July 14, 2024

Bhavana Tv

Its Your Channel

ಲಾಕ್ ಡೌನ್ ನಿಂದಾಗಿ ತೀರಾ ಸಂಕಷ್ಟದಲ್ಲಿರುವ ಆಟೋ ರಿಕ್ಷಾ ಚಾಲಕರಿಗೆ ಸರ್ಕಾರದಿಂದ ನೆರವು ಘೋಷಿಸುವಂತೆ ಸರಕಾರಕ್ಕೆ ಮನವಿ

ಭಟ್ಕಳ: ಲಾಕ್ ಡೌನ್ ನಿಂದಾಗಿ ತೀರಾ ಸಂಕಷ್ಟದಲ್ಲಿರುವ ಆಟೋ ರಿಕ್ಷಾ ಚಾಲಕರಿಗೆ ಸರ್ಕಾರದಿಂದ ನೆರವು ಘೋಷಿಸುವಂತೆ ಸಹಾಯಕ ಆಯುಕ್ತರ ಮೂಲಕ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ಅವರಿಗೆ ಭಟ್ಕಳ ಆಟೋ ರಿಕ್ಷಾ ಚಾಲಕ ಮಾಲಕರ ಸಂಘದ ಮಾಜಿ ಅಧ್ಯಕ್ಷ ವೆಂಕಟೇಶ ನಾಯ್ಕ ಮಂಗಳವಾರದAದು ಮನವಿ ಸಲ್ಲಿಸಿದರು.

ಭಟ್ಕಳ ಸೇರಿದಂತೆ ರಾಜ್ಯದಲ್ಲಿ ಕೋರೋನಾ ವೈರಸ್ ತಡೆಗಾಗಿ ಹಮ್ಮಿಕೊಳ್ಳಲಾದ ಲಾಕ್ ಡೌನನ್ನಿಂದ ಕಳೆದ ಒಂದು ತಿಂಗಳಿAದ ಆಟೋ ಚಾಲಕರ ದುಡಿಮೆ ಇಲ್ಲದೆ ಮನೆಯಲ್ಲೆ? ಕುಳಿತಿದ್ದು ಕುಟುಂಬ ನಿರ್ವಹಣೆಗೆ ಪರದಾಡುತ್ತಿದ್ದಾರೆ. ಆಟೋ ರಿಕ್ಷಾ ಚಾಲಕರು ತೀರಾ ಬಡವರಾಗಿದ್ದು ಆಟೋವನ್ನೇ ಓಡಿಸಿ ತಮ್ಮ ಕುಟುಂಬ ನಿರ್ವಹಣೆ ಮಾಡುತ್ತಿದ್ದವರು, ಇದೀಗ ಲಾಕ್ ಡೌನನಿಂದ ಯಾರಿಗೂ ಮನೆಯಿಂದ ಹೊರ ಬೀಳದೆ ಸ್ಥಿತಿ ಎಲ್ಲೆಡೆ ಇದೆ.

ಆಟೋ ಚಾಲಕರು ಆಟೋ ಖರೀದಿ ಸೇರಿದಂತೆ ಮಕ್ಕಳ ವಿದ್ಯಾಭ್ಯಾಸ, ಮನೆ ನಿರ್ಮಾಣ, ಮದುವೆ ಹೀಗೆ ಅನೇಕ ಕಾರ್ಯಗಳಿಗೆ ಸರ್ಕಾರಿ ಸಂಘ ಸಹಕಾರಿ ಬ್ಯಾಂಕ್ ರಾಷ್ಟೀಕ್ರತ ಬ್ಯಾಂಕ್ ಗಳಲ್ಲಿ ಸಾಲ ಮಾಡಿಕೊಂಡಿರುತ್ತಾರೆ. ಇದೀಗ ದುಡಿಮೆ ಇಲ್ಲದೇ ಇರುವುದು ಸಾಲ ಮರುಪಾವತಿ ಸೇರಿದಂತೆ ಆಟೋರಿಕ್ಷಾ ಇನ್ಸೂರೆನ್ಸ್ ತೆರಿಗೆ ಪಾವತಿಸಲು ತೀರಾ ಕಷ್ಟಕರವಾಗಿದೆ. ದಿನನಿತ್ಯ ಒಂದು ಹೊತ್ತು ಸರಿಯಾಗಿ ಊಟ ಮಾಡಲು ಕೂಡ ಆಟೊ ಚಾಲಕರು ತೊಂದರೆ ಪಡುತ್ತಿದ್ದಾರೆ. ಮೊದಲೇ ಡೀಸೆಲ್ ಪೆಟ್ರೋಲ್ ಗ್ಯಾಸ್ ದರ ಏರಿಕೆ, ಬೆಲೆ ಏರಿಕೆಯಿಂದಾಗಿ ಕಂಗಾಲಾಗಿದ್ದ ಆಟೋ ಚಾಲಕರು ಇದೀಗ ಲಾಕ್ ಡೌನನಿಂದ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಸರ್ಕಾರಕ್ಕೆ ಆಟೋ ಚಾಲಕರಿಂದ ವಾರ್ಷಿಕವಾಗಿ ಎಲ್ಲ ರೀತಿಯಲ್ಲೂ ೧೮೪೦ ಕೋಟಿ ರೂಪಾಯಿ ಆದಾಯ ಬರುತ್ತಿದೆ. ಆದರೆ ಆಟೋ ಚಾಲಕರು ಸಂಕಷ್ಟದಲ್ಲಿದ್ದಾಗ ಸರ್ಕಾರ ಯಾವುದೇ ರೀತಿ ಸ್ಪಂದನೆ ಮಾಡದೇ ಇರುವುದು ಆಟೋ ಚಾಲಕರಲ್ಲಿ ನೈತಿಕ ಬಲ ಕುಸಿಯತೊಡಗಿದೆ.
ಬೇರೆ ಕೆಲಸ ಗೊತ್ತಿಲ್ಲದೇ ಚಾಲಕರು ನಮ್ಮ ಜೀವನ ಮುಂದೇನು? ಎನ್ನುವ ಚಿಂತೆಯಲ್ಲಿದ್ದಾರೆ. ಈಗಾಗಲೇ ದೆಹಲಿ, ಆಂಧ್ರಪ್ರದೇಶದ ಮುಂತಾದ ಕಡೆ ಕೋರೋನಾ ಲಾಕ ಡೌನನಿಂದಾಗಿ ಸಂಕಷ್ಟದಲ್ಲಿರುವ ಆಟೋ ಚಾಲಕರಿಗೆ ಸರ್ಕಾರದಿಂದ ಮಾಸಿಕವಾಗಿ ೫ ಸಾವಿರ ರೂಪಾಯಿ ನೀಡುವ ಕಾರ್ಯ ಆರಂಭಗೊAಡಿದೆ.

ರಾಜ್ಯದಲ್ಲೂ ದುಡ್ಡು ಇಲ್ಲದೆ ತೀರಾ ಸಂಕಷ್ಟಕ್ಕೆ ಸಿಲುಕಿರುವ ಆಟೋ ಚಾಲಕರಿಗೆ ಸರಕಾರದಿಂದ ಸಂಕಷ್ಟ ಪರಿಹಾರ ನಿಧಿಗಾಗಿ ತಿಂಗಳಿಗೆ ೬ ಸಾವಿರ ರೂಪಾಯಿ ಬಿಡುಗಡೆ ಮಾಡಿದ್ದಲ್ಲಿ ಎಲ್ಲರಿಗೂ ತಮ್ಮ ತಮ್ಮ ಕುಟುಂಬದ ನಿರ್ವಹಣೆಗೆ ಹೆಚ್ಚಿನ ಅನುಕೂಲವಾಗಲಿದೆ.

ಸರಕಾರ ಕೃಷಿಕರಿಗೆ ಕಿಸಾನ್ ಯೋಜನೆಯಡಿಯಲ್ಲಿ ಹಣ ನೀಡಿದಂತೆ ಆಟೋ ಚಾಲಕರಿಗೂ ನೆರವಾಗುವ ಪ್ರಮುಖ ಯೋಜನೆಯನ್ನು ಶೀಘ್ರದಲ್ಲೆ? ಜಾರಿಗೊಳಿಸಬೇಕು. ಆಟೋ ಚಾಲಕರಿಗೆ ಸರ್ಕಾರದ ಮೇಲೆ ಹೆಚ್ಚಿನ ವಿಶ್ವಾಸ ನಂಬಿಕೆ ಇದ್ದು, ಆಟೋ ಚಾಲಕನನ್ನು ಕಾರ್ಮಿಕ ಇಲಾಖೆಯ ವ್ಯಾಪ್ತಿಯಲ್ಲಿ ತಂದು ನಮ್ಮನ್ನು ಕಾರ್ಮಿಕರೆಂದು ಗುರುತಿಸಿ ಸರ್ಕಾರ ಯೋಜನೆಗಳು ನಮಗೆ ಸಿಗುವಂತೆ ಮಾಡಬೇಕಿದೆ.

ಆಟೋ ಚಾಲಕರು ಪಟ್ಟಣದ ಸಾರಿಗೆ ಕೊಂಡಿಯಾಗಿದ್ದು, ಚಾಲಕ ವೃತ್ತಿಯ ಜನತೆಗೆ ಜನ ಜತೆ ಉತ್ತಮ ಬಾಂಧವ್ಯ ಕೂಡ ಹೊಂದಿದ್ದು ಅನೇಕ ಸಾಮಾಜಿಕ ಚಟುವಟಿಕೆಗಳು ಪೊಲೀಸ್ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಿಗೆ ಉತ್ತಮ ರೀತಿಯ ಸಹಕಾರವನ್ನು ನೀಡುತ್ತಿದ್ದಾರೆ. ಆಟೋ ಚಾಲಕರು ಸಂಕಷ್ಟದಲ್ಲಿರುವುದನ್ನು ಗಂಭೀರವಾಗಿ ಪರಿಗಣಿಸಿ ಆದಷ್ಟು ಶೀಘ್ರದಲ್ಲಿ ಸರ್ಕಾರದಿಂದ ನೆರವು ಘೋಷಿಸಬೇಕು ಜೊತೆಗೆ ಈ ವರ್ಷದ ಇನ್ಸೂರೆನ್ಸ್ ತೆರಿಗೆ ಸಾಲ ಮನ್ನಾ ಮಾಡುವುದರೊಂದಿಗೆ ಸಂಕಷ್ಟದಲ್ಲಿರುವ ಆಟೋ ಚಾಲಕರಿಗೆ ಸರ್ಕಾರ ಸ್ಪಂದಿಸಿ ಮುಂದಿನ ಜೀವನ ಉತ್ತಮಗೊಳಿಸಲು ಹೊಸ ಯೋಜನೆ ರೂಪಿಸಿಕೊಳ್ಳಬೇಕು ಈ ಮೂಲಕ ಮನವಿಯಲ್ಲಿ ಉಲ್ಲೇಖಿಸಿದ್ದಾರೆ.

ಈ ಸಂಧರ್ಭದಲ್ಲಿ ಆಟೋ ರಿಕ್ಷಾ ಚಾಲಕ ಮಾಲಕ ಸಂಘದ ಗಣೇಶೋತ್ಸವ ಸಮಿತಿ ಅಧ್ಯಕ್ಷ ಗಣಪತಿ ನಾಯ್ಕ ಮುಟ್ಟಳ್ಳಿ, ಆಟೋ ರಿಕ್ಷಾ ಚಾಲಕ ಮಾಲಕರ ಸಂಘದ ಸದಸ್ಯ ಮಂಜುನಾಥ ನಾಯ್ಕ ಇದ್ದರು.

error: