May 29, 2023

Bhavana Tv

Its Your Channel

ಆಕಸ್ಮಿಕ ಸಾವನ್ನಪ್ಪಿದ ಜಾನುವಾರ, ಸ್ಥಳೀಯರ ಕರೆಗೆ ತಕ್ಷಣ ಸ್ಪಂದಿಸಿದ ತಹಸೀಲ್ದಾರ ಎಸ್. ರವಿಚಂದ್ರ

ಭಟ್ಕಳ: ಕೋರೋನಾ ಕಡಿವಾಣದ ಹಿನ್ನೆಲೆ ಲಾಕ ಡೌನ್ ಆದೇಶದಲ್ಲಿ ಕೆಲವು ಜಾನುವಾರುಗಳ ಕಾಳಜಿ ಮಾಡಲು ಸಾಧ್ಯವಾಗದೇ ರಸ್ತೆಯಲ್ಲಿ ಆಕಸ್ಮಿಕ ಸಾವನ್ನಪ್ಪಿದ್ದು ಸ್ಥಳೀಯರ ಕರೆಗೆ ತಕ್ಷಣ ಸ್ಪಂದಿಸಿದ ತಹಸೀಲ್ದಾರ ಎಸ್. ರವಿಚಂದ್ರ ಅವರು ಜಾನುವಾರುವಿನ ಅಂತ್ಯಕ್ರಿಯೆ ನಡೆಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಇಲ್ಲಿನ ಜಾಲಿ ರಸ್ತೆಯ ಮಾರ್ಗದಲ್ಲಿ ಜಾನುವಾರೊಂದು ( ದನ) ಆಕಸ್ಮಿಕವಾಗಿ ಸಾವನ್ನಪ್ಪಿದ್ದರ ಬಗ್ಗೆ ಅಲ್ಲಿನ ಸ್ಥಳೀಯರು ದೂರವಾಣಿ ಕರೆ ಮಾಡಿ ತಹಸೀಲ್ದಾರ ಅವರಿಗೆ ಮಾಹಿತಿ ತಿಳಿಸಿದ್ದಾರೆ. ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ ಅವರು ಜಾಲಿ ಪಟ್ಟಣ ಪಂಚಾಯತ ಆರೋಗ್ಯಾಧಿಕಾರಿ ಅಜಯ್ ಭಂಡಾರಕರ ಅವರಿಗೆ ತಿಳಿಸಿ ಪೌರ ಕಾರ್ಮಿಕರ ಸಹಾಯದಿಂದ ರಸ್ತೆಯಲ್ಲಿದ್ದ ಜಾನುವಾರನ್ನು ಸ್ಥಳಾಂತರ ನಡೆಸಿ ಬೇರೆ ಸ್ಥಳದಲ್ಲಿ ಜಾನುವಾರನ್ನು ಸಾಗಿಸಿ ಮಣ್ಣಲ್ಲಿ ಹೂತು ಅಂತ್ಯಕ್ರಿಯೆ ನಡೆಸಿದ್ದಾರೆ.

About Post Author

error: