರ್ಣಗೊಳಿಸಿದ ಭಟ್ಕಳದ ಮೂವರನ್ನು ಬೀಳ್ಕೊಟ್ಟರು.

ಭಟ್ಕಳ: ಕೊರೋನ ಸೋಂಕು ಬಾಧಿಸಿದ ಕಾರವಾರದ ಪತಾಂಜಲಿ ಆಸ್ಪತ್ರೆಯಲ್ಲಿ ಯಶಸ್ವಿ ಚಿಕಿತ್ಸೆಯೊಂದಿಗೆ ಭಟ್ಕಳದಲ್ಲಿ ೧೪ ದಿನಗಳ ಕ್ವಾರೇಂಟೈನ್ ಅವಧಿಯನ್ನು ಪೂರ್ಣಗೊಳಿಸಿದ ಭಟ್ಕಳದ ಮೂವರನ್ನು ಗುರುವಾರ ಸಂಜೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಂ ಹೆಬ್ಬಾರ್ ಹೂಗುಚ್ಚ ಹಾಗೂ ಪ್ರಮಾಣ ಪತ್ರ ನೀಡುವುದರ ಮೂಲಕ ಅವರನ್ನು ಆಸ್ಪತ್ರೆಯಿಂದ ಬೀಳ್ಕೊಟ್ಟರು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು ತಮ್ಮ ಜೀವದ ಹಂಗನ್ನು ತೊರೆದು ಕಾರ್ಯನಿರ್ವಹಿಸಿದ ವೈದ್ಯರ ಸೇವೆಯನ್ನು ಕೊಂಡಾಡುವುದರೊAದಿಗೆ ಅವರನ್ನು ಗೌರವಿಸುವಂತೆ ಮನವಿ ಮಾಡಿಕೊಂಡರು. ಕಷ್ಟಕಾಲದಲ್ಲಿ ವೈದ್ಯರು ನೀಡಿದ ಸೇವೆಗೆ ಸರ್ಕಾರ ಹಾಗೂ ಜಿಲ್ಲಾಡಳಿತ ಋಣಿಯಾಗಿದೆ. ಸರ್ಕಾರದಿಂದ ಎಲ್ಲ ರೀತಿಯ ಸೌಲಭ್ಯಗಳನ್ನು ವೈದ್ಯರಿಗೆ ನೀಡುವ ವ್ಯವಸ್ಥೆ ಮಾಡಲಾಗುವುದು ಎಂದ ಅವರು ಇದೇ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯರು, ಪೊಲೀಸ್ ಇಲಾಖೆ ಹಾಗೂ ತಂಝೀಮ್ ಸಂಸ್ಥೆಯ ಸಹಕಾರವನ್ನು ಸ್ಮರಿಸಿಕೊಂಡರು. ಸಮಾಜ ಸೇವಕ ನಿಸಾರ್ ಆಹ್ಮದ್ ರುಕ್ನುದ್ದೀನ್, ಇಮ್ತಿಯಾಝ್ ಉದ್ಯಾವರ್, ಯೂನೂಸ್ ರುಕ್ನುದ್ದೀನ್ ಹಗಲಿರುಳು ವೈದ್ಯರಿಗೆ ಹಾಗೂ ತಾಲೂಕಾಡಳಿತಕ್ಕೆ ಸಹಕಾರ ನೀಡಿದ್ದನ್ನು ಸ್ಮರಿಸಿದ ಸಚಿವರು ಇವೆರಲ್ಲರ ಸೇವೆಯಿಂದಾಗಿ ಉತ್ತರಕನ್ನಡ ಜಿಲ್ಲೆಯಲ್ಲಿ ಕೊರೋನಾ ಸೋಂಕು ಮಾಯವಾಗುತ್ತಿದೆ ಎಂದರು.

ಈ ಸಂದರ್ಭದಲ್ಲಿ ಶಾಸಕ ಸುನಿಲ್ ನಾಯ್ಕ, ತಂಝೀಮ್ ಮುಖಂಡರಾದ ಇನಾಯತುಲ್ಲಾ ಶಾಬಂದ್ರಿ, ಅಬ್ದುಲ್ ರಖೀಬ್ ಎಂ.ಜೆ. ಸಹಾಯಕ ಆಯುಕ್ತ ಭರತ್ ಎಸ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಅಶೋಕ್ ಕುಮಾರ್, ಡಾ.ಶರದ್ ನಾಯಕ, ಡಾ.ಸವಿತಾ ಕಾಮತ್ ಮುಂತಾದವರು ಉಪಸ್ಥಿತರಿದ್ದರು.

About Post Author

error: