April 1, 2023

Bhavana Tv

Its Your Channel

ಜೀವನ್ ಧಾರಾ ಟ್ರಸ್ಟ ಪದಾಧಿಕಾರಗಳು ಮಂಗಳವಾರ ಅರ್ಹ ಫಲಾನುಭವಿಗಳಿಗೆ ದಿನಸಿ ಸಾಮಾಗ್ರಿಗಳನ್ನು ವಿತರಿಸಿದರು.

ಹೊನ್ನಾವರ; ತಹಶೀಲ್ದಾರ ಕಛೇರಿಯ ಅವರಣದಲ್ಲಿ ಕೆಳಗಿನ ಪಾಳ್ಯ, ಚರ್ಚ ರಸ್ತೆಯ ಫಲಾನುಭವಿಗಳಿಗೆ ತಹಶೀಲ್ದಾರ ವಿವೇಕ ಶೇಣ್ವಿ ಹಾಗೂ ಅಕ್ಷರ ದಾಸೋಹದ ಅಧಿಕಾರಿ ಸುರೇಶ ನಾಯ್ಕ ಮೂಲಕ ವಿತರಣೆ ಮಾಡಲಾಯಿತು. ಸುಣ್ಣದ ಗುಡ್ಡೆ ಭಾಗದ ಫಲಾನುಭವಿಗಳಿಗೆ ಸೇಂಟ್ ಥಾಮಸ್ ಶಾಲಾ ಮೈದಾನದಲ್ಲಿ ನೀಡಲಾಯಿತು. ಇದೇ ಸಂದರ್ಭದಲ್ಲಿ ಹೊರ ರಾಜ್ಯದ ಕೂಲಿಕಾರರಿಗೆ ಹಾಗೂ ಪಡಿತರ ಚೀಟಿ ಹೊಂದದ ಆಯ್ದ ಜನರಿಗೆ ಜೀವನಾವಶ್ಯಕ ಸಾಮಾಗ್ರಿಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಟ್ರಸ್ಟನ ಆಧ್ಯಕ್ಷ ನಿವೃತ್ತ ಕೇಂದ್ರ ಕಸ್ಟಮ್ ಅಧಿಕಾರಿ ಜಾಕಿ ಡಿಸೋಜ, ರಾಷ್ಟç ಪ್ರಶಸ್ತಿ ಪುರಸ್ಕೃತ ಶಿಕ್ಷಕ ಎಸ್.ಜೆ.ಕೈರನ್, ವಕೀಲ ಎಂ.ಎನ್.ಸುಬ್ರಹ್ಮಣ್ಯ, ಉದ್ಯಮಿ ಕೃಷ್ಣಮೂರ್ತಿ ಶಿವಾನಿ, ಡಾ||ರಂಗನಾಥ ಪೂಜಾರಿ, ಉಲ್ಲಾಸ ಡಾಯಸ, ಪ್ರಕಾಶ ಲೋಪಿಸ ಉಪಸ್ಥಿತರಿದ್ದರು.

About Post Author

error: