April 20, 2024

Bhavana Tv

Its Your Channel

ಹೊನ್ನಾವರ ಪಟ್ಟಣದಲ್ಲಿ ರಾತ್ರಿ ಸಮಯದಲ್ಲಿ ಬೀದಿ ನಾಯಿಗಳಿಂದ ಆಕಳ ಮೇಲೆ ದಾಳಿ ಸ್ಥಳಿಯರಿಂದ ರಕ್ಷಣೆ. ಪಟ್ಟಣ ಪಂಚಾಯತಿಯವರು ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯ.

ಹೊನ್ನಾವರ : ಪಟ್ಟಣದ ಬಜಾರ ರಸ್ತೆ ಹೂವಿನ ಚೌಕ ಸಮೀಪದಿಂದ ಎಮ್ಮೆಪೈಲ್ ಕ್ರಾಸ್‌ವರೆಗೂ ಬೀದಿ ನಾಯಿಗಳ ಅಬ್ಬರದಿಂದ ಸಾರ್ವಜನಿಕರು ಸಂಚಾರ ನಡೆಸಲು ಭಯಪಡುತ್ತಿದ್ದಾರೆ. ಈ ಮಧ್ಯೆ ಬುಧವಾರ ರಾತ್ರಿ ಬೀದಿನಾಯಿಗಳು ಆಕಳನ್ನು ಬೆನ್ನಟ್ಟಿ ಗಂಭೀರವಾಗಿ ಗಾಯಗೊಳಿಸಿದ ಘಟನೆ ಬೆಳಕಿಗೆ ಬಂದಿದ್ದು ನಾಯಿಗಳ ಹಾವಳಿಗೆ ಸಾರ್ವಜನಿಕರು ಹೈರಾಣಿಗಿದ್ದಾರೆ. ಲಾಕ್ ಡೌನ್ ಹಿನ್ನಲೆಯಲ್ಲಿ ಜನಸಂಚಾರ ವಿರಳವಿರುದರಿಂದ ಒರ್ವರೆ ಸಂಚಾರ ನಡೆಸಲು ಭಯಪಡುವ ಸ್ಥಿತಿ ಒಂದಡೆಯಾದರೆ ಇನ್ನೊಂದಡೆ ನಾಯಿಗಳಿಂದ ಆಕಳುಗಳ ಮೇಲೆ ದಾಳಿ ನಡೆದಿರುದರಿಂದ ಇನ್ನಷ್ಟು ಭಯಪಡುವಂತಾಗಿದೆ. ಆಕಳ ಮೇಲೆ ದಾಳಿಯಾಗುತ್ತಿರುದನ್ನು ಗಮನಿಸಿದ ಸ್ಥಳಿಯ ನಿವಾಸಿ ಶೇಖರ್ ನಾಯಿಗಳ ಗುಂಪುಗಳನ್ನು ಓಡಿಸಿ ಆಕಳಿಗೆ ಪ್ರಥಮ ಚಿಕಿತ್ಸೆ ಕೊಡಿಸುವ ಮೂಲಕ ನೆರವಾದರು. ಬಳಿಕ ಸ್ಥಳಿಯರಿಗೆ ಮಾಹಿತಿ ನೀಡಿ ವಾರಸುದಾರರನ್ನು ಪತ್ತೆಹಚ್ಚಲು ಪ್ರಯತ್ನಿಸಿದಾದರೂ ವಾರಸದಾರರು ಪತ್ತೆಯಾಗದ ಹಿನ್ನಲೆಯಲ್ಲಿ ಪಟ್ಟಣ ಪಂಚಾಯತ ಸದಸ್ಯ ವಿಜು ಕಾಮತ್ ಇವರಿಗೆ ಹಸ್ತಾಂತರಿಸಿದ್ದಾರೆ. ಸದಸ್ಯ ವಿಜುಕಾಮತ್ ತಮ್ಮ ಮನೆಗೆ ಕರೆದ್ಯೊಯ್ದಿದ್ದು ಆರೈಕೆ ಮಾಡುವುದಲ್ಲದೇ ವಾರಸುದಾರರು ಪತ್ತೆಯಾದ ಬಳಿಕ ಹಸ್ತಾಂತರಿಸುದಾಗಿ ತಿಳಿಸಿದ್ದಾರೆ. ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ವಿಪರೀತವಾಗಿದ್ದು ಸಾರ್ವಜನಿಕರಿಗೆ ಸಮಸ್ಯೆಯಾಗುವ ಪೂರ್ವದಲ್ಲಿ ಪಟ್ಟಣ ಪಂಚಾಯತಿ ಅಧಿಕಾರಿಗಳು ಮುಂದೆಯಾದರೂ ಎಚ್ಚೆತ್ತು ಈ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

error: