October 5, 2024

Bhavana Tv

Its Your Channel

ಕರೋನಾ ಸಂಕಷ್ಟದ ಸಮಯದಲ್ಲಿ ನೆರವಿಗೆ ಬಂದ ಹೊಸಾಕುಳಿ ಗ್ರಾಮಪಂಚಾಯತಿ ಅಧ್ಯಕ್ಷ.

ಹೊನ್ನಾವರ ; ಕರೋನಾ ಮಹಾಮಾರಿಯ ಸುರಕ್ಷತೆಗಾಗಿ ದೇಶದ್ಯಂತ ಲಾಕ್ ಡೌನ್ ಜಾರಿಯಲ್ಲಿದೆ. ಈ ಮಧ್ಯೆ ಅನೇಕ ಜನಪ್ರತಿನಿಧಿಗಳು, ಸಂಘ ಸಂಸ್ಥೆಯವರು ನೆರವಿಗೆ ಧಾವಿಸುತ್ತಿದ್ದಾರೆ. ಆದರೆ ಕೆಲವರು ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಳಿಕ ಕ್ಷೇತ್ರದತ್ತ ಮುಖ ಮಾಡದ ರಾಜಕಾರಣಿಯು ಇದ್ದಾರೆ.ಆದರೆ ಕರೋನಾ ಸಂಕಷ್ಟದ ಸಮಯದಲ್ಲಿ ತನ್ನನ್ನು ಗೆಲ್ಲಿಸಿದ್ದ ವಾರ್ಡಗೆ ನೆರವಾಗುವ ಮೂಲಕ ಮಾದರಿ ಜನಪ್ರತಿನಿಧಿಯಾದವರು ಹೊನ್ನಾವರ ತಾಲೂಕಿನ ಹೊಸಾಕುಳಿ ಪಂಚಾಯತ ಅಧ್ಯಕ್ಷರು. ಲಾಕ್ ಡೌನ್ ಜಾರಿಯಾದಗಿನಿಂದಲೂ ಪ್ರತಿನಿತ್ಯವು ಕಷ್ಟ ಎಂದು ಬಂದವರಿಗೆ ತನ್ನಿಂದಾಗುವ ನೆರವು ನೀಡುತ್ತ ಬಂದಿರುವ ಅಧ್ಯಕ್ಷ ಸುರೇಶ ಶೆಟ್ಟಿ ಗುರುವಾರದಂದು ವೈಯಕ್ತಿಕವಾಗಿ ತನ್ನ ವಾರ್ಡಿನ ಎಲ್ಲಾ ೩೫೦ ಮನೆಗಳಿಗೂ ದಿನಸಿ ಹಾಗೂ ತರಕಾರಿ ವಿತರಣೆ ಮಾಡಿ ಸಂಕಷ್ಟದ ಸಮಯದಲ್ಲಿ ನೆರವಾಗುವ ಮೂಲಕ ಮಾದರಿ ಜನಪ್ರತಿನಿಧಿಯಾಗಿದ್ದಾರೆ. ಈ ಹಿಂದೆಯೂ ಬರಗಾಲ, ನೆರೆ ಬಂದ ಸಂದರ್ಭದಲ್ಲಿಯೂ ಜನರ ಸಂಕಷ್ಟಕ್ಕೆ ಸಹಾಯಹಸ್ತ ನೀಡುತ್ತಾ ಬಂದಿದ್ದು ಇದೀಗ ಲಾಕ್ ಡೌನ ಸಮಯದಲ್ಲಿಯೂ ನೆರವಾಗುತ್ತಿದ್ದಾರೆ. ಅಧ್ಯಕ್ಷರ ಈ ಸಹಕಾರಕ್ಕೆ ವಾರ್ಡಿನೆಲ್ಲಡೆ ಪ್ರಶಂಸೆ ವ್ಯಕ್ತವಾಗುತ್ತಿದೆ.

ಈ ಸಂದರ್ಭದಲ್ಲಿ ಮಾತನಾಡಿ ನನ್ನಿಂದಾಗುವ ಸಹಾಯವನ್ನು ಜನತೆ ಸಂಕಷ್ಟದಲ್ಲಿರುವಾಗ ನೀಡುವ ಉದ್ದೇಶದಿಂದ ಎಲ್ಲಾ ೩೫೦ ಮನೆಗಳಿಗೂ ಕಿಟ್ ನೀಡಿದ್ದೇನೆ. ನನ್ನನ್ನು ಪಂಚಾಯತ ಅಧ್ಯಕ್ಷ ಮಾಡಲು ನನ್ನ ಮೇಲೆ ವಿಶ್ವಾಸವಿಟ್ಟು ಸದಸ್ಯನಾಗಿ ಆಯ್ಕೆ ಮಾಡಿರುದರಿಂದ ಅವರ ಕಷ್ಟದ ಸಂದರ್ಭದಲ್ಲಿ ನೆರವಾಗಿದ್ದೇನೆ. ಮುಂದೆಯು ಜನರೊಂದಿಗೆ ಇರಲಿದ್ದೇನೆ ಎಂದರು.
ಗುರುವಾರ ದಿನಸಿ ವಿತರಣೆ ಸಂದರ್ಭದಲ್ಲಿ ದಾಕ್ಷಾಯಣಿ ಸುರೇಶ ಶೆಟ್ಟಿ , ಮುಗ್ವಾ ಪಂಚಾಯತ ಅಧ್ಯಕ್ಷ ಟಿ.ಎಸ್.ಹೆಗಡೆ, ಎಂ.ಎಲ್.ಹೆಗಡೆ, ಸುಭಾಸ ಗೌಡ, ನಾಗೇಶ ನಾಯ್ಕ, ರಾಜು ಶೆಟ್ಟಿ, ಉಮೇಶ ಭಟ್, ರಮೇಶ ನಾಯ್ಕ ದೊಡ್ಡ ಹಿತ್ತಲು ಉಪಸ್ತಿತರಿದ್ದರು.

error: