July 12, 2024

Bhavana Tv

Its Your Channel

ಭಟ್ಕಳ-ಹೊನ್ನಾವರ ಕ್ಷೇತ್ರ ವ್ಯಾಪ್ತಿಯ ನಾಲ್ಕು ನೂರಕ್ಕೂ ಹೆಚ್ಚು ಟೆಂಪೋ ಚಾಲಕ, ಸಹಾಯಕರಿಗೆ ಮಾಜಿ ಶಾಸಕ ಮಂಕಾಳ ವೈದ್ಯರಿಂದ ಆಹಾರಕಿಟ್,

ಹೊನ್ನಾವರ ತಾಲೂಕಿನ ಕೆಳಗಿನೂರಿನಲ್ಲಿ ಭಟ್ಕಳ-ಹೊನ್ನಾವರ ಕ್ಷೇತ್ರ ವ್ಯಾಪ್ತಿಯ ನಾಲ್ಕು ನೂರಕ್ಕೂ ಹೆಚ್ಚು ಟೆಂಪೋ ಚಾಲಕ, ಸಹಾಯಕರಿಗೆ ಮಾಜಿ ಶಾಸಕ ಮಂಕಾಳ ವೈದ್ಯ ಕೊರೊನಾ ಲಾಕ್‌ಡೌನ್ ಸಂಕಷ್ಟದ ಹಿನ್ನೆಲೆಯಲ್ಲಿ ಆಹಾರಕಿಟ್, ಮಾಸ್ಕ್, ಸೆನಿಟೈಜರ್ ವಿತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಲಾಕ್‌ಡೌನದಿಂದ ನಿತ್ಯ ದುಡಿದು ತಿನ್ನುವ ಮಧ್ಯಮ ಹಾಗೂ ಬಡವರ್ಗ ದಿನನಿತ್ಯ ಜೀವನದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದರೆ ಕೊರೊನಾ ತೊಲಗಿಸಲು ಲಾಕ್‌ಡೌನ್‌ದಿಂದ ಕಷ್ಟವಾದರೂ ಸಹಿಸಿಕೊಳ್ಳಬೇಕಾಗಿದೆ. ಇಂಥ ಸಂದರ್ಭದಲ್ಲಿ ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದು ಮಾನವ ಧರ್ಮ. ಈ ಹಿನ್ನೆಲೆಯಲ್ಲಿ ಕ್ಷೇತ್ರದ ಒಬ್ಬ ಮಾಜಿ ಶಾಸಕನಾಗಿ ನಾನು ಸಂಕಷ್ಟದಲ್ಲಿರುವವರಿಗೆ ನೆರವು ನೀಡುವ ಮೂಲಕ ಸ್ಪಂದಿಸುತ್ತಿದ್ದೇನೆ ಎಂದರು.
ಟೆAಪೋ ಯೂನಿಯನ್ ಅಧ್ಯಕ್ಷ ನಾಗರಾಜ ಯಾಜಿ ಹೊನ್ನಾವರ, ಭಟ್ಕಳ, ಗೇರುಸೊಪ್ಪಾ ಮರ್ಗದಲ್ಲಿ ೪೦೦ಕ್ಕೂ ಹೆಚ್ಚು ಟೆಂಪೊಗಳು ಸಾರ್ವಜನಿಕರಿಗೆ ಸಾರಿಗೆ ಒದಗಿಸುತ್ತಿವೆ. ಟೆಂಪೋ ಚಾಲಕರು, ಸಹಾಯಕರು ಲಾಕ್‌ಡೌನ್‌ದಿಂದ ಉದ್ಯೋಗವಿಲ್ಲದೇ ಷಂಕಷ್ಟಕ್ಕೀಡಾಗಿದ್ದಾರೆ. ಇಂಥ ಸಂದರ್ಭದಲ್ಲಿ ಮಾಜಿ ಶಾಸಕ ಮಂಕಾಳ ವೈದ್ಯ ಅವರು ಅಷ್ಟೂ ಟೆಂಪೋ ಚಾಲಕರಿಗೆ, ಸಹಾಯಕರಿಗೆ ತಲಾ ಸಾವಿರ ರೂ. ಗಳ ಆಹಾರ ಕಿಟ್, ಮಾಸ್ಕ್, ಸೆನಿಟೈಜರ್ ವಿತರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ ಎಂದರು.
ಕ್ಷೇತ್ರ ವ್ಯಾಪ್ತಿಯ ಹೊನ್ನಾವರ ತಾಲೂಕಿನ ಟೆಂಪೋ ಚಾಲಕ, ಸಹಾಯಕರಿಗೆ ಕೆಳಗಿನೂರಿನಲ್ಲಿ, ಭಟ್ಕಳ ತಾಲೂಕಿನ ಟೆಂಪೋ ಚಾಲಕ ಸಹಾಯಕರಿಗೆ ಭಟ್ಕಳದಲ್ಲಿ ಆಹಾರ ಕಿಟ್, ಮಾಸ್ಕ್ ಸೆನಿಟೈಜರ್ ವಿತರಿಸಿದರು.

error: