October 5, 2024

Bhavana Tv

Its Your Channel

ಅಜೀಮ್ ಪ್ರೇಮ್‌ಜಿ ಹಾಗೂ ಸ್ಕೋಡ್‌ವೆಸ್ ಸೇವಾ ಸಂಸ್ಥೆಯಿoದ ೭೩೭ ಎಂಡೋಸೆಲ್ಪಾನ್ ಪಿಡಿತರಿಗೆ ಅಹಾರಧಾನ್ಯಗಳ ಕಿಟ್ ವಿತರಣೆ

ಭಟ್ಕಳ: ಶಿರಸಿಯ ಸ್ಕೋಡ್‌ವೆಸ್ ಸೇವಾ ಸಂಸ್ಥೆ, ವಿಪ್ರೋದ ಅಜೀಮ್ ಪ್ರೇಮ್‌ಜಿ ಫಿಲಾಂತರೋಪಿಕ್ ಇನಿಶಿಯೇಟಿವ್ಸ್ ಪ್ರಾಯೋಜಿಸಿದ ಸುಮಾರು ೧೦ ಲಕ್ಷ ರೂ. ಮೌಲ್ಯದ ಆಹಾರ ದಾನ್ಯಗಳ ಕಿಟ್‌ನ್ನು ಕ್ಷೇತ್ರದ ೭೩೭ ಎಂಡೋಸೆಲ್ಪಾನ್ ಪಿಡಿತರಿಗೆ ನೀಡಲು ಮುಂದಾಗಿದ್ದು ಭಟ್ಕಳ-ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕ ಸುನಿಲ್ ನಾಯ್ಕ ಅವರು ನಿತ್ಯೋಪಯೋಗಿ ವಸ್ತುಗಳ ಕಿಟ್‌ನ್ನು ಸಾಂಕೇತಿಕವಾಗಿ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಕೊರೊನಾ ಲಾಕ್‌ಡೌನ್ ಆದಾಗಿನಿಂದ ಜನತೆಯ ಸಂಕಷ್ಟಕ್ಕೆ ಸ್ಪಂಧಿಸುತ್ತಿದ್ದು ಈಗಾಗಲೇ ಕ್ಷೇತ್ರದಲ್ಲಿ ೧೫ ಸಾವಿರ ಕುಟುಂಬಗಳಿಗೆ ಅಗತ್ಯ ವಸ್ತುಗಳ ಕಿಟ್ ಪೂರೈಸಿದ್ದೇನೆ. ಇನ್ನೂ ಕೂಡಾ ಲಾಕ್‌ಡೌನ್ ಮುಗಿಯುವ ತನಕ ಈ ಕಾರ್ಯ ಮುಂದುವರಿಯಲಿದೆ ಎಂದರು.

ಸ್ಕೋಡ್‌ವೇಸ್ ಸಂಸ್ಥೆಯ ಅಧ್ಯಕ್ಷ ಹಾಗೂ ಶಿರಸಿ ಮಾರಿಕಾಂಬಾ ದೇವಸ್ಥಾನದ ಅಧ್ಯಕ್ಷ ವೆಂಕಟೇಶ ನಾಯ್ಕ ಅವರು ಮಾತನಾಡಿ ಜಿಲ್ಲೆಯಲ್ಲಿರುವ ಎಂಡೋಸಲ್ಫಾನ್ ಪೀಡಿತರಲ್ಲಿ ಭಟ್ಕಳ ತಾಲೂಕಿನಲ್ಲಿಯೇ ಅತಿ ಹೆಚ್ಚು ಜನರಿದ್ದು ಅವರ ಸಹಾಯಕ್ಕೆ ಬರುವಂತೆ ಶಾಸಕರು ಕೇಳಿಕೊಂಡAತೆ ಕನಿಷ್ಟ ಒಂದು ತಿಂಗಳಿಗಾಗುವಷ್ಟು ದಿನಸಿ ಸಾಮಗ್ರಿಗಳನ್ನು ವಿತರಿಸಬೇಕು ಎನ್ನುವ ಚಿಂತನೆ ನಡೆಸಿ ನಿತ್ಯೋಪಯೋಗಿ ವಸ್ತುಗಳನ್ನು ನೀಡಲಾಗಿದೆ ಎಂದರು. ತಮ್ಮ ಸಂಚಾರಿ ಆಸ್ಪತ್ರೆ ಘಟಕವು ಕಳೆದ ನಾಲ್ಕು ವರ್ಷಗಳಿಂದ ಇಲ್ಲಿ ಕಾರ್ಯಾಚರಣೆ ನಡೆಸುತ್ತಿದೆ. ಸರಕಾರದಿಂದ ಎಂಡೋ ಪೀಡಿತರಿಗೆ ಇನ್ನೂ ಹೆಚ್ಚಿನ ಸೌಲಭ್ಯ ದೊರೆಯಬೇಕಾಗಿದೆ. ಡೇ ಕೇರ್ ಸೆಂಟರ್, ಫಿಜಿಯೋಥೆರಫಿ, ಅನೇಕರನ್ನು ನೋಡಿಕೊಳ್ಳಲೂ ಕಷ್ಟವಿದ್ದು ಅಂತವರಿಗೆ ಸಹಾಯಕರನ್ನು ನೀಡುವುದಲ್ಲದೇ ಪ್ರತಿ ಹಂತದಲ್ಲಿಯೂ ಅವರಿಗೆ ನರೆವು ದೊರೆಯಬೇಕಾಗಿದೆ ಎಂದರು.

ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಎಸ್. ರವಿಚಂದ್ರ, ತಾಲೂಕಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಪ್ರಭಾಕರ ಚಿಕ್ಕನಮನೆ ಮಾತನಾಡಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ಸುಶೀಲಾ ಅವರು ಉಪಸ್ಥಿತರಿದ್ದರು. ಶಾಸಕರ ಆಪ್ತಕಾರ್ಯದರ್ಶಿ ಕರಿಯಪ್ಪ ನಾಯ್ಕ ಅವರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

error: