ಕೃಷ್ಣ ಯಾಜಿ ಇಡಗುಂಜಿಯವರು ಇನ್ನಿಲ್ಲ ಎಂದು ನಂಬುವುದಾದರೆ ಹೇಗೆ.ಅವರ ಮಗುವಿನಂತಹ ನಗೆ,ಯಾವುದೆ ಬಗೆಯ ಅಹಮಿಕೆಯಿರದ ನಿರಾಡಂಬರದ ಬಗೆ,ಚಂಡೆಯ ಅಂತರAಗವನ್ನು ಅರಿತು ಅದನ್ನು ಎಲ್ಲರು ತಲೆದೂಗುವಂತೆ ನುಡಿಸುವ ರೀತಿ,ಆಡುವ ಪ್ರತಿ ಮಾತಿನಲ್ಲಿಯೂ ಉಕ್ಕಿ ಹರಿವ ಜನ್ಮಾಂತರದ ಬಂಧುತ್ವದ ಪ್ರೀತಿ.ಮದ್ದಳೆ ವಾದನಲ್ಲಿಯು ಅದೆ ಬಗೆಯ ಪರಿಣತಿ.ದಣಿವೆಂಬುದನರಿಯದ ಮನಸ್ಥಿತಿ.ಬಡತನವನ್ನೆ ಬದುಕುತ್ತ ಸಿರಿವಂತ ಕಲಾವಿದನಾಗಿ ಮೆರೆದ ಉದಾತ್ತ.ನಾಲ್ಕಾರು ಚಂಡೆಗಳನ್ನು ವಿಭಿನ್ನ ಲಯದಲ್ಲಿ ನುಡಿಸುವ ನಿಷ್ಣಾತ,ಚಂಡೆ ಕುಟ್ಟು ಎಂದು ಗೆಳೆಯರು ಒಡನಾಡಿಗಳು ಚುಡಾಯಿಸಿದಾಗ ನಕ್ಕು ಸುಮ್ಮನಾಗುವ ಸುಸಂಸ್ಕೃತ.ಲಯ ಲಾಸ್ಯ ಚಂಡೆ,ಮದ್ದಳೆ,ತಬಲಾ,ಭಾಗವತಿಕೆಯ ವಿನೂತನ ಪ್ರಯೋಗದಲ್ಲಿ ಚಂಡೆಯ ಪ್ರಚಂಡನಾಗಿ ಮೆರೆದ ಕೃಷ್ಣಯಾಜಿ.ಸುಖ ಬಂದಾಗ ಹಿಗ್ಗದೆ ದು:ಖ ಬಂದಾಗ ಕುಗ್ಗದೆ ಸ್ಥಿತ ಪ್ರಜ್ಞತ್ವವನ್ನು ಮೆರೆದ ಸಜ್ಜನ.ಮೇಳದ ಯಜಮಾನರು ಕಲಾವಿದರನ್ನು ತಾರತಮ್ಯ ಭಾವದಿಂದ ನಡೆಸಿಕೊಂಡಾಗ ನೊಂದುಕೊAಡ ಕಲಾವಿದ.
ಪ್ರಶಸ್ತಿ,ಸನ್ಮಾನಗಳಿಗೆ ತಲೆಬಾಗಿ ಕಲಾ ದೇವಿಯ ಸೇವೆಗೆ ತನ್ನನ್ನು ತೆತ್ತುಕೊಂಡು ‘ ಸದುವಿನಯವೆ ಸದಾಶಿವನೊಲುಮೆ’ ಎಂದು ನಂಬಿ ನಡೆದ ನುಡಿದ ಸಂಭಾವಿತ ಸನ್ಮಿತ್ರ,ನಿಗರ್ವಿ ಇಡಗುಂಜಿ ಪರಿಸರದ ಮಾವಿನಕೆರೆಯ ಕೃಷ್ಣಯಾಜಿ ಹಲವಾರು ಯಕ್ಷಗಾನ ಮೇಳದಲ್ಲಿ ಚಂಡೆ ವಾದಕರಾಗಿ ಮದ್ದಳೆಯನ್ನು ನುಡಿಸುತ್ತ ಪ್ರೇಕ್ಷಕ ಮತ್ತು ಕಲಾವಿದರ ನಡುವಿನ ನಾದದ ಸೇತುವೆಯಾಗಿದ್ದ ಕೃಷ್ಣಯಾಜಿ ಯಾರಿಗು ಹೇಳದೆ ಕೇಳದೆ ಒಂದು ದಿನದ ಮಟ್ಟಿಗೆ ಹಾಸಿಗೆಯನ್ನು ಹಿಡಿಯದೆ ಹೀಗೆ ಏಕಾಏಕಿ ಬಾರದ ಊರಿಗೆ ನಡೆದೆ ಬಿಟ್ಟರಲ್ಲಾ!ಅವರಿಲ್ಲದ ಆ ಶೂನ್ಯವನ್ನು ತುಂಬುವುದೆAತು.ನನ್ನ ಪ್ರೀತಿ ಮತ್ತು ಅಭಿಮಾನದ ಮಾನವೀಯತೆಯ ಸಾಕಾರವಾಗಿದ್ದ ಕೃಷ್ಣ ಯಾಜಿಯವರಿಗೆ ನನ್ನ ನುಡಿನಮನ ಎಂದು ಡಾ|| ಶ್ರೀಪಾದ ಶೆಟ್ಟಿಯವರು ತಮ್ಮ ಮುಖಪುಟದಲ್ಲಿ ಬರೆದುಕೊಂಡಿದ್ದಾರೆ.
More Stories
ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ಉತ್ತರ ಕನ್ನಡ ಹಾಗೂ ಭಟ್ಕಳ ಘಟಕ ವತಿಯಿಂದ ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ಸತ್ಯಾಗ್ರಹ.
ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘ ಭಟ್ಕಳವತಿಯಿಂದ ಕೆಲವು ಬೇಡಿಕೆಗಳನ್ನು ಈಡೇರಿಸುವಂತೆ ಮೆರವಣಿಗೆ ಮೂಲಕ ಬಂದು ಸಹಾಯಕ ಆಯುಕ್ತರಿಗೆ ಮನವಿ.
ತುಳುನಾಡಿನ ಕಾರಣೀಕ ಮೆರೆದ ಕಲ್ಜಿಗ ಸಿನೇಮಾ, ಕಾಂತಾರದ ಬೆನ್ನಿಗೇ ಮತ್ತೊಂದು ಕಲಾತ್ಮಕ ಚಿತ್ರ ಕೊಟ್ಟ ಕರಾವಳಿ