September 18, 2024

Bhavana Tv

Its Your Channel

ಮಂಕಿ ಬ್ಲಾಕ್ ಕಾಂಗ್ರೆಸ್ ನಿಂದ ಮಾಸ್ಕ್ ಹಾಗೂ ಸೆನಿಟೈಜರ್ ವಿತರಣೆ.

ಹೊನ್ನಾವರ: ಕರೋನಾ ಮಹಾಮಾರಿಯನ್ನು ಹೊಡೆದೊಡಿಸುವಲ್ಲಿ ಜೀವದ ಹಂಗು ತೊರೆದು ಸೇವೆ ಸಲ್ಲಿಸುತ್ತಿರುವ ವೈದ್ಯಕೀಯ ಸಿಬ್ಬಂದಿ ಗಳಿಗೆ ಪೋಲಿಸ್ ಅಧಿಕಾರಿಗಳಿಗೆ ಮಂಕಿ ಬ್ಲಾಕ್ ಕಾಂಗ್ರೆಸ್ ಹಾಗೂ ಮಾಜಿ ಶಾಸಕ ಮಂಕಾಳ ವೈದ್ಯರಿಂದ ಮಾಸ್ಕ್ ಹಾಗೂ ಸೆನಿಟೈಜರ್ ವಿತರಿಸಲಾಯಿತು.
ಹೊನ್ನಾವರ ತಾಲ್ಲೂಕು ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಉಷಾ ಹಾಸ್ಯಗಾರ ಹಾಗೂ ಡಾ.ರಾಜೇಶ ಕಿಣಿಯವರಿಗೆ ಮಾಸ್ಕ್ ಹಾಗೂ ಸೆನಿಟರ್ ಗಳನ್ನು ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಭಾವನಾ ಟಿವಿಯೊಂದಿಗೆ ಮಾತನಾಡಿದ ಮಂಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋವಿಂದ ನಾಯ್ಕರವರು ಕರೊನಾ ಮಹಾಮಾರಿಯಿಂದ ದೇಶಾದ್ಯಂತ ಲಾಕ್ ಡೌನ್ ಆಗಿರುವುದರಿಂದ ಜನಸಾಮಾನ್ಯರಿಗೆ ತುಂಬಾ ಅನಾನೂಕೂಲತೆ ಉಂಟಾಗಿದೆ. ಕಾಂಗ್ರೆಸ್ ಪಕ್ಷವು ಆರಂಭದಿAದಲೂ ಸಹಕಾರ ನೀಡುತ್ತಾ ಬಂದಿದೆ. ಭಟ್ಕಳ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮಾಜಿ ಶಾಸಕ ಮಂಕಾಳ ವೈದ್ಯರವರ ಸಹಕಾರದಿಂದ ಎಲ್ಲಾ ಆಸ್ಪತ್ರೆಗಳಿಗೆ ,ಪೋಲಿಸ್ ಅಧಿಕಾರಿಗಳಿಗೆ ಹಾಗೂ ಆರೋಗ್ಯ ಕಾರ್ಯಕರ್ತರಿಗೆ ಮಾಸ್ಕ್ , ಸೆನಿಟೈಜರ್ ವಿತರಿಸಲಾಗಿದೆ. ಅತ್ಯಂತ ಸಂಕಷ್ಟ ದಲ್ಲಿರುವ ಟೆಂಪೊ ಅಟೋ ಡ್ರೈವರ್ ಗಳಿಗೆ ಆಹಾರ ಸಾಮಗ್ರಿಗಳ ಕಿಟ್ ವಿತರಿಸಲಾಗಿದೆ ಎಂದರು.


ಜಿಲ್ಲಾಪಂಚಾಯತ ಸದಸ್ಯೆ ಪುಷ್ಪಾ ನಾಯ್ಕರವರು ಮಾತನಾಡಿ ಮಂಕಾಳ ವೈದ್ಯರವರ ಸಹಕಾರದಿಂದ ಜನಸಾಮಾನ್ಯರಿಗೆ ಸ್ಪಂದಿಸಲು ಸಹಕಾರಿಯಾಗಿದೆ ಎಂದರು. ರಾಜು ನಾಯ್ಕ ಮಂಕಿಯವರು ಮಾತನಾಡಿ ಮಂಕಾಳ ವೈದ್ಯರವರ ಸಹಕಾರದಿಂದ ಲಾಕಡೌನ್ ಸಂದರ್ಭ ಸಾರ್ವ ಜನಿಕರಿಗೆ ಸ್ಪಂದಿಸುವ ಕುರಿತು ವಿವರಣೆ ನೀಡಿದರು.
ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಕ್ರಷ್ಣ ಗೌಡ ಅಶೋಕ ಕಾಸರಕೋಡ,ಈಶ್ವರ ನಾಯ್ಕ ಖಾಜೀಮನೆ. ಮುಂತಾದವರು ಉಪಸ್ಥಿತರಿದ್ದರು.

error: