ಯಲ್ಲಾಪುರ ತಾಲೂಕಿನ ಸಬಗೇರಿಯ ಗಂಗಾ ಭಟ್ ಎನ್ನುವವರು ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದರು. ಅವರು ಪುತ್ತೂರಿನ ವೈದ್ಯರಿಂದ ಚಿಕಿತ್ಸೆ ಪಡೆಯುತ್ತಿದ್ದರು. ಲಾಕ್ಡೌನ್ ನಿಮಿತ್ತ ಒಂದು ತಿಂಗಳಿoದ ಔಷಧಿ ಖಾಲಿಯಾಗಿತ್ತು. ಆದರೆ ಔಷಧಿ ಪಡೆಯಲು ಸಾಧ್ಯವಾಗಿರಲಿಲ್ಲ. ಕಳೆದ ಒಂದು ತಿಂಗಳಿoದ ಔಷಧಿ ಸಿಗದೆ ಇವರು ತೀವ್ರ ತೊಂದರೆಗೆ ಒಳಗಾಗಿದ್ದರು.
ಕಳೆದ ಹದಿನೈದು ದಿನಗಳ ಹಿಂದೆ ಪುತ್ತೂರಿನ ವೈದ್ಯರು ಇಂಡಿಯನ್ ಪೋಸ್ಟ್ ಮುಖಾಂತರ ಔಷಧಿಯನ್ನು ಕಳುಹಿಸಿಕೊಟ್ಟಿದ್ದರು. ಯಲ್ಲಾಪುರಕ್ಕೆ ಬರಬೇಕಾದ ಔಷಧಿ ಹುಬ್ಬಳ್ಳಿಗೆ ಹೋಗಿತ್ತು. ಔಷಧಿ ಎಲ್ಲಿ ತಲುಪಿದೆ ಅನ್ನೋದೇ ತಿಳಿಯದೆ ಗಂಗಾ ಭಟ್ ಅವರ ಕುಟುಂಬ ಕಂಗಾಲಾಗಿದ್ದರು. ಈ ವಿಷಯ ತಿಳಿದ ಯಲ್ಲಾಪುರದ ಸಾಹಿತಿಗಳು ಆಗಿರುವ ಗಣೇಶ ಪಿ ನಾಡೋರ್ ರವರು ಈ ವಿಷಯವನ್ನು ಬುಧವಾರ ಕೊರೋನಾ ಸ್ವಯಂ ಸೇವಕ ನಾಗರಾಜ ನಾಯ್ಕ ಗಮನಕ್ಕೆ ತಂದರು. ಕೂಡಲೆ ಕಾರ್ಯಪ್ರವರ್ತಕರಾದ ನಾಗರಾಜ ನಾಯ್ಕ ಪೋಸ್ಟ್ ಮಾಡಿರುವ ಡೀಟೇಲ್ಸ್ ತರಿಸಿಕೊಂಡು ಸ್ವಯಂ ಸೇವಕನಾಗಿ ಕಾರ್ಯನಿರ್ವಹಿಸುತ್ತಿರುವ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಕರ್ನಾಟಕ ಇದರ ವತಿಯಿಂದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕಾರ್ಯದರ್ಶಿಗಳಾಗಿರುವ ಕ್ಯಾ. ಮಣಿವಣ್ಣನ್ ರವರ ನೇತ್ರತ್ವದಲ್ಲಿ ಹುಟ್ಟುಹಾಕಿರುವ ಕರೋನಾ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ ನ ವಾರಿಯರ್ಸ್ ಮುಖ್ಯ ಸ್ವಯಂ ಸೇವಕಿಯವರಾದ ಸಂಜುಕ್ತಾ ಮೆಡಮ್ ರವರ ಗಮನಕ್ಕೆ ತಂದಾಗ ಸಂಜುಕ್ತ ಮೇಡಂ ಅವರು ಕೂಡಲೇ ಧಾರವಾಡದ ಪೋಸ್ಟ್ ಆಪೀಸ್ ಅಧಿಕಾರಿಗಳಿಗೆ ಸಂಪರ್ಕ ಮಾಡಿ ತಕ್ಷಣವೇ ಔಷಧವನ್ನು ಕಳಿಸಿಕೊಡುವಂತೆ ಸೂಚಿಸಿದ್ದರು. ಅದರಂತೆ ತಕ್ಷಣವೇ ಪೋಸ್ಟ್ ಅಧಿಕಾರಿಗಳು ಔಷಧಿಯನ್ನು ಯಲ್ಲಾಪುರಕ್ಕೆ ವಾಹನದ ಮೂಲಕ ಬುಧವಾರ ಕಳಿಸಿಕೊಟ್ಟಿದ್ದು ಗುರುವಾರ ಔಷಧದ ಪ್ಯಾಕೆಟ್ ಗಂಗಾ ಭಟ್ಟರಿಗೆ ತಲುಪಿದೆ.
ಇದರಿಂದ ಸಂತೋಷಗೊoಡಿರುವ ಗಂಗಾ ಭಟ್ ರವರು, ಅವರ ಬಂಧುಗಳು ಹಾಗೂ ಗಣೇಶ ಪಿ ನಾಡೋರ್ ರವರು ನಾಗರಾಜ ನಾಯ್ಕರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಈ ಮಾನವೀಯ ಕಾರ್ಯದಲ್ಲಿ ಸಹಕಾರ ನೀಡಿದ ಸಂಜುಕ್ತ ಮೇಡಂ ಹಾಗೂ ಕೊರೋನಾ ವಾರಿಯರ್ಸ್ ಟೀಮ್ ಗೆ ನಾಗರಾಜ ನಾಯಕ್ ಕೃತಜ್ಞತೆಯನ್ನು ಸಲ್ಲಿಸಿ. ಗಂಗಾ ಭಟ್ ರವರು ಆದಷ್ಟು ಬೇಗನೆ ಗುಣಮುಖರಾಗಲಿ ಎಂದು ದೇವರಲ್ಲಿ ಬೇಡಿಕೊಂಡಿದ್ದಾರೆ.
More Stories
ಕತಾರ್ ಗಾಲ್ಫರ್ ಟೋಸ್ಟ್ ಮಾಸ್ಟರ್ಸ್ ಕ್ಲಬ್ ನೂತನ ಪದಾಧಿಕಾರಿಗಳ ಆಯ್ಕೆ.
ಎಮ್ ಇ ಎಸ್ ಹೋರಾಟ ಸಮರ್ಥಿಸಿಕೊಂಡ ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ಹೇಳಿಕೆಯನ್ನು ಕರುನಾಡ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಎನ್. ದತ್ತಾ, ಖಂಡಿಸಿದ್ದಾರೆ.
ಮಲ್ಪೆ ಮೀನುಗರಿಕಾ ರೈತ ಉತ್ಪಾದಕ ಕಂಪನಿಯಿ0ದ ಮೀನುಗಾರಿಕಾ ಸಚಿವ ಮಂಕಾಳು ವೈದ್ಯರಿಗೆ ಮನವಿ.