March 29, 2024

Bhavana Tv

Its Your Channel

ಆರೋಗ್ಯ ಕಾಪಾಡುವವರ ಅನಾರೋಗ್ಯಕರ ವಸತಿಗೃಹಗಳು

ಹೊನ್ನಾವರ ಎ. ೨೪ : ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಸಾಕಷ್ಟು ವೈದ್ಯರಿದ್ದು ಸಿಬ್ಬಂದಿಗಳು ತೃಪ್ತಿಕರವಾಗಿ ಕೆಲಸಮಾಡುತ್ತಿದ್ದಾರೆ. ಈಗ ಹಗಲು ರಾತ್ರಿ ಕೋವಿಡ್-೧೯ ತಪಾಸಣೆಯ ಕೆಲಸ ನಡೆದಿದೆ. ಹೀಗಿರುವಾಗ ಅವರು ಉಳಿದುಕೊಂಡಿರುವ ವಸತಿಗೃಹವನ್ನು ಕಂಡರೆ ಅಯ್ಯೋ ಅನಿಸುತ್ತದೆ.
ವೈದ್ಯರ ೩, ಶುಶ್ರೂಶಕಿಯರ ೪, ‘ಡಿ’ಗುಂಪಿನ ನೌಕರರ ೫, ಮತ್ತು ವಾಹನ ಚಾಲಕರ ೨ ಒಟ್ಟಿಗೆ ೧೪ ವಸತಿಗೃಹಗಳಿವೆ. ಇವೆಲ್ಲವೂ ೭೦ವರ್ಷ ಹಿಂದಿನದಾಗಿದ್ದು ಹಂಚಿನ ಹೊದಿಕೆಯಿದೆ. ಗೋಡೆಗಳು ಬಿರುಕು ಬಿಟ್ಟಿದ್ದು ಸುಣ್ಣಬಣ್ಣ ಕಂಡಿಲ್ಲ. ಕೆಲವು ಕಟ್ಟಡಗಳು ಕುಸಿದು ಬೀಳುವ ಬೀತಿಯಲ್ಲಿ ರೀಪು, ಪಕಾಸು ಮುರಿದು ಹೋಗಿದೆ. ಗಿಡಗಂಟಿ ಬೆಳೆದು ಕಾಡಾಗಿದೆ. ಈ ವಸತಿಗೃಹಗಳು ಮನುಷ್ಯರ ವಾಸಕ್ಕೆ ಅಯೋಗ್ಯ ಎಂದು ಜಿಲ್ಲಾ ಪಂಚಾಯತ ಇಂಜಿನೀಯರಿAಗ್ ವಿಭಾಗ ಅಭಿಪ್ರಾಯಕೊಟ್ಟಿದೆ. ಹೊಸ ಕಟ್ಟಡ ಮಂಜೂರಾಗುವ ಮಾತಿರಲಿ ಇರುವ ಕಟ್ಟಡವನ್ನು ಆರೋಗ್ಯ ಇಲಾಖೆ ದುರಸ್ಥಿಮಾಡಿಕೊಟ್ಟಿಲ್ಲ. ಅನಿವರ‍್ಯವಾಗಿ ಕಾನೂನಿನಂತೆ ಸಿಬ್ಬಂದಿಗಳು ಆಸ್ಪತ್ರೆಗೆ ಹತ್ತಿರದ ಅದೇ ವಸತಿಗೃಹದಲ್ಲಿ ಉಳಿದುಕೊಂಡು ಸಂಕಟಪಡುತ್ತಿದ್ದಾರೆ. ಈ ವಿಷಯವನ್ನು ನಿನ್ನೆ ಆಸ್ಪತ್ರೆಗೆ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಗಮನಕ್ಕೂ ತರಲಾಗಿದೆ. ಇನ್ನೂ ಕೆಲವೇ ದಿನಗಳಲ್ಲಿ ಮಳೆಗಾಲ ಬರುವುದರಿಂದ ಸರ್ಕಾರ ತುರ್ತು ಈ ಕಟ್ಟಡಗಳ ಛಾವಣಿ ಬದಲಾಯಿಸಿ ಸುಣ್ಣಬಣ್ಣ ಮಾಡಿಕೊಡಬೇಕಿದೆ. ಇದೇ ಆವಾರದಲ್ಲಿರುವ ಮಂಗನ ಕಾಯಿಲೆ ಜಿಲ್ಲಾ ಕಾರ್ಯಾಲಯಕ್ಕೂ ಕಟ್ಟಡವಿಲ್ಲ. ರಾಜ್ಯಮಟ್ಟದಲ್ಲಿ ಆಸ್ಪತ್ರೆ ಪ್ರಥಮ ಸಾಲಿನಲ್ಲಿ ಪರಿಗಣಿಸಲ್ಪಟ್ಟಿದ್ದರೂ ಇಲ್ಲಿ ದುಡಿಯುವ ಸಿಬ್ಬಂದಿಗಳ ವಸತಿಗೃಹ ಕೊನೆಯ ಸಾಲಿನಲ್ಲೂ ಇಲ್ಲ.

error: