May 23, 2024

Bhavana Tv

Its Your Channel

ಅಕ್ರಮ ಕಳ್ಳಭಟ್ಟಿ ಸಾರಾಯಿ ವಶಕ್ಕೆ ಪಡೆದು ಪ್ರಕರಣ ದಾಖಲು

ಹೊನ್ನಾವರ ತಾಲೂಕಿನ ಕೆಳಗಿನೂರು ಸಮೀಪದ ರಘುವೀರ್ ಗಣೇಶ ತಾಂಡೇಲ್ ನ ಮನೆಯ ಆವರಣದಲ್ಲಿ ಅಕ್ರಮವಾಗಿ ೧೬ ಲೀ. ದಷ್ಟು ಕಳ್ಳಭಟ್ಟಿ ಸರಾಯಿಯನ್ನು ಮಾರಾಟ ಮಾಡುವ ಉದ್ದೇಶದಿಂದ ದಾಸ್ತಾನು ಇಟ್ಟಿರುವುದನ್ನು ಪತ್ತೆ ಹಚ್ಚಿದ್ದು ಅಧಿಕಾರಿಗಳು ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ ಕಾರ್ಯಾಚರಣೆ ವೇಳೆ ಆರೋಪಿತನು ಪರಾರಿಯಾಗಿದ್ದು, ಆರೋಪಿ ಪತ್ತೆಗಾಗಿ ಬಲೆಬೀಸಿದ್ದಾರೆ. ಜಪ್ತುಪಡಿಸಿದ ಮುದ್ದೆ ಮಾಲುಗಳ ಒಟ್ಟು ಮೌಲ್ಯ ರೂ. ೪,೦೯೦ ಎಂದು ಅಂದಾಜಿಸಲಾಗಿದೆ.
ಹಿರಿಯ ಅಧಿಕಾರಿಗಳ ಮಾರ್ಗದರ್ಶನದ ಮೇರೆಗೆ ಹೊನ್ನಾವರ ಅಬಕಾರಿ ನಿರೀಕ್ಷಕರಾದ ದಾಮೋದರ್ ಎನ್ ನಾಯ್ಕ, ವಲಯ ಕಛೇರಿಯ ಅಬಕಾರಿ ಉಪ ನಿರೀಕ್ಷಕರಾದ ಎಸ್ ರವೀಂದ್ರನಾಥ್,ಅಬಕಾರಿ ರಕ್ಷಕರಾದ ಹಾಲಸಿದ್ದಪ್ಪ ಕುರಿಹುಲಿ, ಮುತ್ತೇಪ್ಪ ಬುಗಡಿಕಟ್ಟಿ, ಹಾಗೂ ವಾಹನ ಚಾಲಕ ಸಿದ್ರಾಮಪ್ಪ ಹೊಳೆಪ್ಪಗೋಳ ದಾಳಿ ನಡೆಸಿದ್ದಾರೆ

error: