March 22, 2023

Bhavana Tv

Its Your Channel

ಶಿಕ್ಷಕ ಆನಂದ ಆಚಾರ್ಯ ಸೇವಾ ನಿವೃತ್ತಿ

ಹೊನ್ನಾವರ ತಾಲೂಕಿನ ಬಳಕೂರಿನವರಾದ ಆನಂದ ಆಚಾರ್ಯ ಅವರು ಗುರುವಾರ ೩೮ ವರ್ಷಗಳ ಸುದೀರ್ಘ ಅವಧಿಯ ಶಿಕ್ಷಕ ವೃತ್ತಿಯಿಂದ ಸೇವಾ ನಿವೃತ್ತರಾಗಿದ್ದಾರೆ.

೧೯೮೨ ರಲ್ಲಿ ಉತ್ತರಕನ್ನಡ ಜಿಲ್ಲೆಯ ಹಳಿಯಾಳದಲ್ಲಿ ಪ್ರಾಥಮಿಕ ಶಾಲಾ ಸಹ ಶಿಕ್ಷಕರಾಗಿ ವೃತ್ತಿ ಜೀವನ ಆರಂಭಿಸಿದ ಇವರು ನಂತರ ಕಾರವಾರ, ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ, ಹೊನ್ನಾವರದ ಮುಗ್ವಾ, ಮಾಗೋಡ, ಚಿತ್ತಾರ ಮುಂತಾದ ಕಡೆ ಶೈಕ್ಷಣಿಕ ಸೇವೆ ಸಲ್ಲಿಸಿ ಇದೀಗ ಕೋಟೆಬೈಲ್ ಪ್ರೌಢಶಾಲೆಯ ಶಿಕ್ಷಕರಾಗಿರುವಾಗ ವಯೋನಿವೃತ್ತಿಹೊಂದಿದ್ದಾರೆ. ಗ್ರಾಮೀಣ ಭಾಗದ ಮಕ್ಕಳಿಗೂ ಸುಲಭವಾಗಿ ಅರ್ಥವಾಗುವಂತೆ ಇಂಗ್ಲೀಷ್ ಭಾಷೆಯನ್ನು ಬೋಧಿಸುತ್ತಿದ್ದ ಇವರು ಪಠ್ಯೇತರ ಚಟುವಟಿಕೆಗಳಲ್ಲಿಯೂ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ ಶಿಕ್ಷಕರ ಸಹ ಪಠ್ಯ ಚಟುವಟಿಕೆಯಲ್ಲಿ ರಾಜ್ಯಮಟ್ಟದಲ್ಲಿ ಪ್ರಶಸ್ತಿಗಳನ್ನು ಪಡೆದಿದ್ದಾರೆ.

ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿಯೂ ಇವರಿಗೆ ಒಲಿದಿದೆ. ಅವರ ಮಡದಿಯೂ ಶಿಕ್ಷಕಿಯಾಗಿದ್ದು ಮೂವರು ಮಕ್ಕಳಲ್ಲಿ ಹಿರಿಯರಾದ ವೃಂದಾ ಆಚಾರ್ಯ ಹಾಗೂ ಬೃಂದಾ ಆಚಾರ್ಯ ಐ.ಟಿ ಉದ್ಯೋಗಿಗಳಾಗಿದ್ದಾರೆ ಕಿರಿಯವಳಾದ ಬೃಂದಾ ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿಯೂ ತನ್ನ ಪ್ರತಿಭೆಯಿಂದ ಅವಕಾಶ ಗಿಟ್ಟಿಸಿಕೊಳ್ಳುತ್ತಿದ್ದಾಳೆ.

About Post Author

error: