April 13, 2024

Bhavana Tv

Its Your Channel

ಲಾಕ್ ಡೌನ್ ಹಿನ್ನೆಲೆ ಶಿರಾಲಿ ಚಿತ್ರಾಪುರ ಮಠದ ವತಿಯಿಂದ ಜನರಿಗೆ ೬೦೦ ಕಿಟ್ ವಿತರಣೆ ಮಠದಿಂದ ತಾಲೂಕ ಆಡಳಿತಕ್ಕೆ 250 ಕಿಟ್‌ಗಳ ಹಸ್ತಾಂತರ

ಭಟ್ಕಳ: ದೇಶದಾಧ್ಯಂತ ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಜನಸಾಮಾನ್ಯರು ಜೀವನೋಪಾಯಕ್ಕಾಗಿ ವಸ್ತುಗಳ ಪಡೆಯಲು ಸಂಕಷ್ಟ ಎದುರಾಗಿದ್ದು ಭಟ್ಕಳದಲ್ಲಿಯೂ ಇದೇ ಸ್ಥಿತಿ ಇದ್ದು ಈ ಹಿನ್ನೆಲೆ ಈಗ ಭಟ್ಕಳ ಶಿರಾಲಿ ಚಿತ್ರಾಪುರ ಮಠವೂ ಬಡವರಿಗೆ, ಅಸಹಾಯಕರಿಗೆ ನೆರವಾಗುವ ನಿಟ್ಟಿನಲ್ಲಿ ತಾಲೂಕಾ ಆಡಳಿತಕ್ಕೆ ಅಗತ್ಯ ವಸ್ತುಗಳ ಆಹಾರ ಸಾಮಾಗ್ರಿಗಳ ಕಿಟ್‌ಗಳನ್ನು ಹಸ್ತಾಂತರಿಸಿದ್ದು, ಇನ್ನುಳಿದಂತೆ ಮನೆ ಮನೆ ವಿತರಣೆ ಮಾಡಲಾಗಿದೆ.

ಸಮಾಜದಲ್ಲಿನ ಬಡವರಿಗೆ, ಕಷ್ಟದಲ್ಲಿರುವ ಜನರಿಗೆ ಪತ್ರಿ ಸಲವು ಶಿರಾಲಿ ಚಿತ್ರಾಪುರ ಮಠವೂ ನೆರವಿಗೆ ನಿಂತಿದ್ದು ಸಾಕಷ್ಟು ಸಂಧರ್ಭದಲ್ಲಿ ತನ್ನದೇ ರೀತಿಯಲ್ಲಿ ಸಹಾಯ ಹಸ್ತ ಚಾಚಿದೆ. ಈಗ ದೇಶಕ್ಕೆ ಅಪ್ಪಳಿಸಿದ ಈ ಕೋರೋನಾದಿಂದ ಜನರು ಪರಿತಪಿಸುತ್ತಿದ್ದ ವೇಳೆ ಸಮಾಜದಲ್ಲಿನ ಮಠಗಳು ಸಹ ಸಾಕಷ್ಟು ಸಹಾಯವನ್ನು ನೀಡಿದ್ದು ಜಿಲ್ಲೆಯ ಪ್ರಮುಖ ಮಠಗಳಲ್ಲಿ ಒಂದಾದ ಹಲವು ಇತಿಹಾಸ ಹೊಂದಿದ ಶಿರಾಲಿ ಚಿತ್ರಾಪುರ ಮಠವೂ ಈಗ ಕೋರೋನಾ ಲಾಕ್ ಡೌ???ನಿಂದ ಜೀವನೋಪಾಯದ ವಸ್ತುಗಳು ವಿತರಿಸಲು ಮುಂದಾಗಿದ್ದು ೬೦೦ ಅಗತ್ಯ ವಸ್ತುಗಳನ್ನು ತಯಾರಿಸಿ 250 ಕಿಟ್‌ಗಳನ್ನು ತಾಲೂಕಾಢಳಿತಕ್ಕೆ ಸಹಾಯಕ ಆಯುಕ್ತ ಭರತ್ ಎಸ್. ಅವರಿಗೆ ನೀಡಿದ್ದು, ಇನ್ನುಳಿದ ೧೦೦ ಕಿಟ್‌ನ್ನು ಮಠದ ಮೂಲಕ ಅಗತ್ಯ ಜನರಿಗೆ ಮನೆ ಮನೆ ತಲುಪಿಸಲಾಗಿದೆ. ಹಾಗೂ ಶಾಸಕ ಸುನೀಲ ನಾಯ್ಕ ಅವರಿಗೆ ೨೦೦ ಕಿಟ್ ಮತ್ತು ಉಳಿದಂತೆ ಶಿರಾಲಿ ಗ್ರಾಮ ಪಂಚಾಯತಗೆ ಕಿಟ್ ನೀಡಲಾಗಿದೆ.

ಈ ಸಂದರ್ಬದಲ್ಲಿ ಶಿರಾಲಿ ಚಿತ್ರಾಪುರ ಮಠ ಪರಿಜ್ಞಾನ ಪೌಂಡೆಷನ್ ಚಾರಿಟೆಬಲ್ ಟ್ರಸ್ಟನ ಸಿ.ಇ.ಓ. ಸುರಜ್ ಬಲವಳ್ಳಿ, ಸಹಾಯಕ ಆಯುಕ್ತ ಭರತ್ ಸೆಲ್ವಂ, ಸಾಜಿದ್ ಮುಲ್ಲಾ, ತಾಲೂಕ ಪಶು ಇಲಾಖಾ ಅಧಿಕಾರಿ ವಿವೇಕಾನಂದ ಹೆಗಡೆ ಮುಂತಾದವರು ಉಪಸ್ಥಿತರಿದ್ದರು.
ನಾರಾಯಣ ಮಲ್ಲಾಪುರ- ಜನರಲ್ ಮ್ಯಾನೆಜರ್, ಚಿತ್ರಾಪುರ ಮಠ ಪರಿಜ್ಞಾನ ಪೌಂಡೆಷನ್ ಚಾರಿಟೆಬಲ್ ಟ್ರಸ್ಟ.ಇವರು ಮಾತನಾಡಿ ಸಂಘಟನೆಯ ವತಿಯಿಂದ ಇಂದು ಅಸಹಾಯಕರಿಗೆ ಬಡವರಿಗೆ ಹಾಗು ಅಗತ್ಯ ಜನರಿಗೆ ಆಹಾರ ಸಾಮಗ್ರಿಗಳ ದಿನಸಿ ಕಿಟ್ ನೀಡಿದ್ದೇವೆ. ತಾಲೂಕಾಢಳಿತಕ್ಕೆ ೨೦೦ ಕಿಟ್ ವಿತರಿಸಿದ್ದು ಇನ್ನುಳಿದಂತೆ ಕೆಲವು ಮೂಲದಿಂದ ಜನರಿಗೆ
ಅಗತ್ಯ ಕಿಟ್ ತಲುಪಿಸಿ ಜನರಿಗೆ ವಿತರಣೆ ಮಾಡಿದ್ದೇವೆ. ಮಠದ ಉದ್ದೇಶ ಅಸಹಾಯಕರು ಮತ್ತು ಬಡವರಿಗೆ ಹಸಿವನಿಂದ ಬಳಲಬಾರದು ಅಂತಹರಿಗೆ ಈ ಅಗತ್ಯ ಕಿಟ್ ಸಿಗಬೇಕು ಸಹಾಯ ಮಾಡುವುದಾದೆ ಎಂದರು.

manju muttalli

error: