June 20, 2024

Bhavana Tv

Its Your Channel

ಅಧಿಕಾರಿಗಳು ಮಾನವೀಯತೆ ಅರಿತು ಕೆಲಸ ಮಾಡಬೇಕು -ಸಚಿವ ಶಿವರಾಮ ಹೆಬ್ಬಾರ

ಕುಮಟಾ: ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಅಧ್ಯಕ್ಷತೆಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಯಿತು.ಅಧಿಕಾರಿಗಳು ಮಾನವೀಯತೆ ಅರಿತು ಕೆಲಸ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಅಧಿಕಾರಿಗಳಿಗೆ ಕಿವಿ ಮಾತು ಹೇಳಿದರು.

ಪಟ್ಟಣದ ಹವ್ಯಕ ಸಭಾಭವನದಲ್ಲಿ ಗುರುವಾರ ನಡೆದ ಕೊವೀಡ್-೧೯, ಮಂಗನಕಾಯಿಲೆ ಹಾಗೂ ಕುಡಿಯುವ ನೀರಿನ ಸಮಸ್ಯೆಗಳ ಕುರಿತು ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ಈಗಾಗಲೇ ಕೊರೋನಾ ಮಹಾ ಮಾರಿ ಯಿಂದ ಲಾಕ್?ಡೌನ್ ಆದ ಹಿನ್ನೆಲೆಯಲ್ಲಿ ಜಿಲ್ಲೆಯ ಜನತೆ ತತ್ತರಿಸಿದ್ದಾರೆ. ಅವರಿಗೆ ಮಾನವಿಯ ಕಾಳಜಿ ತೋರಿಸುವ ಮೂಲಕ ಸಹಜ ಸ್ಥಿತಿಗೆ ತರುವ ಕೆಲಸವಾಗಬೇಕಿದೆ. ಈ ದಿಶೆಯಲ್ಲಿ ಅಧಿಕಾರಿಗಳು ಹಾಗೂ ಜನಪ್ರತಿನಿಗಳು ಸ್ಪಂದಿಸಬೇಕಾಗಿದೆ. ಕೊರೋನಾ ಕಾಯಿಲೆ ಹಳ್ಳಿಗರಿಂದ ಹರಡಿದ್ದಲ್ಲ. ಶ್ರೀಮಂತರಿAದ ಬಂದ ಕಾಯಿಲೆಗೆ ಹಳ್ಳಿಗರು ಸಂಕಷ್ಟ ಎದುರಿಸಬೇಕಾಗಿದೆ. ಹೀಗಾಗಿ ಈಗಾಗಲೇ ನೊಂದ ಮನಸ್ಸುಗಳಿಗೆ ಅಧಿಕಾರಿಗಳು ಸಾಂತ್ವನ ಹೇಳಬೇಕಾಗಿದೆ. ಯಾವುದೇ ಕಾರಣಕ್ಕೂ ಅಕಾಲಿಕ ಮಳೆಯಿಂದ ಹಾನಿಗೊಳಗಾದ ರೈತರು,ಕೂಲಿ ಕಾರ್ಮಿಕರು ಹಾಗೂ ಮೀನುಗಾರರಿಗೆ ಸರ್ಕಾರದಿಂದ ದೊರೆಯುವ ಸೌಲಭ್ಯಗಳಿಗೆ ಕಡಿವಾಣ ಹಾಕದೆ ಉದಾರತೆ ತೋರುವ ಮೂಲಕ ಮಾನವೀಯ ನೆಲೆಯಲ್ಲಿ ಹೆಚ್ಚಿನ ಪರಿಹಾರ ನೀಡಬೇಕು ಎಂದು ಜಿಲ್ಲಾಕಾರಿಗಳಿಗೆ ಸೂಚಿಸಿದರು.
ಈಗಾಗಲೇ ಕೇಂದ್ರ ಸರ್ಕಾರದ ಸೂಚನೆಯ ಮೇರೆಗೆ ಆಧ್ಯತಾ ವಲಯಗಳಿಗೆ ಲಾಕ್?ಡೌನ್ ನಿಂದ ವಿನಾಯಿತಿ ನೀಡಲಾಗಿದೆ. ಮೇ ೩ ರ ನಂತರ ಇನ್ನಷ್ಟು ಸಡಲಿಕೆಯಾಗಿ ಜನಜೀವನ ಸಹಜ ಸ್ಥಿತಿಗೆ ಮರಳುವ ವಿಶ್ವಾಸವಿದೆ.ಅಭಿವೃದ್ದಿ ಕಾಮಗಾರಿಗಳಿಗೆ, ರಸ್ತೆ ದುರಸ್ಥಿ,ಕುಡಿಯುವ ನೀರಿಗಾಗಿ ಸರ್ಕಾರ ಹಣ ಬಿಡುಗಡೆ ಮಾಡಿದೆ. ನಮ್ಮ ಜಿಲ್ಲೆಯಲ್ಲಿ ಇನ್ನೊಂದು ತಿಂಗಳಿನಲ್ಲಿ ಎಲ್ಲಾ ರೀತಿಯ ಅಭಿವೃದ್ದಿ ಕೆಲಸ ಪೂರೈಸಬೇಕಾಗಿದೆ. ಮಳೆ ಪ್ರಾರಂಭವಾದಲ್ಲಿ ಕಾಮಗಾರಿಗಳು ಅಪೂರ್ಣವಾಗುವ ಆತಂಕ ಇದೆ. ಇಂತಹ ಕಾಮಗಾರಿಗಳನ್ನು ಶೀಘ್ರ ಕೈಗೊಳ್ಳಬೇಕು. ಪೊಲೀಸರು ಸಾರ್ವಜನಿಕರಿಗೆ ಯಾವುದೇ ರೀತಿಯ ಕಿರುಕುಳ ನೀಡಬಾರದು ಎಂದು ಅಕಾರಿಗಳಿಗೆ ಸೂಚಿಸಿದರು.
ಕೊವೀಡ್-೧೯ ಕಾಯಿಲೆ ಜಿಲ್ಲೆಯಲ್ಲಿ ನಿಯಂತ್ರಣದಲ್ಲಿದೆ. ೧೧ ಸೊಂಕಿತರ ಪೈಕಿ ಈಗಾಗಲೇ ೯ ಸೊಂಕಿತರು ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಇನ್ನೂ ಇರ್ವರು ಶೀಘ್ರ ಗುಣಮುಖರಾಗಲಿದ್ದಾರೆ. ಹೀಗಾಗಿ ಯಾವುದೇ ಕಾಮಗಾರಿ ಅಥವಾ ಇನ್ನಾವುದೇ ವ್ಯವಹಾರ ನಡೆಸುವ ಮುನ್ನ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಈ ನಿಯಮ ಉಲ್ಲಂಘಿಸುವವರಿಗೆ ಕಾನೂನಾತ್ಮಕ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಶಾಸಕ ದಿನಕರ ಶೆಟ್ಟಿ ಮಾತನಾಡಿ ನನ್ನ ಕ್ಷೇತ್ರದ ಹೆಚ್ಚಿನ ಯುವತಿಯರು ಹೋರ ಜಿಲ್ಲೆಗಳಲ್ಲಿ ಸಿಲುಕಿಕೊಂಡು ತತ್ತರಿಸುತ್ತಿದ್ದಾರೆ. ಅವರನ್ನು ಜಿಲ್ಲೆಗೆ ಕರೆತರುವ ಕೆಲಸವಾಗಬೇಕು ಎಂದು ಉಸ್ತುವಾರಿ ಸಚಿವರಲ್ಲಿ ಮನವಿ ಮಾಡಿದರು.
ಜಿಲ್ಲಾಕಾರಿ ಡಾ.ಹರೀಶ ಕುಮಾರ ಪ್ರತಿಕ್ರೀಯಿಸಿ ಯಾವುದೇ ಕಾರಣಕ್ಕೂ ಮೇ ೩ ಮೊದಲು ಯಾರನ್ನೂ ಕರೆತರುವ ಅಥವಾ ಜಿಲ್ಲೆಯಿಂದ ಕಳುಹಿಸುವ ಪ್ರಶ್ನೆಯೇ ಇಲ್ಲ. ಮೇ ೩ ರವರೆಗೆಗೂ ಕೇಂದ್ರ ಸರ್ಕಾರದ ಸೂಚನೆಯನ್ನು ಪ್ರತಿಯೊಬ್ಬರೂ ಪಾಲಿಸಬೇಕು. ಕೊರೋನಾ ಮುಕ್ತ ಜಿಲ್ಲೆಯನ್ನಾಗಿಸುವ ಪ್ರಯತ್ನಕ್ಕೆ ಎಲ್ಲರೂ ಸಹಕಾರ ನೀಡಬೇಕು ಎಂದರು.
ಉಪವಿಭಾಗಾಕಾರಿ ಎಮ್.ಅಜಿತ್, ದಿ.ವಾಯ್.ಎಸ್.ಪಿ ಗೌತಮ, ಜಿಲ್ಲಾ ಆರೋಗ್ಯಾಕಾರಿ ಅಶೋಕ ಕುಮಾರ, ತಹಸೀಲ್ದಾರ ಮೇಘರಾಜ ನಾಯ್ಕ, ತಾ.ಪಂ ಇ.ಓ ಸಿ.ಟಿ.ನಾಯ್ಕ, ಜಿ.ಪಂ ಸದಸ್ಯರಾದ ಗಜಾನನ ಪೈ,ಪ್ರದೀಪ ನಾಯಕ ದೇವರಬಾವಿ, ಗಾಯತ್ರಿ ಗೌಡ ಇನ್ನಿತರರು ಇದ್ದರು.

error: