April 23, 2024

Bhavana Tv

Its Your Channel

೩ ಪಂಚಾಯತಿ ವ್ಯಾಪ್ತಿಯ ೩೭೦೦ಕ್ಕೂ ಅಧಿಕ ಕುಟುಂಬಕ್ಕೆ ದಿನಸಿ ಸಾಮಾನುಗಳನ್ನು ಮನೆಬಾಗಿಲಿಗೆ ತಲುಪಿಸುವ ಮೂಲಕ ನೆರವಿಗೆ ಧಾವಿಸಿದ ಜಲವಳ್ಳಿ ವ್ಯವಸಾಯ ಸೇವಾ ಕೇಂದ್ರ.

ಹೊನ್ನಾವರ : ತಾಲೂಕಿನ ಜಲವಳ್ಳಿ ವ್ಯವಸಾಯ ಸೇವಾ ಕೇಂದ್ರ ತಾಲೂಕಿನ ಮುಂಚೂಣೆಯಲ್ಲಿರುವ ವ್ಯವಸಾಯ ಸೇವಾ ಕೇಂದ್ರದಲ್ಲಿ ಒಂದಾಗಿದ್ದು ೩ ಗ್ರಾಮ ಪಂಚಾಯತಿ ವ್ಯಾಪ್ತಿಯನ್ನು ಒಳಗೊಂಡಿದೆ. ತೀರಾ ಗ್ರಾಮೀಣ ಭಾಗದಲ್ಲಿರುವ ಜಲವಳ್ಳಿ, ಉಪ್ಪೂಣಿ, ಹೆರಂಗಡಿ ಪಂಚಾಯತಿ ವ್ಯಾಪ್ತಿಯನ್ನು ಒಳಗೊಂಡಿರುವ ಈ ವ್ಯವಸಾಯ ಕೇಂದ್ರದ ಹೆಚ್ಚಿನವರು ಕೃಷಿಕೂಲಿಯನ್ನು ನಡೆಸುತ್ತಿದ್ದರು. ಕರೋನಾ ಸುರಕ್ಷತೆಗಾಗಿ ಲಾಕ್‌ಡೌನ ಪರಿಣಾಮ ದಿನಸಿ ಕೊಂಡುಕೊಳ್ಳಲು ಪರಿತಪಿಸುತ್ತಿರುವಾಗ ರೈತರ ನೆರವಿಗೆ ಧಾವಿಸಿರುವ ವ್ಯವಸಾಯ ಸೇವಾ ಕೇಂದ್ರ ೩೭೦೦ಕ್ಕೂ ಅಧಿಕ ಕುಟುಂಬಗಳಿಗೆ ದಿನಸಿ ಸಾಮಗ್ರಿಗಳ ಕಿಟ್ ಸಿದ್ದಪಡಿಸಿ ಪ್ರತಿ ಮನೆಮನೆಗೆ ತಲುಪಿಸುವ ಕಾರ್ಯ ಮಾಡುತ್ತಿದ್ದಾರೆ. ಮೆಣಸು ೧೫ ಕ್ವೀಂಟಲ್, ತೊಗರಿ ಬೇಳೆ, ರವಾ, ಸಕ್ಕರೆ, ಚಾಪುಡಿ, ಅಡುಗೆ ಎಣ್ಣಿ, ಉಪ್ಪು ಈರುಳ್ಳಿ, ಬಟಾಟಿ, ತಲಾ ೩೦ ಕ್ವಿಂಟಲ್ ಖರೀದಿಸಿ ಪ್ರತಿ ಕುಟುಂಬಕ್ಕೆ ತಲಾ ೧ ಕಿಲೋ ವಿತರಿಸಲು ಮುಂದಾಗಿದೆ.
ಈ ಕಾರ್ಯ ಪರಿಶೀಲನೆ ನಡೆಸಿ ಸಾಂಕೇತಿಕ ಕಿಟ್ ವಿತರಿಸಿದ ಶಾಸಕ ಸುನೀಲ ನಾಯ್ಕ ಮಾತನಾಡಿ ಇಡಿ ಜಿಲ್ಲೆಗೆ ಮಾದರಿ ಕಾರ್ಯ ಮಾಡುತ್ತಿದೆ. ಇದೊಂದು ಗ್ರಾಮಸ್ಥರಿಗೆ ಅನೂಕೂಲಕರವಾದ ಕಾರ್ಯವಾಗಿದ್ದು ನಿಜಕ್ಕೂ ಪ್ರಶಂಸನಾರ್ಹವಾಗಿದೆ. ನನ್ನ ಕ್ಷೇತ್ರದವರಿಗೆ ಈಗಾಗಲೇ ದಿನಸಿ ಕಿಟ್ ವಿತರಿಸುತ್ತಿದ್ದು ಅಗತ್ಯವಿದ್ದವರು ನನ್ನ ಗಮನಕ್ಕೆ ತಂದರೆ ಕೋಡಲೇ ಅವರ ಮನೆ ಬಾಗಿಲಿಗೆ ತಲುಪಿಸುವ ಕಾರ್ಯ ಮಾಡುತ್ತೇನೆ ಎಂದರು.
ಜಲವಳ್ಳಿ ವ್ಯವಸಾಯ ಸೇವಾ ಸಂಘದ ಅಧ್ಯಕ್ಷ ಜಯಂತ ನಾಯ್ಕ ಮಾತನಾಡಿ ನಮ್ಮ ಸಂಘದ ನಮ್ಮ ಭಾಗದವರಿಗೆ ಅನೂಕೂಲ ಮಾಡಿಕೊಡಬೇಕು ಎನ್ನುವ ಉದ್ದೇಶದಿಂದ ಎಲ್ಲರ ಸಹಕಾರ ಪಡೆದು ಈ ಕಾರ್ಯ ನಡೆಸುತ್ತಿದ್ದು ಪ್ರತಿಯೊರ್ವರ ಮನೆಬಾಗಿಲಿಗೆ ವಿತರಣೆ ಮಾಡಲಿದ್ದೇವೆ ಎಂದರು.
ಉಪಾಧ್ಯಕ್ಷ ಪಿಟಿ ನಾಯ್ಕ ಮಾತನಾಡಿ ಕರೋನಾ ಸಂಕಷ್ಟದಲ್ಲಿ ಜನಸಾಮನ್ಯರು ದಿನಸಿ ತೆಗೆದುಕೊಳ್ಳುವ ಪರಿತಪಿಸುವಾಗ ನೆರವಿಗೆ ಬರುವ ಉದ್ದೇಶದಿಂದ ಈ ಕಾರ್ಯಕ್ಕೆ ಸಂಘ ಮುಂದಾಗಿದೆ. ೪ ದಿನದಲ್ಲ ಪ್ರತಿ ಮನೆಬಾಗಿಲಿಗೆ ದಿನಸಿ ಸಾಮಗ್ರಿ ಹೊಂದಿರುವ ಕಿಟ್ ವಿತರಣೆಯಾಗಲಿದೆ ಎಂದರು.
ಈ ಸಂದರ್ಭದಲ್ಲಿ ಸಂಘದ ನಿರ್ದೆಶಕರು, ಸಿಬ್ಬಂದಿಗಳು ಉಪಸ್ಥಿತರಿದ್ದರು.

error: