April 26, 2024

Bhavana Tv

Its Your Channel

ಸಚಿವ ಶಿವರಾಮ ಹೆಬ್ಬಾರ್ ಅವರಿಗೆ ಶಿವಾನಿ ಶಾಂತಾರಾಮ ಮನವಿ ಸಲ್ಲಿಕೆ.

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯಲ್ಲಿ ಲಾಕ್‌ಡೌನ್ ಮಾಡಿದ ನಂತರ ಗ್ರಾಮೀಣ ಭಾಗದಲ್ಲಿ ಅನೇಕರು ತೊಂದರೆಯಲ್ಲಿ ಸಿಲುಕಿದ್ದು ಹೆಚ್ಚಾಗಿ ಬಡವರು, ಪ.ಜಾತಿ/ಪ.ಪಂಗಡದವರು ಕೂಡಾ ತೊಂದರೆಗೊಳಗಾಗಿದ್ದಾರೆ. ಅವರ ತೊಂದರೆಯನ್ನು ನಿವಾರಿಸುವ ನಿಟ್ಟಿನಲ್ಲಿ ಗ್ರಾಮ ಪಂಚಾಯತ್ ಮಟ್ಟದಲ್ಲಿ ಜೀವನಾವಶ್ಯಕ ವಸ್ತುಗಳನ್ನು ಪೂರೈಸಲು ಗ್ರಾಮ ಪಂಚಾಯತ್ ಅನುದಾನವನ್ನು ಬಳಸಿಕೊಳ್ಳಲು ಹಾಗೂ ಟ್ಯಾಕ್ಸ್ ಇತ್ಯಾದಿಗಳಲ್ಲಿ ಮೀಸಲಿಡುವ ಶೇ.೨೫ನ್ನು ಕೂಡಾ ಬಳಸಿಕೊಳ್ಳಲು ಆದೇಶವಾಗಬೇಕು ಎಂದು ಆಗ್ರಹಿಸಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ಅವರಿಗೆ ಬಿ.ಜೆ.ಪಿ. ಜಿಲ್ಲಾ ಕಾರ್ಯದರ್ಶಿ ಶಿವಾನಿ ಶಾಂತಾರಾಮ ಲಿಖಿತ ಮನವಿ ನೀಡಿ ವಿನಂತಿಸಿದರು.
ಸುದ್ದಿಗಾರರಿಗೆ ವಿಷಯ ತಿಳಿಸಿದ ಶಿವಾನಿ ಈ ಬಗ್ಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಮಂತ್ರಿ ಈಶ್ವರಪ್ಪ ಅವರಿಗೂ ಪತ್ರ ಬರೆದಿದ್ದು ಸಕಾರಾತ್ಮಕವಾಗಿ ಸ್ಪಂಧಿಸುವ ಭರವಸೆ ನೀಡಿದ್ದಾರೆ ಎಂದು ಹೇಳಿದ್ದಾರೆ. ಒಟ್ಟಾರೆ ಗ್ರಾಮೀಣ ಜನತೆಯ ಪರವಾಗಿ ಶಿವಾನಿ ಶಾಂತಾರಾಮ್ ಅವರ ಕಾಳಜಿ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

error: