October 5, 2024

Bhavana Tv

Its Your Channel

ಕುಮಟಾ ಪಟ್ಟಣದ ಮಹಾಸತಿ ಟ್ಯಾಕ್ಸಿ ಚಾಲಕ ಮಾಲಕ ಸಂಘದವರಿOದ ಉಪವಿಭಾಗಾಧಿಕಾರಿ ಅಜಿತ್ ಎಂ. ರೈ ಅವರಿಗೆ ಮನವಿ

ಕುಮಟಾ : ಲಾಕ್ ಡೌನ್‌ನಿಂದ ವಾಹನ ಒಡಾಟ ಬಂದ ಆದ ಹಿನ್ನೆಲೆ ಜೀವನೋಪಾಯ ಕಷ್ಟವಾಗಿದ್ದು ಆರ್ಥಿಕ ಸಮಸ್ಯೆಯಾಗಿದೆ. ಸರ್ಕಾರದಿಂದ ಸೂಕ್ತ ಸೌಲಭ್ಯ ಬೇಕು ಎಂದು ವಿನಂತಿಸಿ ಕುಮಟಾ ಪಟ್ಟಣದ ಮಹಾಸತಿ ಟ್ಯಾಕ್ಸಿ ಚಾಲಕ ಮಾಲಕ ಸಂಘದವರು ಉಪವಿಭಾಗಾಧಿಕಾರಿ ಅಜಿತ್ ಎಂ. ರೈ ಅವರಿಗೆ ಗುರುವಾರ ಮನವಿ ಸಲ್ಲಿಸಿದ್ದಾರೆ.

ಸಾಲ ಮಾಡಿ ವಾಹನ ಪಡೆದು ಬಾಡಿಗೆ ನಡೆಸುತ್ತಿರುವ ನಮಗೆ ಲಾಕ್ ಡೌನ್‌ನಿಂದ ತೀರಾ ಸಮಸ್ಯೆಯಾಗಿದೆ. ಸಾಲ ಮರುಪಾವತಿ, ವಿಮೆ, ತೆರಿಗೆ ತುಂಬಲಾಗದ ಸ್ಥಿತಿ ತಲುಪಿದ್ದೇವೆ. ಮುಖ್ಯವಾಗಿ ಮಂಗಲ ಕಾರ್ಯಗಳು, ಪ್ರವಾಸೋದ್ಯಮದ ಉತ್ತುಂಗದ ದಿನಗಳಲ್ಲೇ ಕೈಕಟ್ಟಿಕುಳಿತುಕೊಳ್ಳಬೇಕಾದ ಪರಿಸ್ಥಿತಿ ಬಂದೊದಗಿದ್ದರಿAದ ವರ್ಷದ ಪೂರ್ತಿ ಆದಾಯಕ್ಕೆ ಬರೆ ಬಿದ್ದಿದೆ. ಆದ್ದರಿಂದ ಸರ್ಕಾರ ಟ್ಯಾಕ್ಸಿ ಚಾಲಕ-ಮಾಲಕರ ಸಂಕಟವನ್ನರಿತು ಸವಲತ್ತು ಮಾಡಿಕೊಡಬೇಕು. ಬ್ಯಾಂಕ್ ಸಾಲ, ವಿಮೆ, ತೆರಿಗೆಗಳನ್ನು ಕನಿಷ್ಟ ೬ ತಿಂಗಳಮಟ್ಟಿಗೆ ಮನ್ನಾ ಮಾಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಬಳಿಕ ಸಂಘದ ಅಧ್ಯಕ್ಷ ನವೀನ ರಾಮಚಂದ್ರ ನಾಯ್ಕ ಸುದ್ದಿಗಾರರೊಂದಿಗೆ ಮಾತನಾಡಿ, ಸಂಚಾರವಿಲ್ಲದೇ ನಿಂತ ನಮ್ಮ ವಾಹನದ ಬ್ಯಾಟರಿ ಇನ್ನಿತರ ಸಾಮಗ್ರಿಗಳು ಹಾಳಾಗುತ್ತಿವೆ. ಸಮಸ್ಯೆ ಗಂಭೀರವಾಗುತ್ತಿದೆ. ಬದುಕು ಕಷ್ಟವಾಗಿದೆ. ನಮ್ಮ ಮನವಿಯನ್ನು ಉಪವಿಭಾಗಾಧಿಕಾರಿಗಳಿಗೆ ಮಾತ್ರವಲ್ಲದೇ ಶಾಸಕ ದಿನಕರ ಶೆಟ್ಟರಿಗೆ ಹಾಗೂ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರರಿಗೂ ಸಲ್ಲಿಸುತ್ತಿದ್ದೇವೆ ಎಂದು ತಿಳಿಸಿದರು.
ಈ ವೇಳೆ ಗಿರೀಶ ಸುಬ್ರಾಯ ನಾಯ್ಕ, ಗೌತಮ ಮಾಪಾರಿ, ರಾಘವೇಂದ್ರ ಮೊಗೇರ, ಸಂದೀಪ ಗೌಡ, ಸುಬ್ಬಯ್ಯ ಉಡದಂಗಿ, ಅಭಿಷೇಕ ನಾಯಕ ತಲಗೇರಿ, ಸಂತೋಷ ಶಾಂತಾರಾಮ ಭಂಡಾರಿ ಇದ್ದರು.

error: